ಕಾವೇರಿಗೆ ನುಡಿ ನಮನ

ಕಾವೇರಿಗೆ ನುಡಿ ನಮನ

ಕವನ

ತಲಕಾವೇರಿಯ ಚೆಲುವೆ ಕಾವೇರಿ

ಜುಳುಜುಳು ಜುಳುವಿನ ಜಲಗೌರಿ

ಸ್ಪಟಿಕದ ನಲಿವಿನಲಿ ಸುರ ಸುಂದರಿ

ಭೂರಮೆ ಮಡಿಲಿಗೆ ಸಿರಿ ಕಿನ್ನರಿ.

 

ತಲಕಾಡಿನಲಿ ನಿನ್ನಯ ಉಗಮವು

ಜನ ಜೀವನವು ಬಹು ಸುಗಮವು

ಉಪ ನದಿಗಳ ಮಹಿಮೆಯ ಸಂಗಮವು

ತ್ರಿ ರಾಜ್ಯಗಳ ಹರಿವಿನಲ್ಲಿ ಸಮಾಗಮವು.

 

ಕೆ.ಆರ್.ಎಸ್.,ಕಬಿನಿ, ಹಾರಂಗಿ ಆಣೆಕಟ್ಟು

ರೈತರ ಪಾಲಿಗೆ ಬೆಳಸಿಯ ಬುತ್ತಿಕಟ್ಟು

ಬರದಿರಲಿ ಪ್ರಾದೇಶಿಕದ‌ ಬಿಕ್ಕಟ್ಟು...

ಕರುನಾಡಲ್ಲಿ ಸೃಷ್ಟಿಯಾಗದಿರಲಿ ಇಕ್ಕಟ್ಟು.

 

ಹಲವೆಡೆಗಳಲ್ಲಿ ಜಲಪಾತವು,ದ್ವೀಪವು

ನಿಸರ್ಗದ ಮಡಿಲಲ್ಲಿ ನದಿಯ ಒಲವು

ಸಂಸ್ಕೃತಿ ಬೆಳಸಿ, ಪ್ರಕೃತಿಯ ಉಳಿವು

ಜೀವ ನದಿಯಿಲ್ಲಿ ಚೆಲುವಿನ ಹರಿವು.

 

ಆದಿರಂಗ,ಮಧ್ಯರಂಗ,ಅಂತ್ಯರಂಗನಾಥರು

ಕಾವೇರಿಯ ತಟದಲ್ಲಿ ಹರಸುತಿಹರು

ಭಕ್ತ ಗಣಗಳ ಮನಕೆ ಸಂತಸ ತಂದಿಹರು

ಸಪ್ತ ನದಿಗಳ ಮಹಿಮೆಯಲಿ ಪೂಜಿಸುತಿಹರು.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್