ಕಾವ್ಯ ಕನ್ನಿಕೆ

ಕಾವ್ಯ ಕನ್ನಿಕೆ

ಕವನ

ಇತ್ತಿಚೆಗೆ ಅವಳ್ಯಾಕೋ ಒಲಿಯುತ್ತಿಲ್ಲ.
ಮೊದಲೆಲ್ಲಾ ನೆನೆದೊಡನೇ ಮನವ ಆವರಿಸುತ್ತಿದವಳು
ಈಗ ಅಷ್ಟಾಗಿ ಕಾಡುತ್ತಿಲ್ಲ.
ಅಂದೆಲ್ಲಾ ಉಸಿರಲ್ಲಿ ಉಸಿರಾಗಿ ಬೆರೆತವಳು,
ಭಾವಲೋಕದಿ ರಾಣಿಯಾಗಿ ಮೆರೆದವಳು.
ಕಾಗದದಿ ಅಕ್ಷರದುಡುಗೆಯ ತೊಟ್ಟು ನಲಿದವಳು,
ಇಂದೇಕೋ ಹಿಡಿತಕ್ಕೆ ಸಿಗುತ್ತಿಲ್ಲ.
ಕಾವ್ಯಝರಿಯ ಭಾವದ ಒರತೆಯು ಅವಳು,
ಅಂದೆಲ್ಲಾ ನೆನೆದೊಡನೇ ಪದವಾಗಿ ನಲಿದಾಡುವವಳು ಇಂದೆಕೋ ಕರೆದರೂ ಕೇಳುತ್ತಿಲ್ಲ.
-ನಂದೀಶ್ ಬಂಕೇನಹಳ್ಳಿ