ಕಾಲಕೋಶ (ಕಾಲ್ಸೆಂಟರ್ (ತರ್ಲೆ) ಪದಕೋಶ)
ಬರಹ
ಕಾಲೆಳೆಯುವ ವಿದ್ಯೆ: ಕಾಲ್ಸೆಂಟರ್ನಲ್ಲಿ ಒಂದು ಕರೆಯನ್ನು ಗಂಟೆಗಟ್ಟಲೆ ಎಳೆಯುವ ವಿದ್ಯೆ.
ಕಾಲನೇಮಿ: ಕಾಲ್ಸೆಂಟರ್ನಲ್ಲಿ ಬಂದ ಕರೆಗಳನ್ನು ಬೇರೆಬೇರೆ ಉದ್ಯೋಗಿಗಳಿಗೆ ಹಂಚುವಾತ.
ಕಾಲಪುರುಷ: ಕಾಲ್ಸೆಂಟರ್ನಲ್ಲಿ ಕೆಲಸ ಮಾಡುವ ಗಂಡಸು.
ಕಾಲೇಜು: ಕಾಲ್ಸೆಂಟರ್ನಲ್ಲಿ ಕೆಲಸ ಮಾಡಲು ಸರಿಯಾದ ಪ್ರಾಯ (age).
ಕಾಲಮಾನ: ಕಂಪೆನಿಯ ಮಾನ ಉಳಿಯುವಂತೆ ಬಂದ ಕರೆಯನ್ನು ಉತ್ತರಿಸುವ ಚಾಕಚಕ್ಯತೆ.
ಕಾಲರಾತ್ರಿ: ಕಾಲ್ಸೆಂಟರ್ನಲ್ಲಿ ರಾತ್ರಿ ಪಾಳಿ.
ಕಾಲಜ್ಞಾನಿ: ಕಾಲ್ಸೆಂಟರ್ನಲ್ಲಿ ಬರುವ ಕರೆಗಳಿಗೆ ಸರಿಯಾದ ಉತ್ತರ ತಿಳಿದಿರುವಾತ.
ಕಾಲಾಡಿಸು: ಕಾಲ್ಸೆಂಟರ್ನಲ್ಲಿ ಬಂದ ಕರೆಯನ್ನು ಸರಕಾರಿ ಕಚೇರಿಗಳಲ್ಲಿ ಮಾಡಿದಂತೆ ಒಬ್ಬ ಒಪರೇಟರ್ನಿಂದ ಮತ್ತೊಬ್ಬ ಒಪರೇಟರ್ಗೆ ಅಲ್ಲಿಂದ ಮತ್ತೊಬ್ಬನಿಗೆ ದಾಟಿಸುವುದು.
-ಪವನಜ