ಕಾದಿಹೆ ದಾರಿ

ಕಾದಿಹೆ ದಾರಿ

ಕವನ

ಬಾರದ ನಲ್ಲನ ಚಿಂತೆ ಚೆಲುವೆಗೆ

ಹಾದಿಹ ಕಾದಿಹಳು ಅವನ ಬರುವಿಗೆ

ನೋಟ ನೆಟ್ಟಿದೆ ಆ ಬೀದಿಯೆಡೆಗೆ

ಗಾಳಿಯ ಸದ್ದಿಗೂ ನೋಟ ಆ ಕಡೆಗೆ.

 

ಹೊತ್ತು ಮುಳುಗುವ ಮೊದಲು ಬಂದಾನು

ಕನಸಿನೂರ ರವಿಕೆಯ ತಂದಾನು

ಕಂಡೂರ ಕಥೆಗಳ ನುಡಿದಾನು

ಆತನ ದಾರಿಯ ಬಿಡದೇ ಕಾದೇನು.

 

ಅವಸರಿಸದೆ ಮೆಲ್ಲನೆ ಬರಲವನು

ಮಲ್ಲಿಗೆಯ ಬುಟ್ಟಿಯಲಿ ತರಲವನು

ಒಲವ ತಂಗಿಯ ಕಾಣಲು ಹೋದವನು

ಬರಿಯ ನೋಟದಲ್ಲೇ ನನ್ನ ಸೆಳೆದವನು.

 

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ್