ಕಾವೇರಿಯ ಅಳಲು...

ಕಾವೇರಿಯ ಅಳಲು...

ಕವನ

ನಂಬಿದ ರೈತಾಪಿ ಜನರ ಅಳಲು ತೋಡುವಂತಾಗಿದೆ

ತುಂಬಿ ತುಳುಕುತ್ತಿದ್ದ ಕಾವೇರಿಯಿಂದು ಬರಿದಾಗಿದೆ

ರಾಜ್ಯದ ಜೀವನದಿಗಿಂದು ಕಗ್ಗತ್ತಲೆ ಕಾರ್ಮೋಡ ಕಟ್ಟಿದೆ

ನೀರಿಲ್ಲದೆ ಬೆಳೆ, ಬೆಳೆಯಿಲ್ಲದೆ ಜೀವ ಹಿಂಡಿದಂತಿದೆ

 

ಬಣ್ಣವಿಲ್ಲದ ನೀರಿನ ರುಚಿ ತೋರಿಸುವಳು

ತುಂಬಿ ಹರಿಯುತ ಶಂಖವ ಮೊಳಗಿಸುವಳು

ತುಳುಕುತ ಹಾಲ್ನೋರೆಯನು ಕಣ್ತುಂಬಿಸುವಳು

ಕಮರಿದ ಕನ್ನಡಿಗರ ಮುಖಗಳ ಬೆಳಗಿಸುವಳು 

 

ಕಾವೇರಿಯಿಲ್ಲದ ಕರುನಾಡು ಅಸಾಧ್ಯ ಊಹಿಸಲು 

ರಾಜ್ಯ ರಾಜ್ಯಗಳ ನಡುವೆ ಬಿಕ್ಕಟ್ಟು ಪರಿಹರಿಸಲು

ಮನೆಯಂಗಳಕೆ ಕಾವೇರಮ್ಮ ಬಂದು ದಣಿವಾರಿಸಲು

ದೇವರಲ್ಲಿ ಪ್ರಾರ್ಥಿಸಿ ಕರ್ಪೂರದ ಆರತಿ ಎತ್ತಿಸಲು

 

ಓ ಮಳೆರಾಯ ಕಾವೇರಿಯ ಮಡಿಲು ತುಂಬಿಸು

ಪರಿಸರಕ್ಕೆ ಅವಶ್ಯಕವಾಗಿರುವ ನೀರನ್ನು ಸುರಿಸು

ಕಾವೇರಿದ ಬಿಸಿಲಿನ ಬೇಗೆಯಿಂದ ತಲ್ಲಣ ಗೊಳಿಸು

ದಾಹದ ಆಹಾಕಾರದಿಂದ ಜೀವಿಗಳ ಜೀವ ಉಳಿಸು.

-ಚಂದ್ರಶೇಖರ್ ಶ್ರೀನಿವಾಸಪುರ, ಕೋಲಾರ ಜಿಲ್ಲೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್