ಕಿಸ್ಕಾರು ಹೂವಿನ ತಂಬುಳಿ

Submitted by Shobha Kaduvalli on Wed, 01/16/2013 - 20:25
No votes yet
ಬೇಕಿರುವ ಸಾಮಗ್ರಿ

ಕಿಸ್ಕಾರು ಹೂವಿನ ದಳಗಳು 1 ಹಿಡಿ, ಜೀರಿಗೆ – 1 ಟೀ ಚಮಚ, ಒಣ ಮೆಣಸಿನಕಾಯಿ – ಖಾರಕ್ಕೆ ತಕ್ಕಂತೆ, ಹುಳಿ ಮೊಸರು -1 ಕಪ್, ತುಪ್ಪ – 1 ಚಮಚ, ತೆಂಗಿನ ತುರಿ ½ ಕಪ್, ಉಪ್ಪು ರುಚಿಗೆ ತಕ್ಕಂತೆ

<ಒಗ್ಗರಣೆಗೆ> : ಎಣ್ಣೆ – 2 ಚಮಚ, ಸಾಸಿವೆ – ½ ಚಮಚ, ಒಣ ಮೆಣಸಿನ ಕಾಯಿ 4 - 5 ತುಂಡುಗಳು, ಕರಿವೆವಿನ ಎಸಳು – 4 – 5, ಜೀರಿಗೆ – ½ ಟೀ ಚಮಚ.

ತಯಾರಿಸುವ ವಿಧಾನ

ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ, ಒಣ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಕೊನೆಯಲ್ಲಿ ಕಿಸ್ಕಾರು ಹೂವಿನ

ದಳಗಳನ್ನು ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್ನು ಒಂದು ಪುಟ್ಟ ಪಾತ್ರೆಗೆ ತೆಗೆದು ಮೊಸರು ಮತ್ತು

ಉಪ್ಪನ್ನು ಮಿಶ್ರ ಮಾಡಿ. ನಂತರ ಮೇಲೆ ಹೇಳಿದ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿ. ರುಚಿಯಾದ ಕಿಸ್ಕಾರು ಹೂವಿನ ತಂಬುಳಿ

ರೆಡಿ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet