ಕುಮಾರವ್ಯಾಸ ಭಾರತದ ಒಂದು ಪದ್ಯದ ಬಗ್ಗೆ

ಕುಮಾರವ್ಯಾಸ ಭಾರತದ ಒಂದು ಪದ್ಯದ ಬಗ್ಗೆ

ಬರಹ

ಪ್ರಿಯರೆ,

ಕುಮಾರವ್ಯಾಸ ಭಾರತವನ್ನು ಓದುವಾಗ ಸಭಾ ಪರ್ವದ ಒಂಬತ್ತನೆಯ ಸಂಧಿಯಲ್ಲಿ ೨೧ ನೇ ಪದ್ಯದ ಅರ್ಥವನ್ನು ತಿಳಿದುಕೊಳ್ಳಲು ಕುತೂಹಲಿಯಾಗಿದ್ದೆನೆ, ಇದರ ಬಗ್ಗೆ ಡೀ ಎಲ್ ಗುಂಡಪ್ಪನವರ ದಧ್ಯಾನುವದಲ್ಲೂ ಮತ್ತು ಮುತ್ತೂರು ಕೃಷ್ಣಮೂರ್ತಿಯವರ ಗಮಕದ ವಾಚನದಲ್ಲೂ ಸಮಂಜಸವಾದ ಅರ್ಥ ಸಿಗಲಿಲ್ಲ, ದಯವಿಟ್ಟು ತಿಳಿಸಿಕೊಡಿ.

ಪಧ್ಯ ಹೀಗಿದೆ:

ಒಂದೆನಿಸಿ ತೋರುವನು ಎರಡರೊ
ಳೊಂದಿ ಮೆರೆವನು ಮೂರು ನೆಲೆಯಲಿ
ನಿಂದು ನಾಲ್ಕನು ಬಳಸಿ ವಿಭುವಾಗೈದು ಠಾಣದಲಿ
ಹಿಂದೆ ಮುಂದೆಡಬಲದ ಬಹು ವಿದ
ದಿಂದ ಮಾಯಾ ಗುಪ್ತನಾಗಿ ಮು
ಕುಂದ ತೋರುವನೀತಂಕೆಯನರಿಯವರಾರೆಂದ.

ಸತ್ಯನಾರಾಯಣ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet