ಕಾಳು ಮೆಣಸಿನಲ್ಲಿ ನಿಧಾನ ಸೊರಗು ರೋಗ ಮತ್ತು ಅದರ ನಿರ್ವಹಣೆ

1.ಬಳ್ಳಿಯ ನಿಧಾನ ಸೊರಗುವಿಕೆ ಅದರ ನಿಶಕ್ತಿಯಿಂದ ಉಂಟಾಗುತ್ತದೆ. ಎಲೆ ಹಳದಿಯಾಗುವಿಕೆ, ಎಲೆ ಉದುರುವಿಕೆ ಮತ್ತು ತುದಿಯಿಂದ ಒಣಗುವುದು ಈ ರೋಗದ ಲಕ್ಷಣಗಳು.
2.ರೋಗ ತಗುಲಿದ ಬಳ್ಳಿಗಳು ಅಕ್ಟೋಬರ್ ನಂತರ ಮಣ್ಣಿನ ತೇವಾಂಶ ಕಡಿಮೆಯಾಗುತ್ತಿದ್ದಂತೆ ಹಳದಿಯಾಗುತ್ತದೆ.
3.ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಜೂನ್-ಜುಲೈ ತಿಂಗಳಲ್ಲಿ ಸೋಂಕು ತಗಲಿದ ಬಳ್ಳಿಯ ಕೆಲವು ಭಾಗಗಳು ಚೇತರಿಸಿಕೊಂಡು ಚಿಗುರಲು ಪ್ರಾರಂಭಿಸುತ್ತದೆ.
4. ಹೀಗಿದ್ದರೂ ಮುಂಗಾರು ಮುಕ್ತಾಯವಾಗುತ್ತಿದ್ದಂತೆ ಮತ್ತೆ ರೋಗ ಕಾಣಿಸಿಕೊಂಡು ಬಳ್ಳಿಯು ಕ್ರಮೇಣವಾಗಿ ತನ್ನ ಉತ್ಪಾದನಾ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
5.ಈ ರೋಗ ತಗುಲಿದ ಬಳ್ಳಿಗಳಲ್ಲಿ ಲವಣಾಂಶ ಮತ್ತು ನೀರು ಸಾಗಾಣಿಕೆ ಬೇರುಗಳು ಜಂತುಹುಳುಗಳ ಬಾಧೆಯಿಂದ ಕೊಳೆಯುತ್ತದೆ, ಬೇರುಗಳು ಕೊಳೆಯುವುದರಿಂದ ಎಲೆಗಳಲ್ಲಿಯೂ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
6.ಜಂತುಹುಳುಗಳಾದ Radopholus similis ಮತ್ತು Meloidogyne incognita ಬಾಧೆಗೊಳಗಾದ ಬೇರುಗಳು ಸುಕ್ಕಾಗುವುದು ಗಂಟು ಕಟ್ಟುವುದು ಹಾಗೂ ಕೊಳೆಯುವುದನ್ನು ಕಾಣಬಹುದು.
7. ಬೇರುಗಳು ಕೊಳೆಯುವುದಕ್ಕೆ ಜಂತುಹುಳುಗಳು ಅಥವಾ Phytophthora capsici ಶಿಲೀಂದ್ರ ಕಾರಣವಾಗಬಹುದು ಅಥವಾ ಎರಡು ಸೇರಿ ಬರಬಹುದು.
ನಿರ್ವಹಣೆ:
1.ಬೇರು ಗಂಟು ಹುಳುವಿನ ಬಾಧೆ ಹೆಚ್ಚಾಗಿರುವ ಪ್ರದೇಶದಲ್ಲಿ ಬೇರು ಗಂಟು ನಿರೋಧಕ ತಳಿಯಾದ ಪೌರ್ಣಮಿ ಯನ್ನು ನೆಡುವುದು.
2.ಜೈವಿಕ ನಿಯಂತ್ರಣವಾದ Pochonia cladosporium ಅಥವಾ Trichoderma harzianum ವರ್ಷದಲ್ಲಿ ಎರಡು ಬಾರಿ ಪ್ರತಿ ಗಿಡಕ್ಕೆ 50 ಗ್ರಾಂ ನಂತೆ ಎಪ್ರಿಲ್ - ಮೇ ಮತ್ತು ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಕೊಡುವುದು.
3.ಜಂತುಹುಳು ನಾಶಕ ಹಾಕುವಾಗ ಮಣ್ಣನ್ನು ಕೆದಕಿ ಜಂತುಹುಳು ನಾಶಕವನ್ನು ಸಮನಾಗಿ ಹಾಕಿ ಮಣ್ಣಿನಿಂದ ಮುಚ್ಚಬೇಕು ಬೇರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರುವಂತೆ ನೋಡಿಕೊಳ್ಳಬೇಕು ರೋಗದ ಪ್ರಾರಂಭಿಕ ಹಂತದಲ್ಲಿ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ.
-ಸಂತೋಷ್ ನಿಲುಗುಳಿ, ತೋಟಗಾರಿಕಾ ಸಲಹೆಗಾರರು
ಚಿತ್ರ ಕೃಪೆ: ಇಂಟರ್ನೆಟ್ ತಾಣ