ಕಿರಿಕಿರಿ

ಕಿರಿಕಿರಿ

ನಮ್ಮ ದೇಶಕ್ಕೆ ಸ್ವಂತಂತ್ರ ಬಂದು ೭೧ ವರ್ಷ ಆಯಿತು , ಆದರೂ ನಮ್ಮ ಸಮಾಜ ಪುರಷ ಪ್ರಧಾನ ವಾಗಿಯೇ ಇದೆ , ಇಲ್ಲಿ ನಾನು ಹೇಳುತಾ ಇರೋ ವಿಷ್ಯ ಸಣ್ಣದಾದರೂ ಯೋಚಿಸಬೇಕಿದೆ , ಯೋಚಿಸೋಣ , ಸಾಧ್ಯವಾದರೆ ಬದಲಾಗೋಣ .

ನಾನು ನನ್ನ ಸ್ನೇಹಿತ ಇತೀಚಿಗೆ ಒಂದು ಸಿನಿಮಾ ನೋಡೋಕ್ಕೆ ಮಂತ್ರಿ ಸ್ಕ್ವೇರ್ ಗೆ ಹೋಗಿದೀವಿ , ಅದು ವಾರದ ಮಧ್ಯೆ , ನಾವು ಹೋಗಿದ್ದ ಸಮಯದಲ್ಲಿ ಅಲ್ಲಿ ಒಬ್ಬ ಹುಡುಗಿ ಒಬ್ಬಳೇ ಸಿನಿಮಾ ನೋಡಲು ಬಂದಿದ್ಳು , ಆಕೆ ನಮ್ಮ ಮುಂದಿನ ಸಾಲಿನಲ್ಲಿ ಆಸೀನ ವಾಗಿದ್ದಳು , ಸಿನಿಮಾ ಶುರು ಆಗೋ ವೇಳೆಗೆ ಅಲ್ಲಿಗೆ ಒಬ್ಬ ವಿಚಿತ್ರ ವೇಷದಾರಿ ಆಗಮಿಸಿದ , ಆತ ಆಕೆ ಒಬ್ಬಳೇ ಇರೋದನ ನೋಡಿ , "ಹೇ ಬೇಬ್ ಯು ನೀಡ್ ಕಂಪನಿ , ಕ್ಯಾನ್ I ಜಾಯಿನ್ ಯು , ಟೇಕ್ ಪೆಪ್ಸಿ " ಅಂತ ಕೈ ಮುಂದೆ ಚಾಚಿದ , ಆಕೆ ಅವನಿಗೆ ಬಯ್ದು ಕಳಿಸಿದಳು . ಸ್ವಲ್ಪ ಸಮಯದಲ್ಲಿ ಮತ್ತೆ ಒಬ್ಬ ಹಾಗೆ ಮಾಡಿದ , ಆಕೆ ಬಯ್ದು ಕಳಿಸಿದಳು.

ಸಿನಿಮಾ ಮುಂದು ವರೆಯಿತು , ಅಲ್ಲಿ ಒಂದು ಹುಡುಗರ ಗುಂಪು ಬಂದಿತು , ಅವರ ಈಕೆ ಒಬ್ಬಳೇ ಇರುವುದನ್ನ ಗಮನಿಸಿ ಅವಳ ಪಕ್ಕಕೆ ಬಂದು ಕೂತು ತರಲೆ ಶುರು ಮಾಡಿದರು ಆಕೆ ಗಾಬರಿ ಆಗಿ ನಮ್ಮ ಕಡೆ ನೋಡುತ ಇದ್ದಳು , ನಾನು ನನ್ನ ಸ್ನೇಹಿತ ಇದನ್ನ ಅರಿತು ಆಕೆ ಯಾ ಪಕ್ಕಕೆ ಅಂದರೆ ಇನೊಂದು ಕಡೆ ಬಂದು ಪರಿಚಯದವರಂತೆ ಕೂತು ಸಿನಿಮಾ ನೋಡುತ ಇದೀವಿ ಸ್ವಲ್ಪ ಸಮಯದಲ್ಲಿ ಅಲ್ಲಿದ್ದ ಹುಡುಗರ ಗುಂಪು ಹೊಯಿತು

ಇನ್ನು ಮುಂದೆ ನಡಿದಿಡು ಬೇಡವಾದ ವಿಚಾರ , ಆದರೆ ನಾವು ಹೆಣ್ಣಿಗೆ ಗೌರವಿಸೋದನ್ನ ಕಲಿಯ ಬೇಕು , ಮತ್ತೆ , ಇದನ ನಮ್ಮ ಮುಂದಿನ ಪೀಳಿಗೆ ಅಂದರೆ ನಮ್ಮ ಮಕ್ಕಳಿಗೆ ಕಲಿಸಬೇಕು

ಇಂದ ,
ಹರೀಶ್ ಎಸ್ ಕೆ