ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೨

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೨

ಬರಹ

Newton ಗುರುತ್ವಾಕರ್ಷಣೆ ಕಂಡುಹಿಡಿಯುವ ಮೊದಲು ಭಾರತದಲ್ಲಿಯೂ ಸಾಕಷ್ಟು ಸೇಬುಗಳು ಬಿದ್ದಿದ್ದವು :-).

ಖಗೋಳಶಾಸ್ತ್ರದ ಗ್ರಂಥಗಳಲ್ಲಿ ಗುರುತ್ವಾಕರ್ಷಣೆಯ ಬಗ್ಗೆ ಹಲವಾರು ಕಡೆಗಳಲ್ಲಿ ಹೇಳಿರುವರು. Newtonಗೂ ಮೊದಲು ಗುರುತ್ವಾಕರ್ಷಣೆಯ ಬಗ್ಗೆ ಹೇಳಿರುವುದನ್ನು ಪರಿಗಣಿಸದೆ, ಪ್ರಾಚೀನ ಭಾರತದ ಖಗೋಳಶಾಸ್ತ್ರಙ್ಞರಿಗೆ ಮಾನ್ಯತೆ ನೀಡದಿರುವುದು ಸೂಕ್ತವಲ್ಲ ಎಂದು ನನ್ನ ಅನಿಸಿಕೆ.

ಈಗ ವಾಸ್ತವಾಂಶಕ್ಕೆ ಬರೋಣ:
ಜಗದ್ಗುರು ಆದಿ ಶಂಕರಚಾರ್ಯರು ಪ್ರಶ್ನಾ ಉಪನಿಷತ್ತಿನಲ್ಲಿ ಈ ರೀತಿ ಭಾಷ್ಯ ಬರೆದಿದ್ದಾರೆ "ಹೇಗೆ ಭೂಮಿಯು ಮೇಲೆ ಎಸೆದ ವಸ್ತುವನ್ನು ಆಕರ್ಷಿಸುವುದೋ ಹಾಗೆಯೇ ದೇಹದಲ್ಲಿರುವ ಪ್ರಾಣಶಕ್ತಿಯು ಅಪಾನಶಕ್ತಿಯನ್ನು ಕೆಳಗೆಳೆಯುತ್ತದೆ.

ತಥಾ ಪ್ರಿಥ್ವ್ಯಾಂಭಿಮಾನಿನಿ ಯಾ ದೆವತಾ ಪ್ರಸಿದ್ಥ ಸೈಶಾ
ಪುರುಷಸ್ಯ ಅಪಾನವೄತ್ತಿಮವಶ್ಟಭ್ಯಾ ಕೄಶ್ಯ ವಶಿಕ್ರಿತ್ಯಾಧ ಏವ
ಅಪಕರ್ಶೆನ ಅನುಗ್ರಹಂ ಕುರ್ವತೀ ವರ್ತತ ಇತ್ಯರ್ಥಃ
ಅನ್ಯಥಾ ಹಿ ಶರೀರಮ್ ಗುರುತ್ವಾತ್ ಪಟೆತ್ ಸಾವಕಾಶೆ ವೊದ್ಗಚ್ಚೆತ್
(ಆದಿ ಶಂಕರಚಾರ್ಯರ ವ್ಯಾಖ್ಯಾನ ಅಧ್ಯಾಯ ೩, ಶ್ಲೋಕ ೮ ಪ್ರಶ್ನೋಪನಿಶದ್).

ವರಾಹಮಿಹಿರ (೬ನೇ ಶತಮಾನ ಆಡ್) ಹೀಗೆ ಹೇಳಿದ್ದಾನೆ " ಬೆಂಕಿಯ ಜ್ವಾಲೆಯು ಯಾವಾಗಲು ಆಕಾಶದೆಡೆಗೆ ಹೋಗುತ್ತದೆ. ಯಾವುದೇ ಮೇಲೆ ಎಸೆದ ವಸ್ತುವು ಕೆಳಗೆ ಬೀಳುತ್ತದೆ. ಇದು ಭೂಮಿಯ ಯಾವುದೇ ಭಾಗದಲ್ಲಿರುವ ಜನರ ಅನುಭವ"

ಗಗನಮುಪೈತಿ ಸಿಖಿಶಿಖ ಕ್ಶಿಪ್ತಮಪಿ ಕ್ಶಿತಿಮುಪೈತಿ ಗುರು ಕಿಂಚಿತ್
ಯದ್ವದಿಹ ಮಾನವಾನಾಂ ಅ ಸುರಾಣಂ ತದ್ವದೇವಾಜ್ಘಃ
(ಪಂಚ ಸಿಧ್ದಾಂತ, ಅಧ್ಯಾಯ ೧೩, ಶ್ಲೋಕ ೪)

ವರಾಹಮಿಹಿರನದೇ ಆದ ಸೂರ್ಯ ಸಿದ್ಧಾಂಥ ಎನ್ನುವ ಭಾರತದ ಖಗೋಳಶಾಸ್ತ್ರದ ಗ್ರಂಥದಲ್ಲಿ " ಧಾರಣಾತ್ಮಿಕ ಶಕ್ತಿ ಇಂದ ಭೂಮಿಯು ಬಾಹ್ಯಾಕಾಶದಲ್ಲಿ ದೂರ ಹೋಗದೆ ದ್ರುಢವಾಗಿ ನಿಂತಿದೆ" ಎಂದು ಉಲ್ಲೇಖಿಸಿದೆ.

ಮಧ್ಯೇ ಸಮನ್ತಾಣ್ಡಸ್ಯ ಭೂಗೊಲೊ ವ್ಯೊಮಿನಿ ತಿಶ್ಠತಿ
ಬಿಭ್ರಣಃ ಪರಮಾಮ್ ಶಕ್ತಿಮ್ ಬ್ರಹ್ಮಣೊ ಧಾರಣಾತ್ಮಿಕಮ್
(ಸೂರ್ಯ ಸಿಧ್ದಾಂಥ, ಅಧ್ಯಾಯ ೧೨, ಶ್ಲೋಕ ೩೨)

ಭಾಸ್ಕರಾಚಾರ್ಯ (೧೧ನೇ ಶತಮಾನ), ಪ್ರಸಿದ್ದ ಭಾರತದ ಗಣಿತಙ್ನ ತನ್ನ ಸಿಧ್ದಾಂಥ ಶಿರೋಮಣಿಯಲ್ಲಿ " ಭೂಮಿಯು ತನ್ನ ಆಕರ್ಷಣಾ ಶಕ್ತಿಯಿಂದ ಅಕಾಶದಲ್ಲಿರುವುದನ್ನು ಸ್ವಾಭಾವಿಕವಾಗಿ ತನ್ನೆಡೆಗೆ ಸೆಳೆಯುತ್ತದೆ. ಇದೇ ಕಾರಣದಿಂದ ಮೇಲೆ ಎಸೆದ ವಸ್ತುಗಳು ಕೆಳಗೆ ಬೀಳುತ್ತವೆ"

ಹೀಗೆ ಹುಡುಕಿದರೆ ಅನೇಕ ಭಾರತೀಯ ಗ್ರಂಥಗಳು ಗುರುತ್ವಾಕರ್ಷಣೆಯ ಬಗ್ಗೆ ಉಲ್ಲೇಖಿಸಿರುವವು. ಈ ಎಲ್ಲಾ ಸಂಗತಿಗಳು Newton ಹುಟ್ಟುವುದಕ್ಕಿಂತ ನೂರಾರು ವರ್ಷಗಳ ಮುಂಚೆಯೇ ಇದ್ದವು. ಇನ್ನು ನಾವು ಯಾಕೆ ಶಾಲೆಗಳಲ್ಲಿ ಮಕ್ಕಳಿಗೆ Newton=Gravity ಅಂತ ಹೇಳಿಕೊಡುತ್ತೇವೆಂದು ನೋಡಿದರೆ ಸೋಜಿಗವಾಗುತ್ತದೆ. "ಶಂಖದಿಂದ ಬಂದ್ರೇನೆ ತೀರ್ಥ" ಅಂತಾರೆ ಇದನ್ನೆಲ್ಲಾ ನೋಡಿದರೆ ಅದೇ ರೀತಿ ಪಾಶ್ಚ್ಯಾತ್ಯನಿಂದ ಬಂದರೇನೆ ವಿಙ್ಞ್ನಾನ ಎಂದು ಕಾಯುತ್ತಿದ್ದೀವೇನೋ ಎಂದನಿಸುತ್ತದೆ.

ಭನ್ನಂಜೆರವರ ಮಾತು " ಇರುವು ಸಂಪತ್ತಲ್ಲ , ಇರವಿನ ಅರಿವು ಸಂಪತ್ತು "

ಮೂಲ: ಇ-ಮೇಯ್ಲ್, Eternally Talented India 108 Facts.