*ಕಾಮನೆ*

*ಕಾಮನೆ*

ಕವನ

ನೀಲ ನಭವು ನಗುತಿದೆ

ಹಂಸವೊಂದು ಹಾರಿದೆ

ಗಗನ ಮುಟ್ಟುವಾಸೆಯಿಂದ

ಮೇಲೆ ಮೇಲೆ ಏರಿದೆ

 

ನಕ್ಷತ್ರವು ಚಂದ್ರನೊಡನೆ

ಕಣ್ಣಾ ಮುಚ್ಚೇ ಆಡಿದೆ

ನೈದಿಲೆಯು ಆತುರದಿ

ಶಶಿಯ ಸಂಗ ಬಯಸಿದೆ

 

ಚಿಗುರೆಲೆಗೂ ಇಬ್ಬನಿಗೂ

ತುಂಬ ಪ್ರೇಮವಾಗಿದೆ

ಮೊಗ್ಗುಗಳ ಮುದ್ದಿಸುತ

ಹಿಮ ಮಣಿಯು ನಲಿದಿದೆ

 

ಬೆಣ್ಣೆಯಂಥ ಬೆಳದಿಂಗಳು

ನೆರಳು ಬೆಳಕು ಚೆಲ್ಲಿದೆ

ಪ್ರೇಮಿಗಳ ಎದೆಯಲ್ಲಿ

ಕಾಮನೆಯ ಮೂಡಿಸಿದೆ

 

ಭಗ್ನಪ್ರೇಮಿ ಹೃದಯದಲ್ಲಿ

ವಿರಹದುರಿಯು ಜ್ವಲಿಸಿದೆ

ದೂರವಾದ ನಲ್ಲೆಗಾಗಿ

ಕಣ್ಣ ಹನಿಯು ಜಾರಿದೆ

 

ಖಾಲಿ ಮನದ ಒಂಟಿತನವು

ಶೋಕ ಗೀತೆ ಬರೆದಿದೆ

ಪ್ರಣಯ ರಾಗ ಹಾಡುವಂಥ

ಜೋಡಿಗಾಗಿ ಕಾದಿದೆ.

 

-*ಶಾಂತಾ ಜೆ ಅಳದಂಗಡಿ*

 

ಚಿತ್ರ್