ಕುಂಭಸ್ನಾನಂ

ಕುಂಭಸ್ನಾನಂ

ಕವನ

 

ಅಡಿಗಡಿಗಡರುವ
ಕಡುಬಿಸಿಲಸುಡುತಾಪವ
ನಡಗಿಸುತಲುಡುಗಿಸುವ
ಧುಡುಧುಡುಧುಮ್ಮಿಡುವ
ಭಂಡನರಸಿಯ
ಭಂಗದಲಿಬೇಡುತಲಿ
ನಿಡುಜಡೆಯ
ಫಡಫಡನೊಡೆಯುತಲಿ
ಗಂಗೆಯೊಡಲಲಿ
ಮಿಂದುನಲಿಯುತಲಿಹ
ನೀನಾಗಾನಂದಂ

 

ಚಿತ್ರ ಕೃಪೆ ಪದ್ಯಪಾನ