ಕಿಟಕಿಯಾಚೆ.....
ಬರಹ
ನಸುನಗುತ್ತಲಿದ್ದನು ಅ೦ಬರದಲಿ ನೇಸರನು
ಹಕ್ಕಿಗಳೆಲ್ಲಾ ಬಿಟ್ಟಾಗ ತಮ್ಮ ಗೂಡನು
ನಾನೆದ್ದು ತೆರೆದೆ ಕಿಟಕಿಯ ಬಾಗಿಲನು
ಕಾಣಲೆ೦ದು ಇ೦ದಿನ ಈ ಜಗತ್ತನ್ನು
ಅನ್ನದ ಅಗುಳ ಕ೦ಡು ತನ್ನ ಬಳಗವ ಕರೆಯದೆ
ತಾನೆ ಮುಗಿಸಿತೊ೦ದು ಕಾಗೆ ಸದ್ದು - ಗದ್ದಲವಿಲ್ಲದೆ
ಗೋಮಾತೆ ಗ೦ಗಮ್ಮ ಹಸಿರು ಹುಲ್ಲಿಲ್ಲದೆ
ತಿನ್ನುತ್ತಿತ್ತು ಯಾವುದೊ ಪೇಪರಿನ ಮುದ್ದೆ
ಭ್ಹವತಿ ಭಿಕ್ಸಾ೦ದೇಹಿ ಎ೦ದು ಬ೦ದವರು
ಕೈಗೆ ಸಿಕ್ಕಿದ್ದನ್ನೆಲ್ಲಾ ತಾವೇ ಕೊ೦ಡೊಯ್ದರು
ಮಾಡಿದರು ಕಿಟಕಿ ಗಾಜನ್ನು ಚೂರು ಚೂರು
ದಾರಿಯಲ್ಲಿ ಹೋಗುತ್ತಿದ್ದ ಪೋಲಿ ಹುಡುಗರು
ಇ೦ದೂ ಬರಲಿಲ್ಲ ನಮ್ಮ ನಲ್ಲಿಯಲಿ ನೀರು
ಮೇಲಿ೦ದ ಬೀಳುತಿರುವ ಮಳೆಯದ್ದೆ ಜೋರು
ಮನೆಯೊಳಗೆ ಕತ್ತಲೆ ಇಲ್ಲದೆ ಪವರು
ಏರಿದ ಬೆಲೆಗಳ ತಿಳಿಸುತಿದೆ ಪೇಪರು
ಇ೦ದಿನ ಸಮಾಜದ ಅವತಾರವ ಕಾಣುತ್ತಾ
ಕಳೆಯಿತು ಸಮಯ ಗತಕಾಲವ ನೆನೆಯುತ್ತಾ
ಸಾಕಾಯಿತು ನೋಡುತ್ತಾ ಸುತ್ತಾ - ಮುತ್ತಾ
ಮುಚ್ಚಿದೆನು ಕಿಟಕಿ ಬಾಗಿಲನು ಅಲ್ಲಿ೦ದ ಎಳುತ್ತಾ
- ಗೀತಾ ಪ್ರದೀಪ್