ಕಾಯಬೇಡ.....
ಬರಹ
ಅರಿತ ಕಟುಸತ್ಯದ ಮದ್ಯೆಯು
ಕುಳಿತಿರುವೆ ಸುಮ್ಮನೆ,
ತಿಳಿಯದೇ ನಿನಗೆ,
ಇರುವುದೊಂದೀ ಜನ್ಮ
ಅರಿತವರಾರು ಮುಂದು ಹಿಂದಿನ ಜನ್ಮ
ಕಾಯುವದರಲ್ಲಿ ನಿನಗೇಕೆ
ಈ ರೀತಿಯ ವ್ಯಾಮೋಹ
ಕಾಯಬೇಡ ಅತೀಯಾಗಿ
ಅಬ್ಯಾಸವಾಗೀ ಮುಂದುವರೆದೀತು
ಮುಂದಿನ ಜನ್ಮದಲ್ಲೂ
ಕೇಳು ಅನುಭವದ ಮಾತು
ಕಾದು ವ್ಯರ್ಥವಾದವರ ಮಾತು
ಅದು ಬೆಂಕಿಯ ಉರಿಯಷ್ಟೇ
ಸತ್ಯ ಬದುಕೀ ಜೀವನ ನಿತ್ಯ