ಕಿರುತೆರೆಯ ಧಾರಾವಾಹಿ-ಸೀರಿಯಲ್ಗಳ ಹೆಸರು-ಶೀರ್ಷಿಕೆಗಳ ಹಿನ್ನೋಟ ಮತ್ತು ಮುನ್ನೋಟ

ಕಿರುತೆರೆಯ ಧಾರಾವಾಹಿ-ಸೀರಿಯಲ್ಗಳ ಹೆಸರು-ಶೀರ್ಷಿಕೆಗಳ ಹಿನ್ನೋಟ ಮತ್ತು ಮುನ್ನೋಟ

ಕೊರೋನಾ-ದಂತಹ ಕೋವಿಡ್-೧೯ ರ ಅಪಾಯದ ಕಾಲದಲ್ಲಿ, ಬಹಳ ಮಟ್ಟಿಗೆ ಜನರು, ಅದರಲ್ಲೂ ಮಹಿಳೆಯರು ಮತ್ತು  ವೃದ್ದರು  ಮನೆಯಲ್ಲಿ  ಶಾಂತಿಯುತವಾಗಿರಲು ನಮ್ಮ ಕನ್ನಡ ಕಿರುತೆರೆಯ ಟಿ *ವಿ * ಸೀರಿಯಲ್ ಗಳ ಸಹಾಯ ಶ್ಲಾಘನೀಯ  ಎಂಬುದೇ ನನ್ನ ಪ್ರಾಮಾಣಿಕ ಅನಿಸಿಕೆ!
ಅವುಗಳಿಗೆ ಇನ್ನೊಮ್ಮೆ ಧನ್ಯವಾದಗಳನ್ನು ಅರ್ಪಿಸಿ ಮುಂದುವರಿಸುವೆನು**

ಕನ್ನಡ ಕಿರುತೆರೆಯ ಟಿ *ವಿ * ಸೀರಿಯಲ್ ಗಳ ಹೆಸರು/ ಶೀರ್ಷಿಕೆಗಳನ್ನು ಎಲ್ಲಿಂದ ಹುಡುಕಿ ಆರಿಸಿ  
ಆಮೇಲೆ ಆಯ್ಕೆ   ಮಾಡಿ  ಕೊಳ್ಳುವರೋಎಂಬುದೇ  ನನಗೆ ಕಗ್ಗಂಟಾಗಿದೆ* 
ಅದಕ್ಕಾಗಿಯೇ ನನಗೆ ಸೀರಿಯಲ್ ಗಳನ್ನು ವೀಕ್ಷಿಸುವುದಕ್ಕಿಂತ ಅವುಗಳ  ಹೆಸರು/ ಶೀರ್ಷಿಕೆಗಳನ್ನು ವಿಶ್ಲೇಷಿಸುವುದರಲ್ಲಿಯೇ ಎಲ್ಲಿಲ್ಲದ ಕುತೂಹಲ* 
ಟಿ *ವಿ * ಸೀರಿಯಲ್ ಗಳ ಹೆಸರು/ ಶೀರ್ಷಿಕೆಗಳ ನಾಮಕರಣ ಅತ್ಯಂತ ಕ್ಲಿಷ್ಠ ಹಾಗೂ ಜಟಿಲವಾದ ಸಮಸ್ಯೆ ಎಂದೇ ಇಪ್ಪತ್ತು ವರ್ಷಗಳ ಹಿಂದೆ ನನಗೆ ಅನ್ನಿಸಿದ್ದು  ಇನ್ನೂ ಅದು ಚಿದಂಬರ ರಹಸ್ಯ
ವಾಗಿಯೇ ಉಳಿದಿದೆ!

 ಹಿಂದಿನಿಂದ ಇಂದಿನವರೆಗೆ,  ಒಮ್ಮೆ ಕಿರುತೆರೆಯ ಟಿ *ವಿ * ಸೀರಿಯಲ್ ಗಳ ಹೆಸರುಗಳನ್ನು  
ಒಮ್ಮೆ ಮೆಲಕು ಹಾಕುತ್ತ ಹೋದರೆ***

'ಮುಕ್ತ ಮುಕ್ತ' ಸೀರಿಯಲ್ ನ್ನು  ಆಗಿನ ಕಾಲದಲ್ಲಿಯೇ  ನೋಡಿದ  ಕಾರಣ ನನಗೆ ಕನ್ನಡ 
ಸೀರಿಯಲ್ ಗಳನ್ನು  ನೋಡದೆಯೇ ಈ ಜೀವನದಿಂದ ಮುಕ್ತಿಹೊಂದಲು ಸಾಧ್ಯವಿಲ್ಲ ಅನ್ನಿಸಿತು।

ಈಗ ನೋಡಿದರೆ  ಮನೆಯಲ್ಲಿ  ಯಾರ ಮದುವೆ ನಡೆಯಲಿ ಬಿಡಲಿ, 'ಮೂರುಗಂಟು' ಹಾಕಿ   'ಮಾಂಗಲ್ಯ' ಕಟ್ಟಿ   'ಅಗ್ನಿಸಾಕ್ಷಿ' ಯಾಗಿ, 'ಜೊತೆ ಜೊತೆಯಲಿ', 'ಪುಟ್ಟಗೌರಿ  ಮದುವೆ' ಮತ್ತು 'ಮಂಗಳಗೌರಿ  ಮದುವೆ' , 'ಪುನರ್ವಿವಾಹ' ಗಳು ಕೂಡಾ ನಡೆದು  ಹೋದವು* ಈ ಎಲ್ಲಾ ಹೆಸರುಗಳು ಮದುವೆ ಅಥವಾ ತಾಳಿ ಎಂಬ ಶಬ್ಧದ ಅರ್ಥದ ಆಕರ್ಷಣೆ ಹೊಂದಿವೆ*

ಸೀತೆ, ಗೋಕುಲದಲ್ಲಿ ಸೀತೆ,  ಸೀತಾ ವಲ್ಲಭ - ಇಂತಹ ಧಾರಾವಾಹಿ  ಶೀರ್ಷಿಕೆಗಳಲ್ಲಿ "ಸೀತೆ"
ಎಂಬ ಪದವನ್ನು ನಮ್ಮವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ**

ಒಂದು ಸೀರಿಯಲ್ ಹೆಸರು    ಲಕ್ಷ್ಮಿ ಬಾರಮ್ಮ ಎಂದಿದ್ದರೆ ಇನ್ನೊಂದಕ್ಕೆ 
ದರಿದ್ರ  ಲಕ್ಷ್ಮಿಯರು, ಮತ್ತೊಂದಕ್ಕೆ ಮುದ್ದುಲಕ್ಷ್ಮಿ ಎಂದು ಇಟ್ಟರು*  ಒಟ್ಟು ಈ ಹೆಸರುಗಳು ಲಕ್ಷ್ಮಿ ಯಾ ಸುತ್ತ ತಿರುಗಿದವು*
'ಮೊದಲ ಮನೆ', 'ಮನೆಯೊಂದು ಮೂರು ಬಾಗಿಲು' ಮುಂತಾದ ಹೆಸರುಗಳು 
ಮನೆಯನ್ನೇ ನೆಚ್ಚಿ ಕೊಂಡಿವೆ*

'ರಾಧಾ-ರಮಣ', 'ನನ್ನರಸಿ ರಾಧೆ' ಎಂಬ ಹೆಸರುಗಳು ರಾಧಾ ಕೃಷ್ಣ
 ಶಬ್ದಗಳನ್ನು  ಅವಲಂಬಿಸದೆ  'ಸೀತಾ ವಲ್ಲಭ' , 'ಸೀತೆ' ಇಂತಹ 
ಹೆಸರುಗಳು ಸೀತಾ ರಾಮ ಶಬ್ದಕ್ಕೆ ಪ್ರಾಮುಖ್ಯ ಕೊಟ್ಟಿವೆಯೇನೋ ಎನ್ನಿಸಿದೆ*
ಮಾಡರ್ನ್  ಅಜ್ಜಿಯೊಬ್ಬರು ಆಂಡ್ರಾಯ್ಡ್-ಶಾಸ್ತ್ರ  ಪ್ರಕಾರ  'ರಾಧಾ-ಕಲ್ಯಾಣ' ವನ್ನೂ ನೋಡಿದವರು 'ರಾಧಾ-ರಮಣ' ನನ್ನೂ ನೋಡಲೇಬೇಕು ಎಂಬ  ಎಂದು ಹೇಳುತ್ತಿದ್ದರು*

'ರಾಧಾ-ರಮಣ' ಎಂದರೆ   ಶ್ರೀಕೃಷ್ಣ ಎಂದರ್ಥ ವಾದರೆ  'ಸೀತಾ ವಲ್ಲಭ'  ನೆಂದರೆ 
ಶ್ರೀರಾಮನೆಂದೇ ಅರ್ಥ*  ಆದರೆ ಇಲ್ಲಿ ಅರ್ಥ ಮುಖ್ಯವಲ್ಲ ಭಾವ ಅಂದರೆ ಭಾವನೆ ಮುಖ್ಯ*
ಅಂದರೆ 2021 ರ ನಂತರ  ಶ್ರೀ ಲಕ್ಷ್ಮೀ-ರಮಣ ಗೋವಿಂದ - ಎಂಬ ಧಾರಾವಾಹಿಯು ಬರಲೂ  ಬಹುದೇನೋ*
*
'ನಮ್ಮನೆ  ಯುವರಾಣಿ'  ಈಗಾಗಲೆ ಇಟ್ಟ ಹೆಸರಾದ ಕಾರಣ ಮುಂದಿನ 
ಸೀರಿಯಲ್ ಹೆಸರುಗಳ  ಲಿಸ್ಟ್ ನಲ್ಲಿ 'ಪಕ್ಕದಮನೆ ಮಹಾರಾಣಿ' , 'ನಮ್ಮೂರ   ಯುವರಾಣಿ', 'ಪಕ್ಕದಮನೆ ರಾಣಿ' ಎಂದೂ ಇಡಬಹುದು*

ಮಹಾಪರ್ವ, ಮಹಾಮಾಯಿ ಗಳು ಮಹಾ ಶಬ್ಧಕ್ಕೆ ಒತ್ತು  ಕೊಟ್ಟಿವೆ*

ಅಂದಿನ ಕಾಲದಲ್ಲಿ 'ಮಾಯಾಮೃಗ'  ವನ್ನೇ ನೋಡಿದ ನಾವೆಲ್ಲ ಇಂದು ಕಿರುತೆರೆಯಲ್ಲಿ 'ಸೀತೆ ' ಯನ್ನೇ  ನೋಡಬಹುದು * ೨೦೨೧ ರಲ್ಲಿ ಅಥವಾ ಅನಂತರ 'ಮಾರೀಚ' ಅಥವ 'ಮರೀಚಿಕೆ' ಎಂಬ ಹೆಸರಿನ ಸೀರಿಯಲ್  ನಮ್ಮ ಮುಂದೆ ಬರಬಹುದು **

ಅಂದಿನ ೧೯೯೦ರ ದಶಕದ  ಕಾಲದಲ್ಲಿ ಧಾರವಾಹಿಯಾದ  'ಗುಡ್ಡದ-ಭೂತ'  ವನ್ನೇ  ಪ್ರತಿದಿನ ವೀಕ್ಷಿಸಿ 
ಹೆದರಿದವರು, 'ಹರಹರ  ಮಹಾದೇವ' ಸೀರಿಯಲ್   ನೋಡಿ ಧೈರ್ಯ ತುಂಬಿಕೊಳ್ಳಲೂಬಹುದು 
ಯಾವುದನ್ನೇ ನೋಡಿದರೂ 'ಮನಸಾರೆ' ನೋಡಬೇಕು ಎಂದೇ ನನ್ನ ಅಭಿಪ್ರಾಯ*

'ಎಂಧು  ಮರೆಯದ  ಹಾಡು' ಕೇಳಿದ ನಂತರ ಮುಂದೆ  ನಾನೂ  'ಎದೆ  ತುಂಬಿ  ಹಾಡುವೆನು' 
 ಎಂಬ ಅಭಿಪ್ರಾಯಕ್ಕೆ ಬಂದರೂ 'ಕಾವ್ಯಾಂಜಲಿ' ತೃಪ್ತಿ ಪಟ್ಟು ನಾನೇ ಹಾಡಲು ಮುಂದಾಗಲಿಲ್ಲ।

ಕನ್ನಡತಿ ಎಮ್ ಹೆಸರು ಉತ್ತಮವಾಗಿದ್ದರಿಂದ ಮುಂದೆ 'ನಮ್ಮ ಕನ್ನಡತಿ', 
'ವೀರ ಕನ್ನಡತಿ' endu ಹೆಸಿರಿಡಲೂಬಹುದು*

ಈ ಮೊದಲು ನಾನು ಹೆಸರುಗಳನ್ನು ಹುಡುಕಿ ಆರಿಸುವುದು ತುಂಬಾ ಕಷ್ಟ 
ಎಂದು ತಿಳಿದಿದ್ದೆ*
ಆದರೆ ನಾನು 'ಮಿಥುನ-ರಾಶಿ' ಮತ್ತು 'ಅಶ್ವಿನಿ ನಕ್ಷತ್ರ' ಗಳನ್ನು ನೋಡಿದ ನಂತರ 
 ರಾಶಿಗಳ ಹೆಸರು ಒಟ್ಟು  ಹನ್ನೆರಡು  ಮತ್ತು ನಕ್ಷತ್ರಗಳ ಹೆಸರು ತುಂಬಾ ಇರುವುದುರಿಂದ 
೨೦೨೧ ರ ನಂತರದಲ್ಲಿ ಮುಂದಿನ ಸೀರಿಯಲ್ ಧಾರಾವಾಹಿಗಳಿಗೆ  ಹೆಸರಿಡುವುದು ಬಹಳ ಕಷ್ಟವೇನಲ್ಲ ಎನ್ನಿಸಿತು*
ಆಮೇಲಂತೂ 'ಯಶೋದೆ', 'ಗೀತಾ' ,'ಪಾರು','ಸರಸು','ಸೇವಂತಿ','ಇವಳು-ಸುಜಾತಾ','ಕಮಲಿ'  
ಎಂಬ ಹೇಸರುಗಳನ್ನು ಕೇಳಿದ ನಂತರ ಇನ್ನು ಮುಂದೆ  ಕಷ್ಟಪಟ್ಟು ಹುಡುಕಿ 
ಆರಿಸುವ ಕೆಲಸ  ಅಷ್ಟು ಕಷ್ಟವಲ್ಲ ಎಂದು ಅನಿಸಿತು*

'ರಥ ಸಪ್ತಮಿ' ಎಂಬ ಹೆಸರಿನ  ಡಾ* ಶಿವರಾಜ್ ಕುಮಾರ್ ರವರ ಅಭಿನಯದ  ಚಲನ ಚಿತ್ರವಿದ್ದರೂ ಅದೇ ಹೆಸರು ಲಕ್ಕಿ ಎನ್ನಿಸಿ ಧಾರಾವಾಹಿಗೆ ಸಹ 'ರಥ ಸಪ್ತಮಿ' ಎಂದೇ ಹೆಸರಿಟ್ಟರು*

ಕ್ರೇಜಿ  ಕರ್ನಲ್ 
ಫ್ಯಾಮಿಲಿ  ಪವರ್ 
ಗೆಳತಿ 
ಮಾರಿ ಕಣಿವೆ  ರಹಸ್ಯ 
ಪಡುವಾರಹಳ್ಳಿ  ಪಡ್ಡೆಗಳು
ಸಂಘರ್ಷ
ನಾಗಿಣಿ