ಕಾಪಾಡು ಮಂಜುನಾಥ
ಕವನ
ದೇವಾ ಎಲ್ಲಿರುವೆ ನೀನು ಕೈಲಾಸವಾಸ
ಕಾಪಾಡು ನಮ್ಮನು ಮಂಜುನಾಥ ||ದೇವಾ ||
ನಂಬಿದೆ ನಿನ್ನನು ಮಹಾನಿಧಿಯೆ
ತುಂಬಿದೆ ಮನಕೆ ಆನಂದವನು |
ನಿನ್ನ ಮಹಿಮೆಯೊಂದೆ ಜಗದೊಡೆಯನೆ
ಇಂಬನು ನೀಡೆಮಗೆ ನಾಗಭರಣನೆ ||
ಕದ್ರಿಯಿಂದ ಬಂದೆ ಶುದ್ಧ ವಿಗ್ರಹನೆ
ಧರ್ಮಸ್ಥಳದಲಿ ನೆಲೆನಿಂತವನೆ |
ಸರ್ವ ಮಾನವರ ನೆಲೆಬೀಡು
ಸರ್ವ ಧರ್ಮಗಳ ಭಕ್ತರಿಗಾ ಶ್ರಯವು ||
ಭಯ ಭೀತಿ ಕಳೆವ ಅಣ್ಣಪ್ಪನ ನಾಡು
ಕರ್ಮವ ಕಳೆವ ನೇತ್ರಾವತಿಯ ಬೀಡು |
ಗಾಳಿಯು ನೀನೆ ಬೆಂಕಿಯು ನೀನೆ
ಭಕ್ತರ ರಕ್ಷಕ ಶಂಭೋ ಶಂಕರ ||
-ಸುಭಾಷಿಣಿ ಚಂದ್ರ
ಚಿತ್ರ್
