ಕಾವ್ಯದ ಯುದ್ಧ

ಕಾವ್ಯದ ಯುದ್ಧ

ವಿಶ್ವ ಕವಿತೆಯ ದಿನದಂದು,
ಕಾವ್ಯವೊಂದು ಕೋವಿಯ ಎದುರಲ್ಲಿ
ಯುದ್ಧಕ್ಕೆ ನಿಂತಿದೆ,,
ಮದ್ದುಗುಂಡುಗಳಿಗೆ
ಸಾಲುಗಳ ಎದೆಯೊಡ್ಡಿ
ಅಕ್ಷರಗಳನ್ನು ಹರಿತಗೊಳಿಸಿ,
ಪ್ರೇಮಿಸುವ ಧೈರ್ಯವಿದೆಯೇ ನಿನಗೆ ಕೋವಿಯೇ?
ಎಂದು ಸವಾಲೊಡ್ಡಿದೆ,
ಕೊಲ್ಲುವುದು, ಅದೆಷ್ಟು ಸುಲಭ,,,,
ಬಾ ಇಲ್ಲಿ ಕೋವಿ,,,
ಹುಟ್ಟಿಸು ನೀನು ಕಾವ್ಯದ ಒಂದು ಪದವನ್ನು,,,,
ಹೊರಡಿಸು ನಿನ್ನ ಟ್ರಿಗರ್ರ್-ನಲ್ಲಿ ಒಂದು ಪ್ರೇಮ ಕವಿತೆಯನ್ನು.
ಎಂದು ಕಣ್ಣಲ್ಲೇ ಆಹ್ವಾನಿಸಿದೆ,,,
ಎ ಕೋವಿ,
ನೀನು ಇದ್ದಲ್ಲಿ ದ್ವೇಷದ ಕಿಡಿಯೊಂದು ಇರಲೇ ಬೇಕು,,
ನಾನು ಪ್ರೇಮ ಕಾವ್ಯ! ನಿನ್ನ ಹಾಗಲ್ಲ,,,,,,
ನಾ ಹೊಕ್ಕ ಎದೆಯೊಳಗೆ ಉಲ್ಲಾಸದ ಹೊಂಬಾಳೆ,,,
ನನ್ನ ಅರ್ಥೈಸಿಕೊಂಡ ಮನದೊಳಗೆ ಎಡೆಬಿಡದ ಪ್ರೀತಿಯ ಮಳೆ,,
ಎಂದೆಲ್ಲಾ ಕೋವಿಯ ಕೊಳವೆಗೆ ಸಂದೇಶ ರವಾನಿಸಿದೆ.
ನನ್ನ ಒಂದು ಸಾಲನ್ನು,,,
ಈ ಪ್ರಪಂಚದ ಎಲ್ಲಾ ಕೋವಿಗಳೂ ಸೇರಿದರೂ ಅಳಿಸಲಾರಿರಿ,,,
ನೀವು ಬರಿಯ ಭೌತಿಕ ದುರಾಸೆಯ ಪ್ರತೀಕ,,,,
ನಾನು ಪ್ರತಿ ಮನದ ಹೊಂಗನಸ ಮಧುಪಾಕ,,,,
ನನ್ನ ಒಂದು ಅಕ್ಷರವನ್ನು ನೀವು ಅರ್ಥೈಸಿಕೊಳ್ಳುವಿರಾದರೆ,,,,,
ಜಗದೊಳಗೆ ನೀವು ಪ್ರೇಮಮಯವಾಗಿ ಕೋವಿಗಳೇ,,,,,
ನಿಮಗೆ ವಿಶ್ವ ಕಾವ್ಯ ದಿನದ ಶುಭಾಶಯಗಳು,,,,,

Share this:

 

Comments

Submitted by kavinagaraj Fri, 03/25/2016 - 14:48

ಪ್ರೀತಿಸುವ ಕೋವಿಗಳೂ ಇರುತ್ತವೆ! ಶಿಷ್ಟ ರಕ್ಷಣೆ, ದುಷ್ಟ ಶಿಕ್ಷಣೆ ಮಾಡುವ ಕೋವಿಗಳು ಈ ಸಾಲಿಗೆ ಸೇರುತ್ತವೆ.