ಕಾರ್ಯಶೀಲನಾಗು

ಕಾರ್ಯಶೀಲನಾಗು

ಬರಹ

  ಕಾರ್ಯಶೀಲನಾಗು
 
  ಗುರುಗಳೇ, ಬೇಕಿರುವ ಗುರಿಯ ಮುಟ್ಟಲಾರೆವು ಏಕೆ
  ತಿಳುವಳಿಕೆ ಎಲ್ಲಾ ಇದ್ದರೂ ಅದು ಕೈ ತಪ್ಪುವುದೇಕೆ 
 
  ನನ್ನಲ್ಲಿ ಇಚ್ಛಾಶಕ್ತಿಯ ಕೊರತೆಯೇನೂ ಇದ್ದಿರಲಿಲ್ಲ
  ಕಾಗದದ ಮೇಲೆ ಅದಕ್ಕೆ ಯೋಜನೆಗಳು ಇದ್ದವಲ್ಲ
 
  ಮನೆಯಲ್ಲಿ ಹಣದ ಕೊರತೆಯ ಎಂದೂ ನೋಡಲಿಲ್ಲ
  ಬೇಡದ ದುರಭ್ಯಾಸಗಳ ನಾ ಎಂದೂ ಬೆಳೆಸಲಿಲ್ಲ
 
  ತಿಳಿದಿದೆಯೇ ನಿಮಗೆ ಈ ಎಲ್ಲಾ ಸೋಲಿಗೆ ಕಾರಣ
  ನಾನು ಕಟ್ಟಬೇಕು ಕೆಲಸಗಳಿಗೆ ಗೆಲುವಿನ ತೋರಣ
 
  ಶಿಷ್ಯಾ, ಕೂತು ಕೆಲಸದ ಬಗ್ಗೆ ಯೋಚಿಸಿದರೆ ಫಲವಿಲ್ಲ 
  ಕಾರ್ಯಶೀಲನಾಗದೇ ನಿನ್ನ ಕೆಲಸದಲಿ ಗೆಲುವಿಲ್ಲ
 
  ಬರೇ ಯೋಚಿಸುತ್ತಾ ಕುಳಿತರೆ ಆಗುವುದು ಮನ ಭಾರ 
  ಯೋಚಿಸದೆ ಕಾರ್ಯಶೀಲನಾದರೆ ಹೋಗುವೆ ನೀ ದೂರ
 
  ಎಲ್ಲಾ ಕೆಲಸವ ಕಲಿತು ನಂತರವೇ ಪ್ರಾರಂಭಿಸಬೇಕಿಲ್ಲ    
  ಕೆಲಸವ ಆರಂಭಿಸು, ಮಾಡುತ್ತಾ ಕಲಿಯುವೆ ನೀ ಎಲ್ಲಾ
 
  ಕೆಲಸದಲಿ ಇರಲಿ ಯೋಜನೆಗೆ ಕೇವಲ ಪ್ರತಿಶತ ಇಪ್ಪತ್ತು
  ಕಾರ್ಯಶೀಲನಾಗಿ ಕೆಲಸ ಮಾಡಲು ಪ್ರತಿಶತ ಎಂಬತ್ತು 
 
   ಸಂಪೂರ್ಣ ಹೊಣೆ ಹೊತ್ತು ಶುರು ಮಾಡು ನೀ ಕೆಲಸವ
   ನಿನ್ನೀ ಚುರುಕುತನ ನಿನ್ನರಿವಿಲ್ಲದೆ ಕ್ರಮಿಸುವುದು ದೂರವ
 
   - ತೇಜಸ್ವಿ.ಎ.ಸಿ