ಕುಡುಕ
ಕವನ
ದಿನನಿತ್ಯ ದುಡಿದು ಹೆಂಡ್ತಿ ಮಕ್ಕಳ ಸಾಕಲಾರ
ಹೆಂಡ್ತಿ ಮಕ್ಕಳೆ ದುಡಿದು ಸಾಕಬೇಕು ಕುಡುಕನ್ನ
ಹೊಟ್ಟೆ ಬಟ್ಟೆಗೆ ಇಲ್ಲದೆ ಅಳುತ್ತಿರುವಾಗ ನಾವು
ಕುಡುಕನಿಗೆ ಬೇಕು ದಿನನಿತ್ಯ ಮೂರು ಹತ್ತು ಸರಾಯಿ
ಬುದ್ದಿಹೇಳಿದರು ಬುದ್ದಿಬರಲಿಲ್ಲ ಕುಡಿಬೇಡಂತ
ಕುಡಿದು ಕುಡಿದು ಆರೋಗ್ಯ ಹಾಳು ಮಾಡಿಕೊಂಡ
ಕುಡಿತದ ದಾಸನಾಗಿ ಬಿಟ್ಟನ, ಮನೆ ಮಾನ ತೆಗೆದ
ಬಾಯಿಗೆ ಬಂದ ಹಾಗೆ ಬೈತಾನ ಎಲ್ಲರನ್ನು ಕುಡುಕ
ಹೆಂಡ್ತಿ ಮಕ್ಕಳು ಕುಡುಕನಿಗೆ ಯಾಕೆ ಬೇಕ್ರಿ
ದುಷ್ಟ ಸವಾಸ ಮಾಡಿ ಮೊದಲು ಕಲಿತ
ಕಲಿತ ಚಟವ ಚಟ್ಟ ಕಟ್ಟುವತನಕ ಬಿಡಲಿಲ್ಲ
ಕೊನೆಗೂ ಎಲ್ಲರನ್ನು ಬಿಟ್ಟು ಹೋದ ಕುಡುಕ.
- ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.
Comments
ಉ: ಕುಡುಕ
In reply to ಉ: ಕುಡುಕ by makara
ಉ: ಕುಡುಕ