ಯಾವ ಸಖನು
ಬರುವನೇನು
ಕಾಯುತಿರುವೆ ಹೀಗೆ
ಜಲದಿ ಸೇರಿ
ನೀರಿನಾಟ
ಆಡಬೇಕು ಸೇರೆ
ಗೆಲ್ಲ ಹಿಡಿದು
ಕುಳಿತಿರುವೆನು
ತಪ್ತ ಮನವ ಕೇಳೆ
ತನುವ ತುಂಬ
ಅವನ ಚಿಂತೆ
ಕಾಡಿ ಬೇಡಿ ಸಾಗೆ
ಸಖಿಯೆ ನನ್ನ
ನೋವ ತಿಳಿದು
ಮಾತನಾಡು ಬಾರೆ
ಸಖನ ಸನಿಹ
ಬೇಕು ನನಗೆ
ಬರಲು ಬೇಗ ಹೇಳೆ
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ