"ಕೀಲಾ ಲೇ ಕೇ ಆವೋ"(ಮೊಳೆ ತೆಗೆದುಕೊಂಡು ಬಾ)
ಒಂದು ನೈಜ ಹಾಸ್ಯ"ಕೀಲಾ ಲೇ ಕೇ ಆವೋ"(ಮೊಳೆ ತೆಗೆದುಕೋಂಡು ಬಾ) ನಾನು
ಮುಂಬೈನಲ್ಲಿ Site Engineer (Civil) ಅಂತಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ತಮಿಳು
ಕೂಲಿಕಾರರೇ ಹೆಚ್ಚಿನ ಸಂಖ್ಯೆ ಇದ್ದರು ಅಲ್ಪ ಸ್ವಲ್ಪ ಹಿಂದಿಯನ್ನು ಸಹ ಮಾತನಾಡುತ್ತಿದ್ದರು.
ಆಗಾಗ ನಾನು ಕೂಲಿಕಾರರಲ್ಲಿಯ ಕೆಲವರನ್ನು ಕರೆದು ಟೀ-ಕಾಪೀಗಾಗಿ Tips Money
ಕೊಡುತ್ತಿದ್ದರಿಂದ ಕೂಲಿಕಾರರ ಹಾಗೂ ನನ್ನ ಮದ್ಯ ಸುಮಧುರ ಸಂಬಂಧವಿತ್ತು.ಮುಂಬೈನ
ಧಾರಾವಿ ಏರಿಯಾದಲ್ಲಿ ಕೆಲಸ ನಡೆಯುತ್ತಿದ್ದ ವೇಳೆ, ಒಂದು ದಿನ ಬೆಳಿಗ್ಗೆ ಸೈಟಗೆ
ಬರುತ್ತಲೇ Centring ಕಾಮಗಾರಿಗಳಿಗಾಗಿ ಅರ್ಜಂಟ ಕಬ್ಬಿಣದ ಮೊಳೆಗಳು ಬೇಕಾದದ್ದನ್ನು
ಅರಿತ ನಾನು ಅಲ್ಲಿಯ ಕೆಲಸ ಮಾಡುತ್ತಿದ್ದ ತಮಿಳ ಕೂಲಿಯೋಬ್ಬನನ್ನು ಕರೆದು ಅವನ ಕೈಗೆ
ಐದು ರೂಪಾಯಿ ಇಟ್ಟು,ಹಿಂದಿಯಲ್ಲಿ "ಕೀಲಾ ಲೇ ಕೇ ಆವೋ"
(ಮೊಳೆಗಳನ್ನು ತೆಗೆದುಕೊಂಡು ಬಾ) ಅಂದೆ.ಅವನು ಗೊಣಾಡಿಸುತ್ತಾ ಹೋದವನು ಅರ್ದ ತಾಸು
ಕಳೆದರೂ ಮೊಳೆ ತರದಿದ್ದುದನ್ನು ತಿಳಿದುಕೊಂಡ ನಾನು ಕೂಲಿಗಳ ಮುಖಂಡನನ್ನು
ಕರೆದು,ಕೂಲಿಯೋಬ್ಬನಿಗೆ ಮೊಳೆ ತರಲು ಐದು ರೂಪಾಯಿ ಕೊಟ್ಟ ವಿಷಯವನ್ನು ಅವನಿಗೆ
ತಿಳಿಸಿದೆ. ಅವನು ಅಲ್ಲಿಂದಲೇ ದೂರದಲ್ಲಿ ಮಣ್ಣಿನ ಕೆಲಸ ಮಾಡುತ್ತಿದ್ದ ಆ ಕೂಲಿಯನ್ನು
ಕರೆದ, ಕೂಲಿಯು ಮಣ್ಣಿನ ಕೈಗಳನ್ನು ಹಾಕಿಕೊಂಡ ತನ್ನ ಚಡ್ಡಿಗೆ ಒರೆಸಿಕೊಳ್ಳುತ್ತಲೇ
ನಾವು ನಿಂತಲ್ಲಿಗೆ ಬರಲಾಗಿ, ಕೂಲಿಕಾರರ ಮುಖಂಡ ತಮಿಳು ಬಾಷೆಯಲ್ಲಿ ಅವನನ್ನು ನಾನು ಐದು
ರೂ ಕೊಟ್ಟ ವಿಷಯ ಕೆಳುತ್ತಲೇ,ನಾನು ಮದ್ಯ ಪ್ರವೇಸಿಸಿ ಹಿಂದಿಯಲ್ಲಿ ಆ ಕೂಲಿಯನ್ನು
ಉದ್ದೇಶಿಸಿ"ಕೀಲಾ ಲೇ ಕೇ ಆಯಾ?" ಎಂದು ಪ್ರಶ್ನಿಸಿದೆ, ಅದಕ್ಕೆ ಅವನು "ಹಾಂ ಸಾಬ್ ಖಾಕೇ ಆಯಾ" ಅಂದ. ಕೂತುಹಲಕ್ಕೊಳಗಾದ ನಾನು ಇದೇನಿದು "ಕೀಲಾ ಲೇ ಕೇ ಆಯಾ?" (ಮೊಳೆ ತಂದೆಯಾ?) ಅಂತಾ ಕೆಳಿದರೆ, ಇವನು "ಖಾಕೇ ಆಯಾ" (ತಿಂದು ಬಂದೆ) ಅನ್ನುತ್ತಿದ್ದಾನಲ್ಲಾ ಎಂದು "ಕ್ಯಾ ಖಾಕೇ ಆಯಾ?" (ಏನು ತಿಂದು ಬಂದೆ?)ಎಂದು ಪ್ರಶ್ನಿಸಿದೆ. ಅವನು ಅದಕ್ಕೆ ವಹಿ ಸಾಬ್ ಆಪ್ ಬೋಲೇ ಥೇ ನಾ "ಕೇಲಾ ಖಾಕೇ ಆಯಾ" (ಬಾಳೇಹಣ್ಣು ತಿಂದು ಬಂದೆ) ನನಗೆ ನಗುವು ತಡೆಯಲಾಗಲಿಲ್ಲ ನಾನು ನಗಹತ್ತಿದೆ ಇದನ್ನು ತಿಳಿದ ತಮಿಳು ಕೂಲಿ ಮುಖಂಡನು ನಗಹತ್ತಿದ. ನಾನು ಹಿಂದಿಯಲ್ಲಿ "ಕೀಲಾ" (ಮೊಳೆ) ಅಂತಾ ಹೆಳಿದ್ದನ್ನೇ ಅವನು "ಕೇಲಾ" (ಬಾಳೇಹಣ್ಣು) ಎಂದು ಭಾವಿಸಿ ಬಾಳೇಹಣ್ಣು ತಿಂದು ಬಂದಿದ್ದ.ನಾನು ಆಗಾಗ Tips Money ಕೊಡುತ್ತಿದ್ದುದು ನನಗೆ ಊಲ್ಟಾ ಹೋಡೆದಿತ್ತು.