ಕಾಮನಬಿಲ್ಲು - ಒಂದು ಶಿಶು ಗೀತೆ

ಕಾಮನಬಿಲ್ಲು - ಒಂದು ಶಿಶು ಗೀತೆ

ಕವನ

*ಬಾನಿನಲಿ ನೋಡು ಬಣ್ಣಗಳ*

*ಲೆಕ್ಕ ಹಾಕುವೆಯಾ ಅವುಗಳ*

*ಮುಚ್ಚದೆಯೆ ನಿನ್ನಯ ಕಂಗಳ*

*ಚಾಚು ಬಾನಿನತ್ತ ನಿನ್ನ ಕೈಗಳ*

 

*ಕಲರವ ಮೂಡಿದೆ ನೋಟದಲಿ*

*ತಳಮಳ ನೋಡಿದು ಮನದಲಿ*

*ಚಿಲಿಪಿಲಿ ಹಕ್ಕಿಗಳ ನಾದದಲಿ*

*ಕಾಣಿಸಿದೆ ಮಂಜಿನ ಮುಸುಕಲಿ*

 

*ಆಗಸದಿ ಕಾಮನಬಿಲ್ಲಿನ ಚಿತ್ತಾರ*

*ನೀಡಿದೆ ಏಳು ಬಣ್ಣಗಳು ಚಪ್ಪರ*

*ನೋಡಲು ಅದು ಎಷ್ಟು ಸುಂದರ*

*ಸೆಳೆದಿದೆ ಮುಗ್ಧ ಮನಸಿನ ಚಿಣ್ಣರ*

 

*ಕೆಂಪು,ಹಸಿರು ಯಾವುದು ಬೇಕು*

*ಭೂಮಿಗೆ ಬರಲು ಕಾಯಬೇಕು*

*ಒಮ್ಮೆ ಕೈಯಲ್ಲಿ ಹಿಡಿದರೆ ಸಾಕು*

*ಬೇಗನೆ ಆಗಸಕೆ ಏಣಿಯ ಹಾಕು*

 

*ತುಂತುರು ಮಳೆಯದು ಬೀಳಲು*

*ರವಿಯ ಬೆಳಕಿನ ಮಂಪರು ಕೇಳು*

*ಹಬ್ಬಿದೆ ಬಾನಿನೆಲ್ಲೆಡೆ ಮೋಡಗಳು*

*ಮೂಡಿದೆ ಸುಂದರ ಕಾಮನಬಿಲ್ಲು*

 

 -ತೃಪ್ತಿ.ಜಿ.ಮಂಗಳೂರು

 

ಚಿತ್ರ್