ಕಾ.ವೀ.ಕೃಷ್ಣದಾಸರ ಹಾಯ್ಕುಗಳು
ಕವನ
ಪ್ರಶಂಸೆ ಜಾಜಿ
ಪ್ರತಿಷ್ಟೆ ಬಾಜಿ ; ಅಯ್ಯೋ
ಚಿನ್ನದ ಸೂಜಿ!
*
ಹೆತ್ತರೆ ತಾಯಿ
ಹೊತ್ತರೆ ಮಗ ; ಭದ್ರ
ಕರುಳ ಬಳ್ಳಿ!
*
ತಾನು ಸಣ್ಣವ
ಎನಲು ; ನಾನು ಕೊನೆ ;
ಬಾಂಧವ್ಯ ತೆನೆ!
*
ನಿನ್ನ ನೆರಳು
ನಿನ್ನಂತಿರದು ; ಭಿನ್ನ
ವಕ್ರೀಭವನ!
*
ಹಸಿರ ತೇರು;
ಉಸಿರ ಬೇರು; ನಿತ್ಯ
ಜೀವ ಚೇತನ!
*
ಎದೆ ಸಾಗರ;
ಮುತ್ತಿನಾಗರ; ಬರೀ
ಕಡಲ್ಕೊರೆತ!
*
ಬಾನು ಜಲದ
ನಡುವೆ ಬಂದ ಭಾನು;
ದೀಪ ಚುಂಬನ!
*
ಬೇಡ ಅಂತರ
ಜಾತಿ ಜೀತ ಬೇಸರ ;
ಮನವೇ ಜೇಡ!
*
ದೀಪವ ಹಚ್ಚಿ
ಬೆಳಕನು ನೆಚ್ಚಿರಿ ;
ದೈವ ಮೆಚ್ಚಲಿ!
*
ಗುಲಾಮನಾಗಿ
ಗುರುವಿಗೆ; ಪರಮ
ಪ್ರಸಾದವಾಗು!
*
ಭಾವ ಯಾನದಿ
ಎದೆಯ ಉತ್ಖನನ;
ಸಿಕ್ಕಿದ್ದು ಪ್ರೀತಿ!
*
ಗೀಚಿದ ಸಾಲು
ಮಾಡಿತು ಘಾಸಿ; ಮುಂದೆ
ಮಾತು ಸನ್ಯಾಸಿ!
*
ಮಾತು ಹಚ್ಚಿದ
ಬೆಂಕಿ ; ಕಿಡಿಯ ಗಾತ್ರ
ಸಾಸಿವೆ ಕಾಳು !
-ಕಾ.ವೀ. ಕೃಷ್ಣದಾಸ್
ಚಿತ್ರ್
