ಕಾರ್ಪೊರೇಟ್ ಉದ್ಯೋಗಿಯ ನೈತಿಕತೆ

ಕಾರ್ಪೊರೇಟ್ ಉದ್ಯೋಗಿಯ ನೈತಿಕತೆ

 

ಈಗಿನ ಕಾಲದಲ್ಲಿ ಓದಿರುವ ವಿದ್ಯೆಗೆ ತಕ್ಕ ಕೆಲಸ ಸಿಗುವುದು ಬಹಳ ಕಷ್ಟ ಎಂಬ ಮಾತು ಹಲವು ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಬೆಂಗಳೂರಿನಂತಹ ನಗರಗಳಲ್ಲಿ ಕಾರ್ಪೊರೇಟ್, ಬಿ.ಪಿ. (Business Process Outsourcingಗಳಂತಹ ಕಂಪನಿಗಳು ಬಂದ ಮೇಲೆ ಮಾತು ಸ್ವಲ್ಪ ಕಡಿಮೆ ಆಗಿದೆ. ಇದರ ಬದಲು ಸಿಕ್ಕಿರುವ ಕೆಲಸ ಉಳಿಸಿಕೊಳ್ಳುವುದು ಬಹಳ ಕಷ್ಟ ಎಂಬ ಮಾತು ಪ್ರಚಲಿತವಾಗಿದೆ. ಹೌದು! ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಸಿಕ್ಕುವುದು ಎಷ್ಟು ಸುಲಭವೋ ಅಷ್ಟೇ ಸುಲಭವಾಗಿ ಕೆಲಸ ಕಳೆದುಕೊಳ್ಳುವುದು ಸಾಮಾನ್ಯ ಸಂಗತಿ. ರಾತ್ರೋ ರಾತ್ರಿ ಕಂಪನಿ ಮುಚ್ಚಿ ಹೋಗಿ ನೂರಾರು ಕೆಲಸಗಾರರು ಕೆಲಸ ಕಳೆದುಕೊಂಡು ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ರೀತಿ ರಾತ್ರೋ ರಾತ್ರಿ ಕಂಪನಿಗಳು ಶಟ್ ಡೌನ್ ಆಗಲು ಅದರದ್ದೇ ಆದ ಹಲವಾರು ಕಾರಣಗಳಿರುತ್ತವೆ. ಆದರೆ ಇದರಲ್ಲಿ ಕಂಪನಿಯ ಕೆಲಸಗಾರರ ಪಾತ್ರವೇನು? ಯಾವ ತಪ್ಪಿಗೆ ಕೆಲಸ ಕಳೆದುಕೊಂಡೆ? ನಾಳೆಯಿಂದ ಏನು ಮಾಡುವುದು? ಎಂದು ಬಹಳಷ್ಟು ಕೆಲಸಗಾರರು ಯೋಚಿಸುತ್ತಾರೆ. ಆದರೆ, ಇದರಲ್ಲಿ ಕೆಲಸಗಾರರ ಪಾತ್ರವು ಖಂಡಿತ ಇರುತ್ತದೆ.

ಒಂದು ದೊಡ್ಡ ಕಂಪನಿ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಟ್ಟ ಮೇಲೆ ಉತ್ಪನ್ನವನ್ನು ತನ್ನ ಗ್ರಾಹಕರು ಹೇಗೆ ಸ್ವೀಕರಿಸಿದ್ದಾರೆ ಎಂದು ತಿಳಿದುಕೊಳ್ಳಲು ಬಯಸುತ್ತದೆ ಮತ್ತು ತನ್ನ ಗ್ರಾಹಕರಿಗೆ ಉತ್ತಮ ಸೇವೆಯನು ಸಲ್ಲಿಸಿ ಗ್ರಾಹಕರ ವಿಶ್ವಾಸವನ್ನು ನಿರೀಕ್ಷಿಸುತ್ತವೆ. ಕಂಪನಿಗಳು ಬಿ.ಪಿ.. ಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತವೆ. ಬಿ.ಪಿ. ಗಳು ನೂರಾರು ಉದ್ಯೋಗ ಸೃಷ್ಟಿಸಿ ತನ್ನ ಉದ್ಯೋಗಿಗಳ ಮುಖಾಂತರ ಕಂಪನಿಯ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತವೆ. ಕಂಪನಿಗೆ ಬಿ.ಪಿ. ಗಳಿಂದ ಬೇಕಾಗಿರುವುದು ಗ್ರಾಹಕರ ವಿಶ್ವಾಸ (Customer Satisfaction) ಮತ್ತು ಸೇವೆಯ ಗುಣಮಟ್ಟ (Quality of Service). ಬಿ.ಪಿ. ಗಳು ಗ್ರಾಹಕರೊಂದಿಗೆ ಉತ್ತಮ ಸಂವಹನದ ಮೂಲಕ ಕಂಪನಿಯ ಉತ್ಪನ್ನಗಳ ಗುಣಮಟ್ಟ ಸುಧಾರಿಸಲು ಮುಂದಾಗುತ್ತವೆ. ಬಿ.ಪಿ. ಉದ್ಯೋಗಿಯು ಇಂತಹ ಗ್ರಾಹಕರೊಟ್ಟಿಗೆ ಸಂವಹಿಸಿ ಅವರಿಗೆ ಬೇಕಾದಂತಹ ಸೇವೆಯನ್ನು ಒದಗಿಸಿ ಗ್ರಾಹಕರಿಗೆ ಕಂಪನಿಯ ಮೇಲೆ ಮತ್ತು ಉತ್ಪನ್ನದ ಮೇಲೆ ಉತ್ತಮ ವಿಶ್ವಾಸ ಮೂಡುವಂತೆ ಮಾಡುವುದು ಉದ್ಯೋಗಿಯ ಕರ್ತವ್ಯ.

ಇಂತಹ ಬಿ.ಪಿ. ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕೈತುಂಬಾ ಸಂಬಳ ಮತ್ತು ಇತರೆ ಸೌಲಭ್ಯಗಳಿರುತ್ತವೆ. ಆದರೆ ಬೆನ್ನು ಕೆರೆದುಕೊಳ್ಳಲೂ ಪುರುಸೊತ್ತಿಲ್ಲದ ಹಾಗೆ ಕೆಲಸ ಸಹ ಇರುತ್ತವೆ. ಕಾನೂನಿನ ಪ್ರಕಾರ ಇಂತಹ ಉದ್ಯೋಗಿಗಳಿಗೆ ದಿನದಲ್ಲಿ ಘಂಟೆ ಕೆಲಸ ಅದರಲ್ಲಿ ಘಂಟೆ ವಿರಾಮ ಇರುತ್ತದೆ. ಒಟ್ಟು ಘಂಟೆ ಕೆಲಸ ಮಾಡಬೇಕಾಗುತ್ತದೆ. ಫೋನಿನ ಮೂಲಕ ಅಥವಾ ಇಮೇಲ್ ಗಳ ಮೂಲಕ ಗ್ರಾಹಕರೊಂದಿಗೆ ಸಂವಹಿಸಿ ಸಂಬಂಧಪಟ್ಟ ಉತ್ಪನ್ನಗಳ ಬಗ್ಗೆ ಅವರು ಕೇಳುವ ಯಾವುದೇ ಮಾಹಿತಿ ಅಥವಾ ಸೇವೆಯನ್ನು ಒದಗಿಸಬೇಕಾಗುತ್ತದೆ. ಉದ್ಯೋಗಿಯು ಎಷ್ಟು ಉತ್ತಮ ಸೇವೆಯನ್ನು ನೀಡುತ್ತಾನೋ, ಅಷ್ಟು ಲಾಭ ಕಂಪನಿಗಳಿಗೆ. ಇದರಿಂದ ಉತ್ಪನ್ನದ ಮಾರುಕಟ್ಟೆ ವಿಸ್ತರಿಸಿ ಬಿ.ಪಿ. ಗಳಲ್ಲಿ ಉದ್ಯೋಗಿಗಳ ಸಂಖ್ಯೆಯು ಹೆಚ್ಚುತ್ತದೆ. ಇದಕ್ಕೆ ಕಾರ್ಪೊರೇಟ್ ಭಾಷೆಯಲ್ಲಿ Ramp Up ಎನ್ನುತ್ತಾರೆ. ಕಳಪೆ ಮಟ್ಟದ ಸೇವೆ ಒದಗಿಸಿದರೆ ಕಂಪನಿ ದಿವಾಳಿಯಾಗಿ ಸಂಸ್ಥೆಯು ಬಿ.ಪಿ. ಗಳೊಂದಿಗೆ ತಮ್ಮ ಒಪ್ಪಂದವನ್ನು ಹಿಂಪಡೆಯುತ್ತವೆ. ಇದರಿಂದ ಬಿ.ಪಿ. ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ Ramp Down ಎನ್ನುತ್ತಾರೆ.

ಸಾಮಾನ್ಯವಾಗಿ ಇಂತಹ ಉದ್ಯೋಗಿಗಳಿಗೆ ಕೆಲಸ ಕೊಡುವಾಗ ಹಲವಾರು ರೀತಿಯ ಸಂದರ್ಶನಗಳಿರುತ್ತವೆ. ಉದ್ಯೋಗಾಕಾಂಕ್ಷಿಯ ಪ್ರತಿಭೆ ಯಾವ ಗುಣಮಟ್ಟದಲ್ಲಿದೆ ಎಂದು ತಿಳಿದುಕೊಳ್ಳುವ ಹಲವಾರು ಪರೀಕ್ಷೆಗಳಿರುತ್ತವೆ. ಎಲ್ಲಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಮೇಲೆ ಉದ್ಯೋಗಾಕಾಂಕ್ಷಿಗೆ ಕೆಲಸ ಸಿಗುತ್ತದೆ. ಅದೂ ಸಹ ಬಿ.ಪಿ. ಸಂಸ್ಥೆಯ ಹಲವಾರು ನಿಭಂದನೆಯ ಮೇಲೆ.

ಈಗ ಮುಖ್ಯವಾದ ವಿಷಯಕ್ಕೆ ಬರೋಣ. ಕಾರ್ಮಿಕ ಕಾನೂನಿನ ಪ್ರಕಾರ ಘಂಟೆ ಕೆಲಸ ಮಾಡಬೇಕಾಗಿದ್ದರೂ ಸಹ ಬಿ.ಪಿ. ಸಂಸ್ಥೆಗಳು ತಮ್ಮ ಉದ್ಯೋಗಿಗಳಿಂದ ಹೆಚ್ಚು ಕೆಲಸವನ್ನು ನಿರೀಕ್ಷಿಸುತ್ತವೆ. ಪ್ರತಿ ಕೆಲಸಗಾರರಿಗೆ ಟಾರ್ಗೆಟ್ ಇರುತ್ತವೆ. ಟಾರ್ಗೆಟ್ ಅನ್ನು ಕೆಲಸಗಾರ ಘಂಟೆಯ ಒಳಗೆ ಮುಗಿಸಲೇಬೇಕು. ಇಲ್ಲವಾದಲ್ಲಿ ಕೆಲಸಗಾರನ ಕಾರ್ಯವೈಖರಿಯ ವೇಗದ ಮೇಲೆ ಅವನ ಕೆಲಸದ ಅವಧಿ ವಿಸ್ತರಿಸುತ್ತದೆ. ಕೆಲವು ಸಲ ೧೦ ರಿಂದ ೧೨ ಘಂಟೆ ಕೆಲಸ ಮಾಡಬೇಕಾಗುತ್ತದೆ. ಇದು ಅನಧಿಕೃತವಾಗಿ ಕೆಲಸಗಾರನಿಂದ ಸಂಸ್ಥೆಯು ನಿರೀಕ್ಷಿಸುವ ಕೆಲಸವಾಗಿರುತ್ತದೆ.

ಹೊಸದಾಗಿ ಕೆಲಸಕ್ಕೆ ಸೇರಿರುವ ಕೆಲಸಗಾರ ಈ ಅನಧಿಕೃತ ಒಪ್ಪಂದಕ್ಕೆ ಹೊಂದಿಕೊಳ್ಳುವುದು ಅವನ ಮನಸ್ಥಿತಿಯ ಮೇಲೆ ನಿರ್ಧಾರವಾಗುತ್ತದೆ. ಅನೇಕ ಕೆಲಸಗಾರರು ತಮಗಿರುವ ವೈಯಕ್ತಿಕ ಕಷ್ಟಗಳು ಮತ್ತು ಜವಾಬ್ದಾರಿಗಳಿಂದ ಕೆಲಸ ಮತ್ತು ಸಂಬಳವನ್ನು ಕಳೆದುಕೊಳ್ಳಲು ಇಚ್ಛಿಸದೆ ೧೦ ರಿಂದ ೧೨ ಅಥವಾ ೧೩ ಘಂಟೆ ಕೆಲಸ ಮಾಡುತ್ತಾರೆ. ಆದರೆ ಬಂಡಾಯ ಪ್ರವೃತ್ತಿಯ ಕೆಲಸಗಾರರು ಈ ಅನಧಿಕೃತ ಕೆಲಸಕ್ಕೆ ಒಪ್ಪಿಕೊಳ್ಳುವುದಿಲ್ಲ. ಕಾರ್ಮಿಕ ಕಾನೂನಿನ ಬಗ್ಗೆ ಮಾತನಾಡುತ್ತಾರೆ. ನಾವು ಏಕೆ ಅಧಿಕೃತ ಸಮಯಕ್ಕಿಂತ ಹೆಚ್ಚಾಗಿ ಕೆಲಸ ಮಾಡಬೇಕು ಎಂದು ಪ್ರಶ್ನೆ ಮಾಡುತ್ತಾರೆ.  ಅವರಿಗೆ ನಿರ್ವಹಿಸಲಾಗಿರುವ ಟಾರ್ಗೆಟ್ ಗಿಂತ ಕಾನೂನು ಒದಗಿಸುವ ಲಾಭವೇ ಮುಖ್ಯ. ಎಷ್ಟೋ ಸಲ ಇಂತಹ ಬಂಡಾಯಗಾರರೇ ಬೇಗ ಕೆಲಸ ಕಳೆದುಕೊಳ್ಳುವುದು. ಆದರೆ, ನಿಗದಿತ ಸಮಯದಲ್ಲೇ ಟಾರ್ಗೆಟ್ ಮುಗಿಸಿ ಲಾಗ್ಔಟ್ ಆಗುವ ಕೆಲಸಗಾರರೂ ಇರುತ್ತಾರೆ. ಸಾಮಾನ್ಯವಾಗಿ ಇಂತಹ ಕೆಲಸಗಾರರೇ ತಮ್ಮ ಸಂಸ್ಥೆಯಲ್ಲಿ ಮುಂದುವರಿದು ಪ್ರಮೋಷನ್ ಪಡೆದು ಉತ್ತಮ ದರ್ಜೆಯ ಕೆಲಸಗಾರರು ಎನ್ನಿಸಿಕೊಳ್ಳುವುದು.

ಮುಖ್ಯ ಸಮಸ್ಯೆ ಇರುವುದು ಇಲ್ಲಿ. ಕೆಲವು ಕೆಲಸಗಾರರಿರುತ್ತಾರೆ. ಇವರಿಗೆ ಕೆಲಸ ಮಾಡುವ ಮನಸ್ಸಿರುವುದಿಲ್ಲ. ಆದರೆ ಸಂಬಳ ಬೇಕು, ನಿಗದಿತ ಅವಧಿಯಲ್ಲೇ ಲಾಗ್ಔಟ್ ಆಗಬೇಕು. ಯಾರೂ ತಮ್ಮನ್ನು ಪ್ರಶ್ನಿಸಬಾರದು. ಅದರ ಜೊತೆಗೆ ಸರಿಯಾಗಿ ಕೆಲಸ ಮಾಡಿ ಉತ್ತಮ ದರ್ಜೆಗೆ ಏರುವ ಉದ್ಯೋಗಿಗಳ ಬಗ್ಗೆ ವದಂತಿ ಹರಡುವ ರಾಜಕೀಯ ಹುನ್ನಾರಗಳಲ್ಲಿ ಪಾಲ್ಗೊಳ್ಳಬೇಕು. ಅದರಲ್ಲಿಯೂ ಇಂತಹ ವ್ಯಕ್ತಿಗಳು ಮೇಲ್ವಿಚಾರಕ ಹುದ್ದೆಯಲ್ಲಿದ್ದರಂತೂ ಮುಗಿದೇ ಹೋಯಿತು. ಕೆಲಸಗಾರರನ್ನು ತಾವು ಸಾಕಿರುವ ನಾಯಿಗಳನ್ನು ನಡೆಸಿಕೊಳ್ಳುವಂತೆ ನಡೆಸಿಕೊಳ್ಳುತ್ತಾರೆ.

ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಕೆಲಸಗಾರರು ಹೊರ ರಾಜ್ಯಗಳಿಂದ ಬಂದವರಾಗಿರುತ್ತಾರೆ. ಅದಕ್ಕೆ ಕಾರಣಗಳೂ ಇವೆ. ಮುಖ್ಯವಾಗಿ ಸುಮಾರು ಜನ ತಾವು ಹೊರ ರಾಜ್ಯಗಳಿಂದ ಬರುವುದೇ ತಮ್ಮ ಪೋಷಕರ ಕಣ್ಣು ತಪ್ಪಿಸಿ ತಮಗೆ ಇಷ್ಟ ಬಂದಂತೆ ಕಾಲ ಕಳೆಯಲು. ತಮ್ಮ ಮನೆಗಳಲ್ಲೇ ಇದ್ದರೆ ತಮಗೆ ಇಷ್ಟ ಬಂದಂತೆ ತಮ್ಮ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ಸಿಗರೇಟ್ ಸೇದಲು ಆಗುವುದಿಲ್ಲ. ಮಧ್ಯಪಾನ ಮಾಡಲಾಗುವುದಿಲ್ಲ. ಸ್ನೇಹಿತರ ಜೊತೆ ಪಾರ್ಟಿ ಮಾಡಲು ಆಗುವುದಿಲ್ಲ. ತಡರಾತ್ರಿ ಮನೆಗೆ ಬರಲು ಆಗುವುದಿಲ್ಲ. ಯಾರಾದರೂ ಪರಿಚಯಸ್ಥರು ನೋಡಿ ತಮ್ಮ ತಂದೆ ತಾಯಿಗೆ ಹೇಳಿಬಿಟ್ಟರೆ! ಎಂಬ ಭಯ ಇರುತ್ತದೆ. ಹೀಗಾಗಿ ಮನೆಯಲ್ಲಿ ತಾನು ಬೆಂಗಳೂರಿಗೆ ಹೋಗಿ ಉತ್ತಮ ಕೆಲಸದಲ್ಲಿ ಸೇರುವ ನೆಪ ಹೇಳಿ ಇಲ್ಲಿಗೆ ಬಂದು ಕೆಲಸಕ್ಕೆ ಸೇರುತ್ತಾರೆ. ಬಂದಿರುವುದು ಜೀವನವನ್ನು enjoy ಮಾಡಲು. ಆದರೆ ಜೇಬಲ್ಲಿ ದುಡ್ಡು ಇರುವುದಿಲ್ಲ. ಹಾಗಾಗಿ ಇವರಿಗೆ ಕೆಲಸ ಬೇಕು. ಇಂತಹ ಬಿ.ಪಿ.ಓ ಗಳಲ್ಲಿ ಕೆಲಸಕ್ಕೆ ಸೇರುತ್ತಾರೆ.

ಇಲ್ಲಿದ್ದರೆ ಸಿಗರೇಟ್ ಸೇದಬಹುದು, ಪ್ರತಿ ದಿನ ಕುಡಿಯಬಹುದು, ವೀಕೆಂಡ್ ಪಾರ್ಟಿಗಳಿಗೆ ಹಾಜರಾಗಿ ಕುಣಿಯಬಹುದು, ಹೊಸ ಹೊಸ ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ಗಳನ್ನೂ ಸಂಪಾದಿಸಬಹುದು. ಲೈಂಗಿಕ ಸ್ವೇಚ್ಚಾಚಾರತೆ ಇರುತ್ತದೆ. ಹೀಗೆ ಎಲ್ಲಾ ರೀತಿಯಲ್ಲೂ ಜೀವನವನ್ನು enjoy ಮಾಡಬಹುದು. ಊರಲ್ಲಿರುವ ತಂದೆ ತಾಯಿಗಳಿಗೆ ತನ್ನ ಮಗ/ಮಗಳು ಬೆಂಗಳೂರಿನಲ್ಲಿ ಒಳ್ಳೆ ಕೆಲಸದಲ್ಲಿದ್ದಾನೆ/ಳೆ ಎಂಬ ಭ್ರಮೆಯಲ್ಲಿರಿಸಬಹುದು. ಅದರರ್ಥ ಊರು ಬಿಟ್ಟು ಊರಿಗೆ ಬಂದವರೆಲ್ಲ ಇದೇ ಉದ್ದೇಶದಿಂದ ಬರುತ್ತಾರೆ ಎಂಬುದು ನನ್ನ ಮಾತಿನ ಅರ್ಥವಲ್ಲ. ಅಥವಾ ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಕೆಲಸಕ್ಕೆ ಸೇರಿರುವವರೆಲ್ಲ ನೀಯತ್ತಾಗಿ ಕೆಲಸ ಮಾಡುತ್ತಾರೆ ಎಂಬುದೂ ಅಲ್ಲ. ಊರಲ್ಲಿರುವ ತಂದೆ ತಾಯಿಯ ಕಷ್ಟಕ್ಕೆ ಸಹಾಯ ಮಾಡಲು ಇಲ್ಲಿಗೆ ಬಂದು ಕೆಲಸಕ್ಕೆ ಸೇರಿ ಕಷ್ಟ ಪಟ್ಟು ದುಡಿಯುವುವವರೂ ಇದಾರೆ. ಆದರೆ ಇವರ ಸಂಖ್ಯೆ ಕಡಿಮೆ.

ಇನ್ನೊಂದು ಮುಖ್ಯವಾದ ವಿಷಯ ಮೊದಲೇ ಹೇಳಿಬಿಡುವುದೊಳ್ಳೆಯದು. ಇಂತಹ ಬಿ.ಪಿ. ಸಂಸ್ಥೆಗಳಲ್ಲಿ ಮುಖ್ಯ ನಿರ್ವಾಹಕರು ಅವರ ಕೆಳಗೆ ಟೀಮ್ ಲೀಡರ್ ಗಳು ಅವರ ಕೆಳಗೆ ಹತ್ತಾರು ಕೆಲಸಗಾರರು ಇರುತ್ತಾರೆ. ಕೆಲಸಗಾರನು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ಟೀಮ್ ಲೀಡರ್ ಕರ್ತವ್ಯ. ಟೀಮ್ ಲೀಡರ್ ಗಳು ತಮ್ಮ ಕೆಲಸಗಾರರನ್ನು ಉತ್ತಮ ರೀತಿಯಲ್ಲಿ ಕೆಲಸ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದಾನೆಯೇ ಮತ್ತು ತಮ್ಮ ಕಕ್ಷಿಗಾರರ ಉತ್ಪನ್ನಗಳ ಬೇಡಿಕೆ ಹೆಚ್ಚುವ ಮಟ್ಟದಲ್ಲಿ ಸೇವೆ ಸಲ್ಲಿಕೆ ಆಗುತ್ತಿದೆಯೇ ಎಂದು ನೋಡಿಕೊಳ್ಳುವ ಜವಾಬ್ದಾರಿ ಮುಖ್ಯ ನಿರ್ವಾಹಕರದ್ದು. ಒಬ್ಬ ಟೀಮ್ ಲೀಡರ್ ನ ಮುಖ್ಯ ಕೆಲಸ ತನ್ನ ಕೆಳಗಿರುವ ಕೆಲಸಗಾರನು ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವಂತೆ ನೋಡಿಕೊಳ್ಳುವುದು ಮತ್ತು ಅವನ ಕಾರ್ಯಕ್ಷಮತೆಯನ್ನು ಗುರುತಿಸಿ ಅವನನ್ನು ಮೇಲಿನ ದರ್ಜೆಗೆ ಬರುವಂತೆ ತಯಾರು ಮಾಡುವುದು. ಅವನ ಕೆಳಗಿರುವವನ ಕೆಲಸ ಉತ್ತಮವಾಗಿದ್ದರೆ ಅವನನ್ನು ಹೊಗಳಿ ಪ್ರೋತ್ಸಾಹಿಸಿ ಇನ್ನು ಹೆಚ್ಚು ಕೆಲಸ ಮಾಡುವಂತೆ ಮಾಡುವುದು. ಹಾಗೆಯೆ ಕೆಲಸದ ಮೇಲೆ ಆಸಕ್ತಿ ಇಲ್ಲದೆ ಇರುವವರನ್ನು ಗುರುತಿಸಿ ಅವರನ್ನು ಸುಧಾರಿಸುವುದು.

ಒಂದು ವೇಳೆ ಟೀಮ್ ಲೀಡರ್ ಆಗಿರುವವನು ತನ್ನ ಕೈ ಕೆಳಗೆ ಕೆಲಸ ಮಾಡುವವನು ತನ್ನದೇ ಜಾತಿಯವನಿಗೆ ಅಥವಾ ತನ್ನದೇ ಭಾಷೆ ಮಾತಾಡುವವನಿಗೆ ಮಾತ್ರ ಪ್ರಾಮುಖ್ಯತೆ ಕೊಟ್ಟರೆ? ಉಳಿದವರ ಕಥೆ ಏನು? ಅವರನ್ನು ಡೆಮೋಟಿವೇಟ್ ಮಾಡಿದ ಹಾಗಾಗುವ ಸಂಧರ್ಭ ಇರುತ್ತದೆ. ಹಾಗಾದಾಗ ಒಬ್ಬ ಟೀಮ್ ಲೀಡರ್ ಗೆ ತನ್ನ ಜವಾಬ್ದಾರಿ ಏನು ಎಂದು ಗೊತ್ತಿಲ್ಲದೇ ಹೋದಂತಾಗುತ್ತದೆ. ಅವನ ಕೈ ಕೆಳಗೆ ಕೆಲಸ ಮಾಡುವವರ ಕೆಲಸದ ಗುಣಮಟ್ಟ ಕುಂಠಿತಗೊಳ್ಳುತ್ತದೆ.

ಇನ್ನು ಕೆಲಸಗಾರರ ವಿಷಯ. ಮೊದಲು ತಿಳಿಸಿದಂತೆ ಹೊರರಾಜ್ಯಗಳಿಂದ  life enjoy ಮಾಡಲು ಬಂದವರಿಗೆ ತಮ್ಮ ಕೆಲಸದ ಮೇಲೆ ನಿಜವಾಗಿಯೂ ಆಸಕ್ತಿ ಇರುತ್ತದೆಯೇ? ಖಂಡಿತ ಇಲ್ಲ. ಇವರಿಗೆ ಕೇವಲ ಸಂಬಳ ಬೇಕು. ಇಂಥವರಿಂದ ಕೆಲಸದ ವಾತಾವರಣ ಹೇಗೆ ಕೆಡುತ್ತದೆ ಎಂಬುದಕ್ಕೆ ಕೆಲವು ಉದಾಹರಣೆ ನೋಡೋಣ. ಒಬ್ಬ ಹೊರ ರಾಜ್ಯದಿಂದ ಕೆಲಸಕ್ಕಾಗಿ ಇಲ್ಲಿಗೆ ಬಂದು ಕೆಲಸಕ್ಕೆ ಸೇರಿದನು/ಳು ಎಂದುಕೊಳ್ಳೋಣ. ಪ್ರತಿ ಬಿ.ಪಿ. ಸಂಸ್ಥೆಯಲ್ಲಿ ಕೆಲಸದ ಸಂದರ್ಶನ ಮಾಡುವಾಗ Operational Round ಎಂಬ ಸಂದರ್ಶನದ ಪದ್ಧತಿ ಇರುತ್ತದೆ. ಹಾಗೆ ಮಾಡುವಾಗ ಕೆಲಸದ ಸಾಮರ್ಥ್ಯ ಎಷ್ಟಿದೆ ಎಂದು ನೋಡುವ ಬದಲು, ಇವನು/ಳು ತನ್ನದೇ ಊರಿಂದ ಬಂದವನು ಅಥವಾ ತನ್ನದೇ ಜಾತಿಯವನು ಎಂಬ ಕಾರಣಕ್ಕೆ ಕೆಲಸ ಕೊಟ್ಟರೆ ಆಗುವ ಅನಾಹುತಗಳು ಹೆಚ್ಚು. ಕೆಲಸ ಮಾಡಲು ಇಚ್ಛೆ ಇಲ್ಲದವನು ತನ್ನ ಸುತ್ತ ಒಂದು ಗುಂಪು ಕಟ್ಟಲು ಶುರು ಮಾಡುತ್ತಾನೆ. ತಮಿಳಿನವನು ಬರೀ ತಮಿಳು ಮಾತಾಡುವವರ ಗುಂಪು ಕಟ್ಟುತ್ತಾನೆ. ಮಲಯಾಳಿ ಬರೀ ಮಲಯಾಳಿಗಳ ಗುಂಪು ಕಟ್ಟುತ್ತಾನೆ. ಕನ್ನಡಿಗ ಬರೀ ಕನ್ನಡ ಮಾತಾಡುವವರ ಸಖ್ಯ ಬೆಳೆಸುತ್ತಾನೆ. ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲ ಕೆಡಿಸಿತು ಎನ್ನುವ ಹಾಗೆ ತನ್ನ ಗುಂಪಿನ ಎಲ್ಲಾ ಸದಸ್ಯರಲ್ಲೂ ಕೆಲಸದ ಮೇಲೆ ಇರುವ ಆಸಕ್ತಿ ಕಳೆದುಕೊಳ್ಳುವ ಹಾಗೆ ಮಾಡುತ್ತಾನೆ. ಸಂಸ್ಥೆಯ ಮೇಲಿರುವ ಗೌರವ ಕಡಿಮೆ ಆಗುವ ಹಾಗೆ ಮಾಡುತ್ತಾನೆ. ಒಬ್ಬನಿಂದ ಒಂದು ಇಡೀ ಗುಂಪು ತಾವು ಮಾಡುವ ಕೆಲಸದ ಗುಣಮಟ್ಟ ಕಡಿಮೆ ಮಾಡಿಕೊಳ್ಳುತ್ತಾರೆ. ಎಷ್ಟು ಕೆಲಸ ಮಾಡಿದರೂ ಇಲ್ಲಿ ನಮಗೆ ಮರ್ಯಾದೆ ಸಿಗುವುದಿಲ್ಲ. ಆದರೆ ಸ್ವಲ್ಪ ತಪ್ಪಾದರೂ ಬೈಗುಳ ಮಾತ್ರ ತಪ್ಪಿದ್ದಲ್ಲ ಎಂಬ ಮನಸ್ಥಿತಿ ಕೆಲಸಗಾರನಲ್ಲಿ ಉಂಟಾಗುತ್ತದೆಯಾವಾಗ ಕೆಲಸಗಾರರು ತಮ್ಮ ಕೆಲಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದಿಲ್ಲವೋ ಆಗ ಸಂಸ್ಥೆಯ ಹೆಸರು ಕೆಡುತ್ತದೆ. ಮತ್ತು ಕೆಲವು ಸಂದರ್ಭಗಳಲ್ಲಿ ಸಂಸ್ಥೆ Shut Down ಆಗುವ ಸಂದರ್ಭವೂ ಬರುತ್ತದೆ.

ಅದರಲ್ಲೂ Work From Home ಬಂದಾಗಿನಿಂದ ಕೆಲಸಗಾರರಿಂದ ಕೆಲಸ ಮಾಡಿಸುವುದು ಇನ್ನೂ ಹೆಚ್ಚು ಕಷ್ಟವಾಗಿದೆ. ಎಲ್ಲರೂ ಅವರವರ ಮನೆಯಿಂದಲೇ ಕೆಲಸ ಮಾಡುವುದರಿಂದ ಕೆಲಸಗಾರ ಏನೇ ಹೇಳಿದರೂ ಟೀಮ್ ಲೀಡರ್ ನಂಬಲೇಬೇಕು. ಉದಾಹರಣೆಗೆ, ಬಹಳ ಕಷ್ಟದ ಕೆಲಸ ಇದ್ದಾಗ ಕೆಲಸಗಾರ Power Outage ಎಂತಲೋ Laptop             ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂತಲೋ ಅಥವಾ Internet cut ಆಗಿದೆ ಎಂತಲೋ ಹೇಳಿದರೆ ಮುಗಿಯಿತು. ಬೇರೆ ದಾರಿಯೇ ಇಲ್ಲದೆ ನಂಬಬೇಕಾಗುತ್ತದೆ. ಈ ರೀತಿಯ ಕಾರಣಗಳನ್ನು ಹೇಳಿ ಅವರ ಪಾಡಿಗೆ ಮನೆಯಲ್ಲಿ ಕುಣಿದರೂ ಇಲ್ಲಿ ಟೀಮ್ ಲೀಡರ್ ಗೆ ಏನೂ ತಿಳಿಯುವುದಿಲ್ಲ. ಆದರೆ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂದು Manager ಗಳ ಹತ್ತಿರ ಬೈಗುಳ ತಿನ್ನುವುದು ಮಾತ್ರ ತಪ್ಪುವುದಿಲ್ಲ.

ಇದಕ್ಕೆಲ್ಲ ಪರಿಹಾರ ಇಲ್ಲವೇ? ಖಂಡಿತ ಇದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಮೊದಲು ಸಂಸ್ಥೆಗೆ ಕೆಲಸಗಾರರನ್ನು ಸೇರಿಸಿಕೊಳ್ಳುವಾಗ ಮಾಡುವ ಸಂದರ್ಶನದಲ್ಲಿಯೇ ಉತ್ತಮ ದರ್ಜೆಯ ಕೆಲಸಗಾರರನ್ನು ಸೇರಿಸಿಕೊಳ್ಳ ಬೇಕು. ಯಾವುದೇ ಜಾತಿ, ಭಾಷೆಯ ಆಧಾರದ ಮೇಲೆ ಆಯ್ಕೆ ಮಾಡದೇ ಕೇವಲ ಕಾರ್ಯಕ್ಷಮತೆಯ ಆಧಾರದ ಮೇಲೆ ಕೆಲಸಗಾರನನ್ನು ನೇಮಕಾತಿ ಮಾಡಿಕೊಳ್ಳಬೇಕು. ಕೆಲಸಗಾರನಿಗೆ ಉತ್ತಮ ದರ್ಜೆಯ ತರಬೇತಿ ನೀಡಬೇಕು. ಕೆಲಸ ಮಾಡುವಾಗ ಪ್ರೋತ್ಸಾಹ ನೀಡುತ್ತಾ ಇರಬೇಕು. ಇದೆಲ್ಲಾ ಮಾಡುವ Supervisor ಗೆ ಮೊದಲು ತನ್ನ ಜವಾಬ್ದಾರಿ ಏನು ಎಂದು ತಿಳಿದಿರಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಕೆಲಸಗಾರನು ತನ್ನ ಕೆಲಸವನ್ನು ಪ್ರೀತಿಸಬೇಕು. ತಾನು ತೆಗೆದುಕೊಳ್ಳುವ ಸಂಬಳಕ್ಕೆ ನ್ಯಾಯ ಒದಗಿಸುವಂತೆ ತನ್ನ ಕೆಲಸವನ್ನು ನಿರ್ವಹಿಸುವ ನೈತಿಕತೆ ಇರಬೇಕು. ಯಾವುದೇ ಹೊಗಳಿಕೆಗೆ ಹಿಗ್ಗಬಾರದು ತೆಗಳಿಕೆಗೆ ಕುಗ್ಗಬಾರದು. ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬ ಗೀತೆಯ ವಾಕ್ಯದಂತೆ ಕರ್ಮವನ್ನು ಕರ್ಮಕ್ಕಾಗಿ ಮಾತ್ರ ಮಾಡಬೇಕು.