ಕಾವರಿಲ್ಲದೇ...

ಕಾವರಿಲ್ಲದೇ...

ಕವನ

ಯಾವ ಶಿಲ್ಪಿಯೊ ಕೆತ್ತಿ ಶಿಲ್ಪವ

ಭಾವ ತುಂಬಿದ ಮನದೊಳು

ದೇವ ಕನ್ನಿಕೆಯಂಥ ಚೆಲುವಿಕೆ

ಕಾವರಿಲ್ಲವೆ ನಾಡೊಳು

 

ಕೊರಳು ಬಳಸಿದ ದಾರ ಹೊಂದಿದೆ

ಕರದಿ ನುಡಿಸುವ ಮದ್ದಳೆ

ಕರವನೊಂದನು ಮೇಲಕೆತ್ತಿದೆ

ಶಿರದ ಹಿಂಬದಿ ಹಿಡಿದಳೆ

 

ಹಸಿರು ಲತೆಗಳು ಸುತ್ತುವರಿದಿವೆ

ಕುಸುಮ ಕೋಮಲೆ ಬಾಲೆಯ

ಮಸುಕುಗೊಳಿಸಿದೆ ಶಿಲ್ಪದಂದವ

ಹೊಸಕಿ ಹಾಕದೆ ಬಿಡುವುದೆ?

 

ಸೊರಗತೊಡಗಿದೆ ಕಾವರಿಲ್ಲದೆ

ಮರುಕ ತರಿಸುವ ತರವಿದೆ

ಕರಗಿ ಹೋಗುವ ಮುನ್ನ ರಕ್ಷಿಸಿ

ಪೊರೆವ ಮಂದಿಯ ಕಾಣದೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್