ಕಾಮನ್ ವಿಮೆನ್​​ ವ್ಯಥೆ...ನಕ್ಲೆಸ್ ಕೊಟ್ಟವಳ ಕಥೆ..!

ಕಾಮನ್ ವಿಮೆನ್​​ ವ್ಯಥೆ...ನಕ್ಲೆಸ್ ಕೊಟ್ಟವಳ ಕಥೆ..!

ಕಾಮನ್ ವಿಮೆನ್ ಎಫೆಕ್ಟಿವ್ ಕಥೆ.ಸರಳ ಜೀವನವೇ ಈ ಚಿತ್ರ ಹೇಳೋ ಪಾಠ. ಎರಡು ಭಿನ್ನ ಪಾತ್ರಗಳ 20 ನಿಮಿಷದ ಕಥೆ. ಜಯದೀಪ್ ಸರ್ಕರ್ ಚಿತ್ರದ ನಿರ್ದೇಶಕರು. ಕೊಂಕಣಾ ಸೇನ್ ಶರ್ಮಾ ಚಿತ್ರದ ಕಥಾನಾಯಕಿ.ತಿಲೋತ್ತಮಾ ಶೋಮ್ ಗೃಹಿಣಿ ಪಾತ್ರಧಾರಿ.ಯುಟ್ಯೂಬ್​ ನಲ್ಲಿ ಈಗ ಇದರದ್ದೇ ಸಣ್ಣಗೆ ಸದ್ದು.ನಯನತಾರಾಸ್​ ನೆಕ್ಲೆಸ್ (Nayantara's Necklace) ಸಿನಿಮಾ ಹೆಸರು.ಹಿಂದಿ ಭಾಷೆಯ ಪರಿಣಾಮಕಾರಿ ಕಿರು ಚಿತ್ರ
-----
ಕಾಮನ್ ಮ್ಯಾನ್​ ಮೇಲೆ ಅನೇಕ ಚಿತ್ರ ಬಂದಿವೆ. ಆದರೆ, ಕಾಮೆನ್ ವಿಮೆನ್ ಕಥೆ ಏನೂ. ಆಕೆಯ ನೋವು-ನಲಿವು.ಕನಸ್ಸು ಮನಸ್ಸು. ಸಾಕಾರಗೊಳ್ಳದ ಆಸೆ. ಎಲ್ಲವೂ ಅಕೆಯೊಂದಿಗೆ ಕಳೆದು ಹೋಗುತ್ತವೆ. ಆದರೂ, ಕಾಮೆನ್ ವಿಮೆನ್ ಕನಸ್ಸು ನನಸಾದರೇ ಏನ್​ ಆಗುತ್ತದೆ. ಅದನ್ನ ಹೇಳೋ 20 ನಿಮಿಷದ ಒಂದು ಚಿತ್ರ ರೆಡಿಯಾಗಿದೆ. ಸಣ್ಣಗೆ ಸದ್ದೂ ಮಾಡ್ತಿದೆ. ಅದರ ಹೆಸರು ನಯನತಾರಾಳ ನೆಕ್ಲೆಸ್. ಬನ್ನಿ ಓದಿಕೊಳ್ಳೋಣ..

ನಯನತಾರಾಳ ನೆಕ್ಲೆಸ್. ಇದು ಇಬ್ಬರು ಭಿನ್ನ ಜೀವನ ಶೈಲಿಯ ಹೆಣ್ಮಕ್ಕಳ ಸಿನಿಮಾ. ಒಬ್ಬಾಕೆ ಸಾಧಾರಣ ಗೃಹಿಣಿ. ಮನೆ-ಮಕ್ಕಳು-ಗಂಡ ಅಂತ ಕಳೆದು ಹೋಗೊ ಹೆಣ್ಮಗಳು. ಮತ್ತೊಬ್ಬಾಕೆ, ಶ್ರೀಮಂತ ಜೀವನ ಶೈಲಿ ಅನುಭವಿಸಿದಾಕೆ. ಇಬ್ಬರ ಮಧ್ಯೆ ಎಲ್ಲೂ ಸಾಮತ್ಯೆಯಿಲ್ಲ. ಆದರೂ, ಅವರು ಫ್ರೆಂಡ್ಸ್ ಆಗ್ತಾರೆ. ಅವರ ಸಂಭಾಷಣೆ ಯಲ್ಲಿ ಕಾಮಾ, ಮುನಿಸಿ, ರೋಮ್ಯಾನ್ಸು ಎಲ್ಲವೂ ಬಂದು ಹೋಗುತ್ತವೆ.
ನಯನತಾರಾ ಪಾತ್ರ ಇಲ್ಲಿ ಕಥೆಯ ಕಥಾ ನಾಯಕಿ. ನಯನತಾರಾ ಹೇಳೋದನ್ನ ದಿನವೂ ಕೇಳಿಕೊಂಡೇ ಖುಷಿಪಡೋ ಗೃಹಿಣಿಯ ಪಾತ್ರ ಕಥೆಯ ಮತ್ತೊಂದು ಮಗ್ಗಲು. ಎರಡೂ ಪಾತ್ರದೊಂದಿಗೆ ಭಾರತೀಯ ಹೆಣ್ಮಕ್ಕಳ ಎರಡು ವಿಭಿನ್ನ ಜೀವನ ಶೈಲಿಯ ಚಿತ್ರಣ, ಇಲ್ಲಿ ಅವರ ಮಾತುಗಳಲ್ಲಿಯೇ ಅರ್ಥವಾಗುತ್ತಾ ಚಿತ್ರರೂಪ ಪಡೆಯುತ್ತದೆ.

ಚಿತ್ರದ ಕಥೆ ತೀರಾ ಸರಳವಾಗಿಯೇ ಸಾಗುತ್ತದೆ. ಮಹಿಳೆಯರಿಬ್ಬರ ಎಲ್ಲ ಥರದ ಮಾತುಗಳೂ ಇಲ್ಲಿ ಅತಿ ಸಹಜ ಅನಿಸುತ್ತವೆ. ಆದರೆ, ಆ ಮಾತುಗಳ ಪರಿಣಾಮ ನೋಡುಗರಿಗೆ ಮೊದಲು ಏನೂ ಅನಿಸೋದಿಲ್ಲ. ಆದರೆ, ಕೊಂಕಣಾ ಸೇನ್ ಶರ್ಮಾ ನಿಭಾಯಿಸಿರೋ ನಯನತಾರಾ ಪಾತ್ರ, ತಿಲೋತ್ತಮಾ ಶೋಮ್​ (Tilottama Shome) ನಿರ್ವಹಿಸಿರೋ ಗೃಹಿಣಿಯ ಪಾತ್ರವನ್ನ ಮೇಕೋವರ್ ಮಾಡಿದಾಗಲೇ, ಈ ಹೆಣ್ಮಕ್ಕಳ ಬದುಕಿನ ದಾಟಿ ಎತ್ತ ಸಾಗುತ್ತಿದೆ ಅಂತ ಅರ್ಥವಾಗುತ್ತದೆ.

ಗೃಹಿಣಿ ಪುಟ್ಟ ಬಟ್ಟೆ ತೊಟ್ಟ ಕೊರಳಲ್ಲಿ ನೆಕ್ಲೆಸ್ ಧರಿಸಿ ಚಮಕ್-ಧಮಕ್ ಲೈಫ್​ಗೆ ಹೊಂದಿಕೊಳ್ತಾಳೆ. ಆಕೆಯ ಪ್ರತಿ ಬದಲಾವಣೆನೂ ನಯನತಾರ ಹೇಳಿಕೊಟ್ಟ ಪಾಠವೇ ಆಗಿರುತ್ತದೆ. ಆ ಬದಲಾವಣೆಯ ಉತ್ತುಂಗ ಸ್ಥಿತಿಯಲ್ಲಿರೋವಾಗಲೇ ,ಒಂದು ಘಟನೆ ನಡೆಯುತ್ತದೆ. ಅದು ಆಲ್ ಮೋಸ್ಟ್ ಕಥೆಯ ಕ್ಲೈಮ್ಯಾಕ್ಸ್ ನಲ್ಲಿಯೇ ನಡೆಯೋದು. ಅದು ನಿಜಕ್ಕೂ ಬದಲಾದ ಗೃಹಿಣಿಯ ಮೇಲೆ ಈ ಥರ ಪರಿಣಾಮ ಬೀರುತ್ತದೆ. ಅಂದ್ರೆ, ಅಲ್ಲಿಯ ನಯನತಾರ ಡೆಟ್ ಆಗಿರುತ್ತದೆ. ಆಗ ಗೃಹಿಣಿ ನಯನತಾರಾ ಕಾರ್​ ಬಳಿ ಹೋಗ್ತಾಳೆ. ಒಳೆಗ ಕುಳಿತು ನಯನತಾರಾ ಕೊಟ್ಟ ನಕ್ಲೆಸ್​​ನನ್ನ ಕೊರಳಿಂದ ತೆಗೆದು, ಕಾರಿನ ಸೀಟ್ ಮೇಲೆ ಇಟ್ಟು ತನ್ನದು ಇಷ್ಟೆ ಅಂತ ತನ್ನ ಮನೆಯಡೆಗೆ ಹೊರಡುತ್ತಾಳೆ.

ನಯನತಾರಾಳ ನೆಕ್ಲೆಸ್ ಸ್ಟೋರಿ ಇಲ್ಲಿಗೆ ಮುಗಿಯುತ್ತದೆ. ನಿರ್ದೇಶಕ ಜಯದೀಪ್ ಸರ್ಕರ್​ (Jaydeep Sarkar ) ಕೇವಲ 20 ನಿಮಿಷದಲ್ಲಿ ಪರಿಣಾಮಕಾರಿ ಚಿತ್ರವೊಂದನ್ನ ಮಾಡಿಕೊಟ್ಟಿದ್ದಾರೆ. ಆದರೆ, ಈ ಒಂದು ಚಿತ್ರ ಜೀವನದ ಎರಡು ಮುಖಗಳನ್ನ ತೋರುತ್ತದೆ. ವೈಭವೋಪಿತವಾಗಿದ್ದ ಹೆಣ್ಮಗಳ ಕಷ್ಟದ ದಿನಗಳ ತೊಳಲಾಟ. ಮತ್ತು ಎಂದೂ ಸಿರಿವಂತಿಕೆಯನ್ನ ಕಾಣದವಳ, ವೈಭವದ ಕ್ಷಣಗಳನ್ನ ಕಟ್ಟಿಕೊಡುತ್ತದೆ. ಕೊನೆಗೆ ಇದು ಹೇಳೋದು ಒಂದೇ. ಸಿಂಪಲ್ ಲಿವಿಂಗ್ ಅಂಡ್ ಸಿಂಪಲ್ ಲಿವಿಂಗ್..
-ರೇವನ್ ಪಿ.ಜೇವೂರ್