ಕಿಂಗ್ ಖಾನ್​ ಗೆ ಫೈಟ್ ಹೇಳಿಕೊಟ್ಟ ಕನ್ನಡಿಗ !

ಕಿಂಗ್ ಖಾನ್​ ಗೆ ಫೈಟ್ ಹೇಳಿಕೊಟ್ಟ ಕನ್ನಡಿಗ !

ಬಿ ಟೌನ್​ ನಲ್ಲಿ ಕನ್ನಡಿಗನ ರಂಗು ಹೆಚ್ಚಿದೆ. ಕಿಂಗ್ ಖಾನ್ ಶಾರುಖ್ ಕನ್ನಡಿಗನ ಸಾಹಸ ಮೆಚ್ಚಿದ್ದಾರೆ. ಫೇಸ್ ಬುಕ್​ ನಲ್ಲೂ ಶಾರುಖ್ ಪ್ರಶಂಸೆ ಮಾಡಿದ್ದಾರೆ. ಆಕ್ಷನ್ ಡೈರೆಕ್ಟರ್ ರವಿ ಸರ್ ಅಂತಲೂ ಸಂಭೋದಿಸಿದ್ದಾರೆ.

ಕನ್ನಡದ ನಿರ್ದೇಶಕ. ಹೆಸರೂ ಅಷ್ಟೇ ಆಕರ್ಷಕ. ಕುಂಚ ಕಲಾವಿದನನ್ನ ನೆನಪಿಸುತ್ತದೆ. ಆದರೆ, ಚಿತ್ರ ಕಲಾವಿದ ಅಲ್ಲ. ಈ ಕನ್ನಡಿಗ ಸಾಹಸ ನಿರ್ದೇಶಕ. ಈಗ ಮುಂಬೈ ಹೀರೋಗಳ ಹಾಟ್​ ಫೇವರಿಟ್. ಸಲ್ಮಾನ್ ರಿಂದ ಹಿಡಿದು, ಶಾರುಖ್ ಖಾನವರೆಗೂ ಈ ಸಾಹಸ ನಿರ್ದೇಶಕ ಕೆಲಸ ಮಾಡಿದ್ದಾರೆ.  ಶಾರುಖ್ ಖಾನ್ ಅಂತೂ ಈ ಕನ್ನಡಿಗನ ಕೆಲಸಕ್ಕೆ ಫಿದಾ ಆಗಿದ್ದಾರೆ. ಬನ್ನಿ, ಯಾರದು ಅಂತ ನೋಡೋಣ.

ಸಾಹಸ ನಿರ್ದೇಶಕ ರವಿ ವರ್ಮ. ಮುಂಬೈಯಲ್ಲಿ ಮಿಂಚುಂತ್ತಿದ್ದಾರೆ. ಬಾಲಿವುಡ್​ ನ ಖಾನ್ ತ್ರಯರ ಹಾಟ್​ ಫೇವರಿಟ್ ಸ್ಟಂಟ್ ಡೈರೆಕ್ಟರ್​ ಆಗಿದ್ದಾರೆ. ಸಲ್ಮಾನ್ ಖಾನ್, ಆಮೀರ್ ಖಾನ್ ಮತ್ತು ಶಾರುಖ್ ಖಾನ್ ರಿಗೆ  ರವಿ ವರ್ಮ ತುಂಬಾ ಇಷ್ಟ. ಶಾರುಖ್ ಅಭಿನಯದ ರಯೀಸ್ (Raees) ಚಿತ್ರಕ್ಕೆ ರವಿ ವರ್ಮ ಸಾಹಸ ನಿರ್ದೇಶನ ಇದೆ. ಡೇಂಜರಸ್ ಸ್ಟಂಟ್ ಮಾಡಿರೊ ಶಾರುಖ್, ಸಾಹಸ ನಿರ್ದೇಶಕ ರವಿ ವರ್ಮ ಬಗ್ಗೆ ಹೀಗೆ ಬರೆದಿದ್ದಾರೆ.

ರವಿ ವರ್ಮ ಬರೋಬ್ಬರಿ 45 ದಿನ ರಯೀಸ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಮಟನ್ ಮಾರುಕಟ್ಟೆಯಲ್ಲಿ ಬರೋ ಫೈಟ್ ದೃಶ್ಯದಲ್ಲಿ ಕುರಿ ತಲೆಯನ್ನೆ ವೆಪನ್​ ಆಗಿ, ಶಾರುಖ್ ಎದುರಾಳಿಗಳನ್ನ ಹೊಡೆದು ಹಾಕ್ತಾರೆ. ಇದು ಒಂದು ವಿಶೇಷ. ಹಾಡಲ್ಲಿ ಬರೋ ಒಂದು ಸಾಹಸ ಇದೆ. ಅದರಲ್ಲಿ ಗಾಳಿಯಲ್ಲಿ ತೂರಿಕೊಂಡು ಬರೋ ಶಾರುಖ, ಶೂಟ್ ಔಟ್ ಮಾಡ್ತಾರೆ. ಇದು ಮತ್ತೊಂದು ಸ್ಪೆಷಾಲಿಟಿ. ರಯೀಸ್ ಚಿತ್ರದಲ್ಲಿ ರವಿ ವರ್ಮ ಸಾಹಸದ ರಂಗು ನೋಡುಗರಿಗೆ ನಿಜಕ್ಕೂ ಕಿಚ್ಚು ಹಚ್ಚಲಿದೆ.

ಇಡೀ ರಯೀಸ್ ಚಿತ್ರಕ್ಕೆ ರವಿ ವರ್ಮ ಸಾಹಸ ಮಾಡಿದ್ದಾರೆ. ಚಿತ್ರದ ಪ್ರತಿ ಸಾಹಸದಲ್ಲೂ ಒಂದೊಂದು ವಿಶೇಷತೆ ಇದೆ. ಅದನ್ನ ಮೆಚ್ಚಿನೆ ಶಾರುಖ್ ಖಾನ್, ಸಾಹಸ ನಿರ್ದೇಶಕ ರವಿ ವರ್ಮಗೆ ‘ಆಕ್ಷನ್ ಡೈರೆಕ್ಟರ್ ರವಿ ಸರ್’ ಅಂತ ಬರೆದಿರೋದು. Anyways. ರವಿ ವರ್ಮ ಕನ್ನಡದಲ್ಲೂ ಹೊಳೀತಿದ್ದಾರೆ. ಬಾಲಿವುಡ್​ ನಲ್ಲೂ ಮಿಂಚ್ತಾಯಿದ್ದಾರೆ.ತಮಿಳಿನ ನಟ ವಿಕ್ರಮ್ ಅಭಿನಯದ ಮುಂದನ ಚಿತ್ರಕ್ಕೂ ರವಿ ವರ್ಮ ಸಾಹಸ ನಿರ್ದೇಶಕರು. ಹೀಗೆ ಸಾಗಲಿ ಇವರ ಸಾಹಸ ಪಯಣ.

-ರೇವನ್