ಕಾವೇರಿ ತೀರ್ಪಿನ ಬಗ್ಗೆ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಬರೆಯೋಣ
ಗೆಳೆಯರೇ,
ಕಾವೇರಿ ನೀರು ಹಂಚಿಕೆಯ ತೀರ್ಪಿನಲ್ಲಿ ನಮಗೆ ಆಗಿರುವ ಅನ್ಯಾಯದ ಬಗ್ಗೆ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಬರೆಯೋಣ (ದಟ್ಸ್ ಕನ್ನಡದಲ್ಲಿ ಕೂಡ ಈ ಬಗ್ಗೆ ಬಂದಿದೆ). ದಯವಿಟ್ಟು ಹತ್ತು ನಿಮಿಷಗಳನ್ನು ಈಗಲೇ ಮೀಸಲಿಟ್ಟು ಬರೆಯೋಣ. ಆಮೇಲೆ ಅಂತ ಮುಂದೂಡುವುದು ಬೇಡ.
"ನಮ್ಮ ಒಂದು ಪತ್ರದಿಂದ ಏನು ತಾನೇ ಆಗಲು ಸಾಧ್ಯ?" ಅಂತಲೋ, ಅಥವಾ "ಅಯ್ಯೋ, ಇವೆಲ್ಲ ಎಲ್ಲಿ ಉಪಯೋಗ ಆಗುತ್ತೆ" ಎಂದೋ, ಸಿನಿಕವಾದ ಅನುಮಾನವನ್ನು ಮಾತ್ರ ದಯವಿಟ್ಟು ನಮ್ಮಲ್ಲಿ ಮೂಡಲು ಬಿಡುವುದು ಬೇಡ. ಈ ಅನ್ಯಾಯ ಬರಿಯ ಕಾವೇರಿ ನದಿಯ ನೀರಿನ ಹಂಚಿಕೆಗಾದದ್ದಲ್ಲ, ನಮ್ಮ ನಾಡು-ನುಡಿಗೇ ಬಿದ್ದಿರುವ ಪೆಟ್ಟು ಎಂದೇ ನನ್ನ ಭಾವನೆ. ಹಾಗಾಗಿ ಈ ವಿಚಾರದಲ್ಲಿ ಬೇರೆ ರೀತಿಯ ಅನುಮಾನಗಳು ನಮ್ಮ ಉತ್ಸಾಹವನ್ನು ಕೊಲ್ಲದಿರಲಿ. ನಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಇರುವ ಎಲ್ಲ ಸೌಲಭ್ಯಗಳನ್ನೂ, ನಮ್ಮ ಕೈಲಾದ ರೀತಿಯಲ್ಲಿ ಬಳಸಿಕೊಳ್ಳೋಣ. ನಮ್ಮ ಹತ್ತು ನಿಮಿಷ ತಾನೇ ನಾವು ವ್ಯಯ ಮಾಡಬೇಕಾಗಿರೋದು? ಇನ್ನೇನೋ ಅಲ್ಲವಲ್ಲ! ಬನ್ನಿ, ಕೈಜೋಡಿಸಿ. ಸಂಪದ ಓದುಗರಿಂದಲೇ ನೂರಾರು ಸಂಖ್ಯೆಯಲ್ಲಿ ಪತ್ರಗಳು ಹೋಗಲಿ ಎಂದು ನನ್ನ ಕಳಕಳಿಯ ವಿನಂತಿ.
ಪ್ರಧಾನಿಗಳಿಗೆ ಪತ್ರಿಸಲು ಈ ಕೊಂಡಿ ಬಳಸಿ: http://pmindia.nic.in/write.htm
ರಾಷ್ಟ್ರಪತಿಗಳಿಗೆ ಪತ್ರಿಸಲು ಈ ಕೊಂಡಿ ಬಳಸಿ: http://presidentofindia.nic.in/scripts/writetopresident.jsp
- ಶ್ಯಾಮ್ ಕಿಶೋರ್