ಕಿರುನಾಟಕ ಭಗತ್ ಸಿಂಗ್
ದೃಶ್ಯ ಒಂದು
(ಭಗತ್ ಸಿಂಗ್ ಸೆರೆಮನೆಯಲ್ಲಿ ಇರುತ್ತಾರೆ ಅವರನ್ನು ನೋಡಲು ಅವರ ತಾಯಿ ವಿದ್ಯಾವತಿ ಬರುತ್ತಾರೆ)
ವಿದ್ಯಾವತಿ:-ಅಯ್ಯೋ ಮಗನೇ ಭಗತ್ ಸ್ವಾತಂತ್ರ್ಯ ಹಕ್ಕಿಯಂತೆ ಹಾರಾಡಬೇಕಾಗಿದ್ದ ನೀನು ಇಂದು ಈ ಕತ್ತಲು ಕೋಣೆಯಲ್ಲಿ ಬಂಧಿಯಾಗಿರುವುದನ್ನು ನೋಡಲು ಆಗುತ್ತಿಲ್ಲ ಮಗನೇ ನೋಡಲು ಆಗುತ್ತಿಲ್ಲ
ಭಗತ್ ಸಿಂಗ್:-ಅಳಬೇಡ ಅಮ್ಮ ಅಳಬೇಡ ನೀನು ಅಳುವುದನ್ನು ನೋಡಿ ಈ ಜಗತ್ತು ಆಡಿಕೊಳ್ಳುತ್ತದೆ ಅಮ್ಮ
ವಿದ್ಯಾವತಿ:-ಹೌದು ಈ ಜಗತ್ತು ಆಡಿಕೊಳ್ಳುತ್ತದೆ ಈ ಆಡಿಕೊಳ್ಳುವ ಜಗತ್ತಿನಲ್ಲಿ ಇಂದು ನೀನು ಏತಕ್ಕಾಗಿ ಈ ಕತ್ತಲು ಕೋಣೆಯಲ್ಲಿ ಬಂಧಿಯಾಗಿರುವೇ ಎಂಬುದನ್ನು ಕೇಳುತ್ತಿಲ್ಲ ಮಗನೇ
ಭಗತ್ ಸಿಂಗ್:-ಅಮ್ಮ ಇಂದು ನಾನು ಕತ್ತಲಲಿ ಇರಬಹುದು ಆದರೆ ನಾಳೆ ಖಂಡಿತಾ ಬೆಳಕಿಗೆ ಬಂದೇ ಬರುತ್ತೇನೆ ನಿಮ್ಮ ಜೊತೆಗೆ ಓಡಾಡಿಕೊಂಡು ಇರುತ್ತೇನೆ ಅಮ್ಮ
ವಿದ್ಯಾವತಿ:- ನೀನು ಇಲ್ಲಿಂದ ಹೊರಗೆ ಬರುವುದಿಲ್ಲ ಎಂಬುದು ನನಗೆ ಗೊತ್ತು ನಿನ್ನನು ನಾಳೆಯೇ ನೇಣಿಗೆ ಹಾಕುತ್ತಾರೆ ಎಂಬುದು ನನಗೆ ಗೊತ್ತು ಇದೆ ನನ್ನ ನಿನ್ನ ಕೊನೆಯ ಭೇಟಿ ಎಂಬುದು ಸಹ ನನಗೆ ಗೊತ್ತು ಕಂದ ಆಡಿಪಾಡಿ ಬೆಳೆಯಬೇಕಾದ ವಯಸ್ಸಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿಯುವ ಪರಿಸ್ಥಿತಿಗೆ ಬಂದುಬಿಟ್ಟೆಯಲ್ಲ ಮಗನೇ
ಭಗತ್ ಸಿಂಗ್:- ಅಮ್ಮ ಹೆತ್ತ ತಾಯಿ ಮಗನಿಗೆ ಜನ್ಮ ನೀಡುತ್ತಾಳೆ ಭಾರತಾಂಬೆಯು ನಾವು ಸಾಯುವವರೆಗೂ ನಮ್ಮನ್ನು ಹೊತ್ತಿರುತ್ತಾಳೆ ಹಾಗಾಗಿ ತಾಯಿಯ ಋಣ ತೀರಿಸುವುದು ಮಗನ ಕರ್ತವ್ಯ ಅಲ್ಲವೇ ಅಮ್ಮ ನೀವು ನನಗೆ ಜನ್ಮ ನೀಡಿದ ತಾಯಿ ಜೀವನ ನೀಡಿದ ಈ ಭಾರತಾಂಬೆಯು ನನ್ನ ತಾಯಿ ನಿಮ್ಮಿಬ್ಬರಲ್ಲಿ ಯಾರಿಗೆ ನೋವಾದರೂ ನಾನು ಸಹಿಸುವುದಿಲ್ಲ ಅಮ್ಮ
ವಿದ್ಯಾವತಿ:- ಅಯ್ಯೋ ಭಗತ್ ನಿನ್ನನು ಕಳೆದುಕೊಂಡು ಬದುಕುವ ಶಕ್ತಿ ನನ್ನಲ್ಲಿ ಇಲ್ಲ ಕಂದ ನಿನ್ನನು ನೇಣಿಗೆ ಹಾಕುವುದನ್ನು ನಾನು ನೋಡಲಾರೆ ಮಗನೇ ನೋಡಲಾರೆ
ಭಗತ್ ಸಿಂಗ್:-ನಿಮಗೆ ನಾನೊಬ್ಬನೇ ಮಗನಿರಬಹುದು ಆದರೆ ಈ ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ದೇಶಪ್ರೇಮಿಯೂ ನಿಮ್ಮ ಮಗನೆಂದು ತಿಳಿಯಿರಿ ಅಮ್ಮ ಅವರಲ್ಲಿಯೇ ನೀವು ನಿಮ್ಮ ಮಗ ಭಗತ್ ನನ್ನು ಕಾಣಿರಿ ಅಮ್ಮ ನಾನು ಏಡಿಯಂತೆ ಬದುಕಲು ಇಷ್ಟಪಡುವುದಿಲ್ಲ ಅಮ್ಮ
ವಿದ್ಯಾವತಿ:-ಅಯ್ಯೋ ದೇವರೇ ಎಂತಹಾ ಪರಿಸ್ಥಿತಿ ನನ್ನದು ಬದುಕಿದರೆ ಬ್ರಿಟಿಷರ ಕೈಯಾಳಾಗಿ ಅವರಿಗೆ ಶರಣಾಗತರಾಗಿ ಬದುಕಬೇಕು ಇಲ್ಲದಿದ್ದರೆ ನೇಣಿಗೆ ಶರಣಾಗಬೇಕು ಇದನ್ನೆಲ್ಲ ನೋಡುವ ಬದಲು ನಾನಾದರೂ ಸಾಯಬಾರದೆ ನನಗೆ ಮೊದಲು ಸಾವು ಬರಬಾರದೇ
ಭಗತ್ ಸಿಂಗ್:-ಅಳಬೇಡ ಅಮ್ಮ ಸಾಯುತ್ತಿರುವುದು ನಿಮ್ಮ ಮಗನಾದ ನಾನು ಮಾತ್ರ ನನ್ನ ಆದರ್ಶಗಳಿಗೆ ಸಾವಿಲ್ಲ ಅಮ್ಮ ಮುಂದೊಂದು ದಿನ ನನ್ನ ಮಾತೇಯಾದ ಭಾರತಾಂಬೆಯು ಸ್ವಾತಂತ್ರ್ಯಳಾಗುತ್ತಾಳೆ ಆಗ ಪ್ರತಿಯೊಬ್ಬ ತಾಯಿಯು ಸಹ ನನ್ನ ಮಗನೂ ಸಹ ಭಗತ್ ಸಿಂಗ್ ನಂತೆಯೇ ಆಗಬೇಕು ಎಂದು ಭಾವಿಸುತ್ತಾಳೆ ತಾಯೆ ಇನ್ ಕಿಲಾಬ್ ಜಿಂದಾಬಾದ್ ವಂದೇ ಮಾತರಂ ಬೋಲೋ ಭಾರತ್ ಮಾತಾ ಕೀ ಜೈ
***
ದೃಶ್ಯ ಎರಡು
(ಅಷ್ಟರಲ್ಲಿ ಅಲ್ಲಿಗೆ ಬ್ರಿಟಿಷ್ ಅಧಿಕಾರಿಗಳು ಬರುತ್ತಾರೆ)
ಬ್ರಿಟಿಷ್ ಅಧಿಕಾರಿಗಳು :- ಭಗತ್ ಸಿಂಗ್ ನಿಮ್ಮನ್ನು ನೇಣಿಗೆ ಹಾಕುವುದು ನಾಳೆಯಲ್ಲ ನಿಮ್ಮನ್ನು ಇಂದೇ ನೇಣಿಗೆ ಹಾಕಬೇಕೆಂದು ಆಜ್ಞೆ ಮಾಡಲಾಗಿದೆ
ಭಗತ್ ಸಿಂಗ್:- ಸ್ವಾತಂತ್ರ್ಯಕ್ಕಾಗಿ ಸಾಯಲು ಸಿದ್ಧವಿರುವ ನನಗೆ ಸಾವು ಇಂದು ಬಂದರೇನು ನಾಳೆ ಬಂದರೇನು ಎರಡೂ ಸಹ ಒಂದೇ ಚಿಂತಿಸುವ ಅಗತ್ಯವಿಲ್ಲ
ಬ್ರಿಟಿಷ್ ಅಧಿಕಾರಿಗಳು:- ನೋಡು ಭಗತ್ ನಾನು ಹೇಳಿದಂತೆ ಕೇಳಿದರೆ ನಿನ್ನನು ನೇಣಿಗೆ ಹಾಕುವುದನ್ನು ತಪ್ಪಿಸಲು ಆಗುತ್ತದೆ ನೀನಿನ್ನೂ ಬಾಳಿಬದುಕಬೇಕಾದವನು ಇಷ್ಟು ಚಿಕ್ಕ ಪ್ರಾಯದಲ್ಲಿ ಸಾವನ್ನೇಕೆ ಬಯಸುತ್ತಿರುವೇ ನಿನ್ನದು ಕನಸು ಕಾಣುವ ವಯಸ್ಸು ಮತ್ತು ಕನಸು ನನಸು ಮಾಡುವ ವಯಸ್ಸು ಭಗತ್
ಭಗತ್ ಸಿಂಗ್:- ಸಾಹೇಬ್ರೆ ನಿಮ್ಮ ಕಪಿಮುಷ್ಠಿಯಲ್ಲಿರುವ ನನ್ನ ತಾಯಿ ಭಾರತಾಂಬೆಗೆ ಸ್ವಾತಂತ್ರ್ಯ ಕೊಡಿಸುವುದಾಗಿ ನನಗಿರುವ ಕನಸು ಅದು ಇಂದಲ್ಲ ನಾಳೆ ನನಸಾಗಿಯೇ ಆಗುತ್ತದೆ ಸಾಹೇಬ್ರೆ ಸಾವೆಂದರೆ ನನಗೆ ಭಯವಿಲ್ಲ ನನ್ನ ತಾಯಿ ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ವೀರ ಮರಣ ಹೊಂದುವುದು ತಾಯಿಯ ಋಣವನ್ನು ತೀರಿಸುವ ಕಾರ್ಯವಾಗಿದೆ ಸಾಹೇಬ್ರೆ
ಬ್ರಿಟಿಷ್ ಅಧಿಕಾರಿಗಳು:-ನನ್ನ ಮಾತನ್ನು ಕೇಳು ಭಗತ್ ನಾನು ಮಾಡಿದ್ದು ತಪ್ಪಾಯ್ತು ಇನ್ನೊಮ್ಮೆ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಅಪಾಲಜಿ ಪತ್ರವನ್ನು ಬರೆದು ಕೊಡು ನಾನು ಅದನ್ನು ನನ್ನ ಕಂಪನಿ ಸರ್ಕಾರಕ್ಕೆ ತಲುಪಿಸಿ ನಿನಗೆ ನೀಡಿರುವ ಶಿಕ್ಷೆಯನ್ನು ರದ್ದು ಪಡಿಸುವಂತೆ ಕೇಳಿಕೊಳ್ಳುತ್ತೇನೆ
ಭಗತ್ ಸಿಂಗ್:-ಅಪಾಲಜಿ ಬರೆದು ಕೊಡಬೇಕಾ ಸಾಹೇಬ್ರೆ ಈ ಭಗತ್ ಸಿಂಗ್ ನ ಮೈಯಲ್ಲಿ ಹರಿಯುತ್ತಿರುವುದು ಏಡಿಯ ರಕ್ತವಲ್ಲ ವೀರನ ಸ್ವಾತಂತ್ರ್ಯ ಹೋರಾಟಗಾರನ ರಕ್ತ ಸಾಹೇಬ್ರೆ ಚಿಕ್ಕ ವಯಸ್ಸಿನಿಂದಲೂ ಭಾರತವನ್ನು ಸ್ವಾತಂತ್ರ್ಯ ಗೊಳಿಸುವ ಕನಸನ್ನು ಕಾಣುತ್ತಾ ಬೆಳೆದವನು ನಾನು ಎಂದಿಗೂ ಅಪಾಲಜಿ ಬರೆದು ಕೊಡುವ ನೀಚ ಕೆಲಸವನ್ನು ಮಾಡುವುದಿಲ್ಲ ಸಾಹೇಬ್ರೆ
ಬ್ರಿಟಿಷ್ ಅಧಿಕಾರಿಗಳು:- ಸರಿ ಹಾಗಾದರೆ ನಡಿ
ವಿದ್ಯಾವತಿ:- ಸಾಹೇಬ್ರೆ ದಯವಿಟ್ಟು ನನಗೆ ನನ್ನ ಮಗನನ್ನು ಉಳಿಸಿಕೊಡಿ ಸಾಹೇಬ್ರೆ ಉಳಿಸಿಕೊಡಿ
ಬ್ರಿಟಿಷ್ ಅಧಿಕಾರಿಗಳು:- ನಿಮ್ಮ ಮಗ ಅಪಾಲಜಿ ಬರೆದು ಕೊಟ್ಟರೆ ಅವನ ಪ್ರಾಣವನ್ನು ಉಳಿಸಬಹುದು ಆದರೆ ಅವನು ಅಪಾಲಜಿ ಬರೆದು ಕೊಡಲು ಒಪ್ಪುತ್ತಿಲ್ಲ
ವಿದ್ಯಾವತಿ:- ಏನು ಸಾಹೇಬ್ರೆ ನನ್ನ ಮಗ ನಿಮಗೆ ಅಪಾಲಜಿ ಬರೆದು ಕೊಟ್ಟು ನಿಮ್ಮ ಕೈಯಾಳಾಗಿ ನಿಮಗೆ ಶರಣಾಗತನಾಗಿ ಬದುಕಬೇಕೆ ಛೇ ಅದಕ್ಕಿಂತ ಅವನು ಸಾಯುವುದೇ ಲೇಸು ಸಾಹೇಬ್ರೆ ಸಾಯುವುದೇ ಲೇಸು
ಬ್ರಿಟಿಷ್ ಅಧಿಕಾರಿಗಳು:-ಸರಿ ಹಾಗಾದರೆ ಗಲ್ಲಿಗೇರಿಸಲು ಆತನನ್ನು ಕರೆದು ತನ್ನಿ ಭಗತ್ ನಿನ್ನ ಕೊನೆಯ ಆಸೆ ಏನಾದರೂ ಇದೆಯೇ ಇದ್ದರೆ ಹೇಳು
ಭಗತ್ ಸಿಂಗ್:-ನನ್ನ ಆಸೆಯನ್ನು ತೀರಿಸುವ ತಾಕತ್ತು ಮತ್ತು ಯೋಗ್ಯತೆ ನಿಮಗೆ ಆಗಲಿ ನಿಮ್ಮ ಕಂಪನಿಯ ಸರ್ಕಾರಕ್ಕೆ ಆಗಲಿ ಇಲ್ಲ ಸಾಹೇಬ್ರೆ ಇಲ್ಲ ಬೋಲೋ ಭಾರತ್ ಮಾತಾ ಕೀ ಜೈ
ಬ್ರಿಟಿಷ್ ಅಧಿಕಾರಿಗಳು:-ಇವನನ್ನು ಗಲ್ಲಿಗೇರಿಸಿ
ವಿದ್ಯಾವತಿ:-ಭಗತ್ ಅಯ್ಯೋ ಮಗನೇ ಭಗತ್ ಇಷ್ಟು ದಿನ ನೀನೇ ನನ್ನ ಜೀವನ ಎಂದುಕೊಂಡು ಬದುಕುತ್ತಿದ್ದೆ ನಿನ್ನ ನಗುವಿನಲ್ಲಿ ನಾನು ನನ್ನ ನೋವುಗಳನ್ನು ಮರೆತು ಕಾಲವನ್ನು ಕಳೆಯುತ್ತಿದ್ದೆ ಆದರೆ ಇವಾಗ ನೀನೇ ಇಲ್ಲವಲ್ಲ ನಾನು ಯಾರಿಗಾಗಿ ಬದುಕಲಿ ಇಲ್ಲ ನಾನು ಸಾಯುವುದಿಲ್ಲ ನಾನು ಅಳುವುದಿಲ್ವ ಇಂದಿನಿಂದ ನಿನ್ನ ಗುರಿಯೇ ನನ್ನ ಗುರಿ ನಿನ್ನ ಸ್ವಾತಂತ್ರ್ಯದ ಕನಸೇ ನನ್ನ ಕನಸು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಎಲ್ಲಾ ಮಕ್ಕಳು ನನ್ನ ಮಕ್ಕಳು ಭಗತ್ ನನ್ನ ಮಕ್ಕಳು
-ತುಂಬೇನಹಳ್ಳಿ ಕಿರಣ್ ರಾಜು ಎನ್ ವಿಘ್ನೇಶ್ವರ ಪ್ರಿಯ
