ಕಾಲರಾತ್ರಿ
ಕವನ
ಇಹದ ಭೀತಿ ಶತ್ರು ಭಯದಿ
ಜಗದಲಿಂದು ಬಾಳುವೆ
ಭೀತಿ ಕಳೆದು ಅಭಯ ನೀಡು
ಕಾಲರಾತ್ರಿ ಮಾತೆಯೆ
ದನುಜನನ್ನು ವಧಿಸಲೆಂದು
ಏರಿ ಬಂದೆ ಗಾರ್ಧಭ
ರೋಷದಲ್ಲಿ ನೀನು ಮುನಿಯೆ
ಜಗದಿ ಬಾಳು ದುರ್ಲಭ
ಈಶನೊಡತಿ ಜಗದ ತಾಯಿ
ಪೊರೆಯೆ ನಮ್ಮ ಕರುಣದಿ
ನೀನು ಮರೆತು ಕುಳಿತರೆಮಗೆ
ಕಳೆವುದೆಂತು ಬೇಗುದಿ
ಸಕಲ ಸಿದ್ಧಿಗೊಡತಿ ನೀನು
ತುಂಬು ಜ್ಞಾನ ನನ್ನಲಿ
ನಿನ್ನ ಕರುಣೆ ಮಾತ್ರದಿಂದ
ಸೊಗದ ಬದುಕು ಜಗದಲಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್