ಕುಡುಕನ ಕಿತಾಪತಿ

ಕುಡುಕನ ಕಿತಾಪತಿ

ಬರಹ

ಕುಡುಕನೊಬ್ಬ ರೊಡ್ನ್ಯಾಗ ಹೊಂಟಿದ್ದ
ರೊಡ್ನ್ಯಾಗ ಹೊಗ್ತಾ ಘಟರ್ದಾಗ ಬಿದ್ದಿದ್ದ

ಅವನ ಪುಣ್ಯಾ ಘಟರು ಒಣಗಿತ್ತ
ತಲಿಗೆರಿದ್ದು ಕೆಳಗ ಇಳಿದಿತ್ತ

ಆಲ್ಲಿ ಒಂದು ಹಂದಿ ಮಲಗಿತ್ತ
ಹೆದರಿ ಅಲ್ಲಿಂದ ಒಡಕ ಹತ್ತಿತ್ತ

ಇವನು ಹೆದರಿ ಮೇಲಕ ಎದ್ದಿದ್ದ
ನಾಯಿ ಬಂದು ಪ್ಯಾಂಟ್ ಹಿಡಿದಿತ್ತ

ಹ...ಚ್ ಹ..ಚ್ ಅನ್ನುತ ಒಡ್ತಿದ್ದ
ಮನಿ ವರೆಗು ಸಾಥ್ ಕೊಟ್ಟಿತ್ತ

ಬಾಯಿ ತಗದ್ರ ಘಂ... ಅಂತಿತ್ತ
ಅದು 3 ಕಿಮೀ ವರೆಗೂ ಹಬ್ಬಿತ್ತ

ಮನಿಗೆ ಹೊಗಿ ಬಾಗಿಲಾ ಬಡದಿದ್ದ
ಹೆಂಡತಿ ಒಳಗ ಹೊಗಿ ಲಟ್ನಿ ತಂದಿದ್ಲ

ಮತ್ತ ಹೆದರಿ ಹೊರಗ ಒಡಿದ್ನ
ಕಾಲು ಜಾರಿ ಘಟರ್ನಾಗ ಬಿದ್ದಿದ್ದ

ಹೆಂಡತಿ ಬಕೀಟು ತುಂಬ ನೀರು ಸುರ್ವಿದ್ಲ
ಮಳೆಬಂತು... ಮನೆ ಬಿತ್ತು... ಅಂತ ಒದರಿದ್ದ

ನಾಲ್ಕು ಮಂದಿ ಬಂದು ಎತ್ತಿದ್ರ
ಇವನ ಹಣೆಬಾರಕ್ಕಿಷ್ಟು ಅಂತ ಮನಿಒಳ್ಗ ಒಗಿದಿದ್ರ