ಕಾರ್ತಿಕೇಯ ಅನವರತ ರಕ್ಷಿಸು

ಕಾರ್ತಿಕೇಯ ಅನವರತ ರಕ್ಷಿಸು

ಕವನ

ಶಿವ ಪಾರ್ವತಿಯರ ಮುದ್ದಿನ ಕಂದ

ಕೈಲಾಸಕ್ಷೇತ್ರದ ಮಹಿಮಾನಂದ

ಕೃತ್ತಿಕಾ ದೇವತೆಗಳ ಹಾಲುಂಡು ಬೆಳೆದೆ

ಆರು ಮೊಗದವನಾಗಿ ಜಗದಿ ಬೆಳೆದೆ//

 

ಲೋಕ ಕಂಟಕ ದುರುಳ ತಾರಕನ

ಉಪಟಳವ ಮೆಟ್ಟಿ ಮರ್ಧಿಸಿದೆ

ಜಗದ್ರಕ್ಷಕ ಕೋಟಿಜನ್ಮ ಪುಣ್ಯಧರ

ಮಹಾಸೇನ ಜ್ಞಾನಶಕ್ತಿ ದಾತ//

 

ವಲ್ಲೀಶನಾಥ ಶೇಷಗಳೊಡೆಯ ಸ್ವಾಮಿ

ಜಗದಾದಿವಂದಿತ ಮಹಾಮಹಿಮ ನೀನು

ಭಕ್ತಜನಪ್ರಿಯ ಷಡಾನನ ದೇವ

ಸುರಗಣ ಪೂಜಿತ ಸ್ಕಂದ ಶಕ್ತಿ//

 

ಕಾರ್ತಿಕೇಯ ಶೃಂಗಾರ ಮೂರುತಿ ನೀನು

ನವಿಲೇರಿ ಭೂಪ್ರದಕ್ಷಿಣೆ ಗೈದವನು ನೀನು

ಸರ್ವಾಭೀಷ್ಟ ಫಲಪ್ರದಾತನು ನೀನು

ಅನವರತ ರಕ್ಷಿಸಿ ಕಾಪಾಡು ನೀನು//

 

ಷಷ್ಠಿ ದಿನದಲಿ ವಿಶೇಷ ಪೂಜೆಯು ನಿನಗೆ

ಸರ್ಪದೋಷವ ನಿವಾರಿಪ ಮಹಿಮ ನೀನು

ನಿನ್ನಂಘ್ರಿಗಳ ಪಿಡಿದು ಬೇಡುವೆ ನಾನು

 ದಯಾಳು ಹರಸು ಶ್ರೀ ಸುಬ್ರಹ್ಮಣ್ಯಸ್ವಾಮಿ ನೀನು//

 

-ರತ್ನಾ ಭಟ್ ತಲಂಜೇರಿ

 

ಚಿತ್ರ್