ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು
ಕಿತ್ತಳೆ ಹಣ್ಣಿನ ಸಿಪ್ಪೆ -೩ ಹಣ್ಣಿನದ್ದು, ಅರಶಿನ ಹುಡಿ - ೧ ಚಮಚ, ಸ್ವಲ್ಪ ಇಂಗು, ಬೆಳ್ಳುಳ್ಳಿ-೬ ಎಸಳುಗಳು, ಹಣಸೇ ಹಣ್ಣು, ರುಚಿಗೆ ಉಪ್ಪು, ರುಚಿಗೆ ಬೇಕಾದಷ್ಟು ಬೆಲ್ಲ, ಕಾಯಿ ಮೆಣಸು (ಸೂಜಿ ಮೆಣಸು/ಗಾಂಧಾರಿ ಮೆಣಸು) ೫-೬, ಶುಂಠಿ ಸಣ್ಣ ಚೂರು, ತುಪ್ಪ. ಸಾರಿನ ಹುಡಿ ೨ ಚಮಚ
ಕಿತ್ತಳೆ ಸಿಪ್ಪೆಯನ್ನು ಸ್ವಚ್ಛಗೊಳಿಸಿ, ಸಣ್ಣಗೆ ಕತ್ತರಿಸಿಡಿ. ಬಾಣಲೆಯಲ್ಲಿ ಒಗ್ಗರಣೆಗೆ ತಯಾರು ಮಾಡಿ, ಅದು ತಯಾರಾಗುವಾಗ, ಮೊದಲೇ ತುಂಡು ಮಾಡಿದ ಸಿಪ್ಪೆಯನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು. ಒಗ್ಗರಣೆಗೆ ತುಪ್ಪ ಬಳಸಿದರೆ ಒಳ್ಳೆಯದು. ಅರಶಿನ ಹುಡಿ,ಇಂಗು, ಬೆಳ್ಳುಳ್ಳಿ, ಕರಿಬೇವು ಸೇರಿಸಬೇಕು. ಫ್ರೈ ಆದಾಗ, ಹುಣಿಸೇ ಹಣ್ಣು ಕಿವುಚಿದ ನೀರು, ಉಪ್ಪು, ಬೆಲ್ಲ(ಜಾಸ್ತಿ), ಐದಾರು ಕಾಯಿಮೆಣಸು, ಸಾರಿನ ಪುಡಿ ಹಾಕಿ ಕುದಿಸಬೇಕು. ಮಂದ ಉರಿಯಲ್ಲಿ ಕುದಿಸಿ ಕೆಳಗಿಳಿಸಬೇಕು. ತುಂಬಾ ನೀರು ಹಾಕಬಾರದು. ಈ ಗೊಜ್ಜು ಸ್ವಲ್ಪ ಮಂದ(ದಪ್ಪ)ವಾಗಿರಬೇಕು. ಅನ್ನ ,ತುಪ್ಪ ಅಥವಾ ಕೊಬ್ಬರಿ ಎಣ್ಣೆ ಬಿಸಿ ಅನ್ನಕ್ಕೆ ಸೇರಿಸಿ ತಿನ್ನಲು ಈ ಗೊಜ್ಜು ಬಹಳ ರುಚಿ.