ಕಾಯ್ಕಿಣಿಯ ಕಂಡೆ
ಕವನ
ನಾ ಆರಾಧಿಸುವ ಕವಿಯ ಮುಂದೆ
ಮಾತಾಡಲಾಗಲಿಲ್ಲ ಆ ದಿನ ನನಗೆ
ಸುಮ್ಮನಿದ್ದ ನನ್ನಲ್ಲಿ ಕವನಗಳ ಕದನ
ಅಲ್ಲಿ ನನ್ನೊಳಗೆ ಮಾತುಗಳ ಸರಿಗಮ, ಸಮಾಗಮ!!
ನಾನು ಹುಡುಕುತ್ತಿದ್ದ ಜಾಡು ಸೇರಿದ್ದು
ಒಂದು ಪುಸ್ತಕದ ಅಂಗಡಿಯ
ರೆಪ್ಪೆಗಳು ಕದಲದೆ ಹುಡುಕ್ಕಿದ್ದು
ಆ ಕವಿಯ ಒಂದು ಸಣ್ಣ ಜಲಕ್ ನ !!!
ಟಿಕ್ ಟಿಕ್ ಓಡುತ್ತಿದ್ದ ಗಡಿಯಾರದ ಸದ್ದಿನೊಡನೆ
ನನ್ನ ಹೃದಯದ ಮಿಡಿತದ ಶಬ್ದಮಾಲೆ
ಸಂತಸದ ಆ ಸಂದರ್ಭದಲ್ಲಿ
ನಾ ತೂಗಿಕೊಂಡೆ ಹರುಷದ ಜೋಕಲೆ
ಕೊನೆಗೆ ಕಂಡೆ ಆ " ಚಾರ್ ಮಿನಾರ್ " ವ್ಯಕ್ತಿಯ
ಹಿಂದಿಂದ ಕಂಡಂತಾಯ್ತು ಸೂರ್ಯ ಕಾಂತಿಯ
ನಾನು ಸ್ಪರ್ಶಿಸಿದೆ, ಸೂರ್ಯಕಾಂತಿ ಹೂ ತರದಿ
ಮರೆತು ಹೋದೆ ಪದಗಳ, ಸೌಭಾಗ್ಯದ ಸುಳಿಯಲಿ
ಅವರ ಕಂಡ ಆ ಸಂತಸವ ಮನದಲ್ಲಿ ತುಂಬಿಕೊಂಡೆ
ಹಸ್ತಾಕ್ಷರವ ವರವಾಗಿ ಪಡೆದೆ,
ಅರ್ಪಿಸಿದೆ ಕವನಗಳ ಅವರ ಮಡಿಲಲಿ
ಕಾಯುತಲಿರುವೆ ಈಗಲೂ ಅವರ ಕಾವ್ಯಮಯ ಉತ್ತರಗಳಿಗೆ!!!
Comments
ಅಭಿನಂದನೆಗಳು ಮೃಣಾಲಿನಿ ಅವರೇ.
ಅಭಿನಂದನೆಗಳು ಮೃಣಾಲಿನಿ ಅವರೇ.
ಆ ಅವಕಾಶಕ್ಕಾಗಿ ನಾನೂ ಕಾಯುತ್ತಿದ್ದೇನೆ.
In reply to ಅಭಿನಂದನೆಗಳು ಮೃಣಾಲಿನಿ ಅವರೇ. by kpbolumbu
ನಿಮ್ಮ ನೆಚ್ಚಿನ ಕವಿಯವರಿಂದ ನಿಮಗೆ
ನಿಮ್ಮ ನೆಚ್ಚಿನ ಕವಿಯವರಿಂದ ನಿಮಗೆ ಉತ್ತರ ಬರಲಿ ಎಂದು ಹಾರೈಸುತ್ತೇನೆ.
In reply to ನಿಮ್ಮ ನೆಚ್ಚಿನ ಕವಿಯವರಿಂದ ನಿಮಗೆ by Maalu
ಧನ್ಯವಾದಗಳು
ಧನ್ಯವಾದಗಳು
In reply to ಅಭಿನಂದನೆಗಳು ಮೃಣಾಲಿನಿ ಅವರೇ. by kpbolumbu
ಧನ್ಯವಾದಗಳು
ಧನ್ಯವಾದಗಳು
ಕಾಯ್ಕಿಣಿ ಯವರ ಭೇಟಿಗಾಗಿ
ಕಾಯ್ಕಿಣಿ ಯವರ ಭೇಟಿಗಾಗಿ ಹಂಬಲಿಸುವರಲ್ಲಿ ನಾನು ಒಬ್ಬ.. ಯಾವಾಗ ಆ ಸುಯೋಗ ಒದಗಿ ಬರುವುದೋ ಯಾರಿಗೆ ಗೊತ್ತು ...!!!