ಕಾಯುತಿದೆ ಭೂರಮೆಯು
ಕವನ
ಓ ಮುಂಜಾವಿನ ಉದಯರವಿಯೇ..
ನಿನ್ನ ಆಗಮನಕ್ಕೆ ಕಾಯುತಿದೆ ಭೂರಮೆಯು..
ನಿನ್ನ ಕಿರಣಗಳು ಬಿದ್ದೊಡನೆ ಶುರುವಾಗುವುದು
ಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವ..
ಹೂಮೊಗ್ಗುಗಳು ತನ್ನ ಮೈಮೇಲಿನ ಮಂಜಿನ
ಹನಿಗಳ ಹೊದಿಕೆಯನ್ನು ಕೊಡವಿ ಅರಳುವುದು..
ಬೆಳ್ಳಕ್ಕಿಗಳು ಸಂಭ್ರಮದಿಂದ ಹಾರುವುದು..
ಚಿಗುರೆಲೆಗಳಿಗೆ ಚಿಗುರೊಡೆವ ಸಂಭ್ರಮ..
ಎಲ್ಲದಕ್ಕೂ ನೀನೆ ಮೂಲಕಾರಣವಾದರೂ..
ತಡಮಾಡುವೆ ಏಕೆ,,ಮೂಡಬಾರದೆ ನೀ
ಮೂಡಣದ ಬಾಗಿಲಿನಿಂದ ಕತ್ತಲೆಂಬ ತೆರೆಯ ಸರಿದು
ಓ ಮುಂಜಾವಿನ ಉದಯರವಿಯೇ..
ನಿನ್ನ ಆಗಮನಕ್ಕೆ ಕಾಯುತಿದೆ ಭೂರಮೆಯು
Comments
ಉ: ಕಾಯುತಿದೆ ಭೂರಮೆಯು
In reply to ಉ: ಕಾಯುತಿದೆ ಭೂರಮೆಯು by raghumuliya
ಉ: ಕಾಯುತಿದೆ ಭೂರಮೆಯು