ಕಾಲದಲ್ಲಿ ಕಮರಿದ ಬಯಕೆ

ಕಾಲದಲ್ಲಿ ಕಮರಿದ ಬಯಕೆ

ಬರಹ
ಚೈತ್ರದಲ್ಲಿ ಚಿಗುರಿದ್ದ ಬಯಕೆ ವೈಶಾಖದ ಬಿಸಿಲಿಗೆ ಬಾಡಿತ್ತು ಜ್ಯೇಷ್ಟ ಆಷಾಢದ ಬಿರುಗಾಳಿಗೆ ಬೇರುಬಿಳಿಲುಗಳೆಲ್ಲ ಹಾರಿ ಹೋಗಿತ್ತು ಶ್ರಾವಣದ ಮೋಡದಲಿ ಬಿದ್ದ ಮಳೆಯಲ್ಲಿ ಚಿಗುರುವಾಸೆ ಮತ್ತೆ ಮೂಡಿತ್ತು ಭಾದ್ರಪದ ಆಶ್ವಯುಜ ಕಾರ್ತೀಕದ ಹನಿಹನಿಯು ಬಯಕೆಗೆ ಗರಿ ಮೂಡಿಸಿತ್ತು ಟಿಸಿಲೊಡೆದು ಗರಿಗೆದರಿ ನೆಲದಲ್ಲಿ ನಿಂತಾಗ ಮಾರ್ಗಶಿರ ಮತ್ತೆ ಪುಷ್ಯ ಕಳೆದಿತ್ತು ಮಾಘ ಫಾಲ್ಗುಣದ ಚಳಿಯಲ್ಲಿ ಮುದುಡಿ ಎಲೆಯುದುರಿ ಚೈತ್ರದಲ್ಲಿ ಮತ್ತೆ ಚಿಗುರಿತ್ತು ಆದರೇನು ಮತ್ತೆ ಬಂದ ವೈಶಾಖದ ಬಿಸಿಲು ಬಾಡಿಸಿತ್ತು. ವಿಜಯಶಂಕರ ಮೇಟಿಕುರ್ಕೆ