ಕಿವಿಮಾತು

ಕಿವಿಮಾತು

ಕವನ

ಕಪ್ಪು ಮೋಡಕೆ ಹಿತದ

ಗಾಳಿ ಸೋಕಿ ಮಳೆಯಾದಂತೆ

ಮುಗಿಲೆತ್ತರದ ನೋವು ಕೂಡ

ಕರಗೀತು ಭರವಸೆಯ ಬೆಳಕಿಗೆ.

 

ಸುತ್ತ ಸಾಗರದಿ ಬಂಧಿಯಾದಾಗ

ಪುಟ್ಟ ಚುಕ್ಕಿ ಗುರಿತೋರುವಂತೆ

ಭರವಸೆಯು ಆಸರೆಯು

ನಿರಾಶೆಗಳ ಆರದ ನೋವಿಗೆ.

 

ಸೋಲನೆ ಮೆಟ್ಟಿಲಾಗಿಸಿ ಮುನ್ನಡೆದರೆ

ಮರುಗುವ ಮಾತಿಲ್ಲ ನೀ ಕಾಣು

ಕಪ್ಪು ಕತ್ತಲಿನ ಈ ತೋಟದಿ

ನಿನ್ನದೆ ಬೆಳಕ ನಂಬು ದುಂಬಿಯತರದಿ.

 

ಅವಸರ ಅವಸಾನವ ತರುವದು

ಗೆದ್ದವರೆಲ್ಲ ಬಿದ್ದು ಎದ್ದವರೆ

ಭರವಸೆಯ ಚಿಲುಮೆ ಬತ್ತದಿರಲಿ

ಹರಿಯುತಿರಲಿ ಗಾಯಕೆ ಔಷಧವಾಗಿ

 

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್