ಕಾಯುತ್ತಿರುವೆ ನಿನಗಾಗಿ
ಕವನ
ಹುಣ್ಣಿಮೆ ಚಂದ್ರನ ರಾತ್ರಿಯಲಿ
ನಕ್ಷತ್ರಗಳು ಹೊಳೆಯುತಲಿ
ನಾ ಕಂಡೆ ನಿನ್ನ ಬಾನಿನಲಿ
ಕಾಯುತ್ತಿರುವೆ ನೀ ಪ್ರೀತಿಯಲಿ
ಧರೆಗಿಳಿದು ಬಂದೆ ಕನಸಿನಲಿ
ನನ್ನವನಾದೆ ನೀ ಮನಸಿನಲಿ
ಪ್ರೀತಿ ಮಾತು ಹೇಳಿದೆ ರಾತ್ರಿಯಲಿ
ಹೃದಯ ಕದ್ದು ಮಾಯವಾದೆ ಮುಂಜಾವಿನಲಿ
ನಾ ಹುಡುಕುತಿರುವೆ ಲೋಕದಲಿ
ಒಮ್ಮೆ ಕಾಣಿಸು ಸತ್ಯದಲಿ
ಜೀವದ ಗೆಳೆಯ ನೀ ಸ್ನೇಹದಲಿ
ಬಾ ಪ್ರೀತಿಸುವಾ ಹೃದಯದಲಿ
Comments
ಉ: ಕಾಯುತ್ತಿರುವೆ ನಿನಗಾಗಿ
In reply to ಉ: ಕಾಯುತ್ತಿರುವೆ ನಿನಗಾಗಿ by Manasa G N
ಉ: ಕಾಯುತ್ತಿರುವೆ ನಿನಗಾಗಿ
In reply to ಉ: ಕಾಯುತ್ತಿರುವೆ ನಿನಗಾಗಿ by Manasa G N
ಉ: ಕಾಯುತ್ತಿರುವೆ ನಿನಗಾಗಿ