ಕಾಲೇಜ್ ಗಮ್ಮತ್ತು
ನಾನು ಇಂಜಿನಿಯರಿಂಗ್ ಓದುತಿದ್ದಾಗ ನಡೆದ ಪ್ರಸಂಗವಿದು. ನಮ್ಮ ಪ್ರೊಫೆಸರ್ ಒಬ್ಬರ ಮಗ ಉನ್ನತ ವ್ಯಾಸಂಗ ಮಾಡಲು ಅಮೆರಿಕೆಗೆ ಹಾರಿದ್ದರು. ತನ್ನ ಮಗನ ವಿಷಯ ನಮ್ಮ ಸರ್ ಗೆ ತುಂಬಾ ಹೆಮ್ಮೆ. ತಮ್ಮ ಕ್ಲಾಸ್ ಮಧ್ಯದಲ್ಲಿ ಯಾವಾಗಲು ಮಗನ ವಿಷಯ ಹೇಳುವರು. ಅದು ಹೇಗೆ ಇತ್ತೆಂದರೆ ಅಮೆರಿಕ ಎಂಬುದು ಸ್ವರ್ಗ, ನೀವೆಲ್ಲ ಇರುವುದು ನರಕ ಎನ್ನುವ ಭಾವನೆ ಬರುವ ಮಟ್ಟಿಗೆ.
ಒಂದು ದಿನ, ಕ್ಲಾಸ್ ನಡೀತಾ ಇರುವಾಗ ಕರೆಂಟ್ ಕೈ ಕೊಟ್ಟಿತು. ಕೂಡಲೇ ಸರ್ ಹೇಳಿದರು - "ನೋಡಿದ್ರ ನಮ್ಮ ಇಂಡಿಯಾದ ಅವ್ಯವಸ್ತೆ! ಯಾವಾಗಲು ಕರೆಂಟ್ ಪ್ರಾಬ್ಲಮ್. ಅಲ್ಲಿ ಅಮೆರಿಕದಲ್ಲಿ ಯಾವಾಗಲು ಕರೆಂಟ್ ಇರುತ್ತದೆ. ಅಮೆರಿಕಾದ K.E.B ತುಂಬಾ efficient !!"......ಮುಖ ಮುಖ ನೋಡಿಕೊಂಡ ನಾವೆಲ್ಲರೂ ಬಿದ್ದು ಬಿದ್ದು ನಗಲು ಆರಂಭಿಸಿದೆವು. ಪ್ರೊಫೆಸರ್ ಪೆಚ್ಚು...
ಕಾರಣ ಇಷ್ಟೇ...ಅವರು ಅಮೆರಿಕಾದ Electricity suppy company ಯನ್ನು, ಗಡಿಬಿಡಿಯಲ್ಲಿ ಮಾತಾಡುವಾಗ ಅಮೆರಿಕಾದ K.E.B (Karnataka Electricity Board) ಎಂದು ಕರೆದಿದ್ದರು!! ಅಂದಿನಿಂದ ಪ್ರೊಫೆಸರ್ ಅಮೆರಿಕಾದ ಹೆಚ್ಚುಗಾರಿಕೆ ಮಾಡುವುದನ್ನು ಬಿಟ್ಟರು...
Comments
ಉ: ಕಾಲೇಜ್ ಗಮ್ಮತ್ತು
ಉ: ಕಾಲೇಜ್ ಗಮ್ಮತ್ತು