ಕಿತ್ತೋದ್ ಆ ದಿನ ...!!!
ಕವನ
ಮೊದಲ ಮಳೆ ಹನಿಯ ಹಾತೊರೆಯೊ
ಚಾತಕ ಹಕ್ಕಿಯು ನಾ !!
ನಿನ್ನ ತುಟಿಯಂಚಿನ ನಗೆಯ
ಮರ್ಮವ ಹುಡುಕುತಿರುವೆನು ನಾ !
ಮಿಂಚುತಿತ್ತು ಹನಿ ಇಬ್ಬನಿಯು
ಮುತ್ತಿನ ಹಾಗೆ,
ಸೇರಿತ್ತು ನನ್ನ ಕಣ್ಣಂಚಿನ ನೋಟದಲಿ,
ನಿನ್ನ ನಗೆಯ ಬಯಸೋ
ಪುಟ್ಟ ಹಕ್ಕಿಯು ನಾ !
ಕೂಡಿಟ್ಟಿರುವೆ ಆ ನಿನ್ನ ಪ್ರತಿ
ನಗೆಯ,
ಎನ್ನ ಹೃದಯ ಚಾದರದಿ,
ಸಾಧಿಸ ಹೊರಟೆ ಆ ಪುಟ್ಟ ನಗೆಯ
ನೆನೆಯುತ,
ಎನ್ನೊಡೆಯ 'ಶಶಿಗುರು'ವಿನ ಆಟದಿ,
ಬಯಸುತಿರುವೆನು ನಿನ್ನ ನಗುವ
ಕಾಣದ ಲೋಕದಲಿ...!!
***ಶಶಿಗುರು
Comments
ಉ: ಕಿತ್ತೋದ್ ಆ ದಿನ ...!!!
ಭಾವನಾತ್ಮಕ ಸಾಲುಗಳು,,,,, ಮನಸೆಳೆಯುತ್ತವೆ,,,
In reply to ಉ: ಕಿತ್ತೋದ್ ಆ ದಿನ ...!!! by naveengkn
ಉ: ಕಿತ್ತೋದ್ ಆ ದಿನ ...!!!
ಧನ್ಯವಾದಗಳು ನವೀನ್ ಅವರೇ....!!! :)