ಕಾಲದ ಜಾಲ [ಮಕ್ಕಳ ಕವನ]

ಕಾಲದ ಜಾಲ [ಮಕ್ಕಳ ಕವನ]

ಕವನ

ಚೈತ್ರದಲಿ ಕುಸುಮಾಕರ ಜಾಲ

ವೈಶಾಖದಿ ಬೇಸಿಗೆಯಾ ಕಾಲ

ಜ್ಯೇಷ್ಟದಿ ಸುರುವೀ ವರ್ಷಾಕಾಲ

ಆಷಾಢದಿ  ಜಡಿ ಜಡಿ ಮಳೆಗಾಲ

ಶ್ರಾವಣದಲಿ ತೆನೆ ಬೆಳೆಯುವ ಕಾಲ

ಭಾದ್ರಪದದಲಿ ಕೊಯ್ಯುವ ಕಾಲ

ಆಶ್ವಿನ ದೀಪಾವಳಿಯಾ ಕಾಲ

ಕಾರ್ತಿಕವಿಡೀ ಹಬ್ಬದ ಕಾಲ

ಮಾರ್ಗಶಿರವು ಚಳಿ ಸುರುವಿನ ಕಾಲ

ಪೌಷವು ಸಂಕ್ರಾಂತಿ ಹಬ್ಬದ ಕಾಲ

ಮಾಘವು ಶಿವನಾ ಪೂಜೆಯ ಕಾಲ

ಫಾಲ್ಗುಣದಲಿ ಸುರು ಕಡು ಸೆಕೆಗಾಲ

ಈ ರೀತಿಯದೀ ವರ್ಷದ ಕಾಲ!

 

Comments