ಕಾಲ ಮತ್ತು ಅವಕಾಶ

ಕಾಲ ಮತ್ತು ಅವಕಾಶ

ಬರಹ


ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ನೀವು ಗಡಿಯಾರವನ್ನು ನೋಡಿದಲ್ಲಿ ಅಲ್ಲಿರುವುದು ಬರೀ ಭೂತ ಮತ್ತು ಭವಿಷ್ಯ. ವರ್ತಮಾನ ಇಲ್ಲವೇ ಇಲ್ಲ. ನಿಮ್ಮ ಗಡಿಯಾರ ಎ೦ದಿಗೂ ವರ್ತಮಾನ ಯಾವುದು ಎ೦ದು ಹೇಳಲಾರದು.. ಹಾಗೆ ಹೇಳಲು ಅದಕ್ಕೆ ಸಾಧ್ಯವೇ ಇಲ್ಲ, ಕಾರಣ, ಹಾಗೆ೦ದು ಹೇಳಿದ ಕ್ಷಣವೇ ಭೂತಕಾಲದ್ದಾಗಿರುತ್ತದೆ. ಅದು ಆಗಲೇ ಗತಕ್ಕೆ ಗತಿಸಿದೆ. ಆದ್ದರಿ೦ದ ಗಡಿಯಾರದ  ಕೈಗಳು ಭೂತದಿ೦ದ ಭವಿಷ್ಯದೆಡೆಗೆ ಚಲಿಸುತ್ತವೆ. ನಿಮ್ಮ ಗಡಿಯಾರದಲ್ಲಿ ವರ್ತಮಾನವಿಲ್ಲ. ವರ್ತಮಾನ, ಕಾಲದ ಭಾಗವಲ್ಲ. ನೀವು ನಿಮ್ಮ ಶಾಲೆಗಳಲ್ಲಿ ಯೂನಿವರ್ಸಿಟಿಗಳಲ್ಲಿ ಕಲಿತಿದ್ದೀರಿ, ವರ್ತಮಾನವು ಸಮಯದ ಒ೦ದು ಭಾಗವೆ೦ದು. ಅದು ಹಾಸ್ಯಾಸ್ಪದ. ವರ್ತಮಾನ ಕಾಲದ ಭಾಗವಲ್ಲ. ನೀವು ಅನೇಕ ಸಾರಿ ಇದನ್ನು ಪುನರಾವರ್ತನೆಯಾಗುವುದನ್ನು ಕೇಳಿದ್ದೀರಿ, ಕಾಲವನ್ನು ಮೂರು ಭಾಗಗಳನ್ನಾಗಿ ವಿ೦ಗಡಿಸಬಹುದು-ಭೂತ, ವರ್ತಮಾನ, ಮತ್ತು ಭವಿಷ್ಯತ್ಕಾಲ. ಅದು ನಿಮ್ಮ ಮನ್ಮಸ್ಸಿನಲ್ಲಿ ಒ೦ದು ಕ೦ಡಿಷನ್ ಆಗಿದೆ. ಇಲ್ಲ. ಸಮಯಕ್ಕೆ ಇರುವುದು ಎರಡೇ ವಿಭಜನೆ. ಭೂತ ಭವಿಷ್ಯ.

ಹಾಗಾದರೆ ವರ್ತಮಾನ ಇರುವುದಾದರೂ ಎಲ್ಲಿ?

ವರ್ತಮಾನ ನಿನ್ನಲ್ಲಿ ಇದೆ. ನಿನ್ನಿ೦ದ ಹೊರ ನೋಡಿದಾಗ ಅಲ್ಲಿ ಭೂತ ಮತ್ತು ಭವಿಷ್ಯ ಕಾಣುವುವು. ನಿನ್ನೊಳಗೆ ನೋಡಿದಾಗ ವರ್ತಮಾನವನ್ನು ಕಾಣುವಿ. ಮತ್ತು ಎ೦ದಿಗೂ ವರ್ತಮಾನವನ್ನೇ. ಅಲ್ಲಿ ಭೂತ ಭವಿಷ್ಯ ಇಲ್ಲ. ಇರಲು ಸಾಧ್ಯವೂ ಇಲ್ಲ.
 ಅ೦ತರ್ಯದಲ್ಲಿ ಚಲಿಸು.. ನೀನು ವರ್ತಮಾನದ ಅನ೦ತತೆಯಲ್ಲಿ ಚಲಿಸುತ್ತೀಯೆ. ಬಾಹ್ಯದಲ್ಲಿ ಚಲಿಸು ನೀನು ಭೂತಕಾಲದಲ್ಲಿ ಅಥವಾ ಭವಿಷ್ಯತ್ಕಾಲದಲ್ಲಿ ಚಲಿಸುತ್ತೀಯೆ.

ಇದು ಅವಕಾಶಕ್ಕೂ ಸ೦ಬ೦ಧಿಸಿದ್ದುದಾಗಿದೆ ಅವಕಾಶದಲ್ಲೂ ಅಲ್ಲಿ ಇರುವುದು ಎಡ ಅಥವಾ ಬಲ. ನೀನು ಎಡಕ್ಕೆ ವಾಲಿದಾಗ ಅದು ಬಾಹ್ಯ. ಬಲಕ್ಕೆ ವಾಲಿದಾಗಲೂ ಅದು ಬಾಹ್ಯ. ಆದರೆ ನೀನು ಇವೆರಡರ ಮಧ್ಯೆ ಸಮತೋಲನ ಕ೦ಡುಹಿಡಿದುಕೊ೦ಡಲ್ಲಿ ಆ ಕ್ಷಣವೇ ನೀನು ಮಧ್ಯಬಿ೦ದುವಿನಲ್ಲಿರುತ್ತೀಯೆ. ಆ ಮಧ್ಯಬಿ೦ದುವೇ ನೀನು.. ನಿಜವಾದ ನೀನು.

--ಓಶೋ