ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೬

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೬

ಬರಹ

ಈ ಲೇಖನದ ಹಿಂದಿರುವ ಮುಖ್ಯವಾದ ಉದ್ದೇಶವೇನಂದರೆ ವಿಜ್ಞಾನ ಮತ್ತು ಸನಾತನ ಧರ್ಮದಲ್ಲಿ ಯಾವುದು ಹೆಚ್ಚು ಎಂದು ವಾದಿಸುವುದಲ್ಲ. ಬದಲಿಗೆ ಅವೆರಡರ ಸಮಾನತೆಯನ್ನು  ವ್ಯಕ್ತಪಡಿಸುವುದಾಗಿದೆ. ಡಾರ್ಕ್ ಏನಜ್ರಿ ತಿಳಿದುಕೊಳ್ಳುವ ಕಾರಣವೆಂದರೆ ಅಸ್ತಿತ್ವದಲ್ಲಿರುವ ವಿಜ್ಞಾನದ ಶೇ ೭೨% ಅದೇ ಇರುವುದರಿಂದ ಅದನ್ನರಿಯುವುದು ಇದರಿಂದ ವಿಶ್ವವು ಹೇಗೆ ಸೃಷ್ಟಿಯಾಯಿತು ಎಂದು ತಿಳಿಯಲು ಸಹಾಯವಾಗುತ್ತದೆ. ಹಾಗೆಯೇ ಅರ್ಥಬದ್ಧವಾದ ಜೀವನಕ್ಕೆ ದೇವರೆಂಬ (ಸರ್ವಶಕ್ತಿಯು) ಅತ್ಯಾವಶ್ಯಕ.

ಮೊದಲಿಗೆ Albert Einstein (೧೯೧೬) ಪ್ರಪಂಚವು ವಿಸ್ತರಿಸುತ್ತಿಲ್ಲ ಎಂಬ ಕಲ್ಪನೆಯನ್ನು ಹೊಂದಿದ್ದನು, ಆದ್ದರಿಂದ ಅವನು ತನ್ನ ರಿಲೆಟಿವಿಟಿ ಸಿದ್ಧಾಂತದಲ್ಲಿ ಹೊಸ Cosmological Constant ಅನ್ನು ಬ್ರಹ್ಮಾಂಡವು ವಿಸ್ತರಿಸುವಿದಿಲ್ಲವೆಂಬ ಭಾವನೆಯಿಂದ ಹಾಕಿದ್ದನು. ಸುಮಾರು ೧೯೨೨ರ ಆಸುಪಾಸಿನಲ್ಲಿ Alexander Friedmann ರಶ್ಯಾದ ಗಣಿತಜ್ಞ ಇದು (Cosmological Constant) ಅಸ್ಥಿರವಾದದ್ದು ಎಂದೆಣಿಸಿ, ಜಗತ್ತಿನ ವಿಸ್ತರಿಸುವಿಕೆಯ ಬಿಗ್ ಬ್ಯಾಂಗ್ ಸಿದ್ಧಾಂತವನ್ನು ಪರ್ಯಾಲೋಚನೆಗಾಗಿ ಮುಂದಿಟ್ಟನು. Edwin Hubble(೧೯೨೯) ಹತ್ತಿರದ ತಾರಾಗಣಗಳ ಅಧ್ಯಯನದಿಂದ ವಿಶ್ವವು ವಿಸ್ತರಿಸುವುದನ್ನು ಖಚಿತಗೊಳಿಸಿದನು. ಆಗ ಮಹಾಸ್ಪೋಟವೆಂಬ ಮನೋಹರವಾದ ಸಿದ್ಧಾಂತಕ್ಕೆ ಆಧಾರ ಸಿಕ್ಕಂತಾಯಿತು. ಇದರಿಂದ Einstein ತನ್ನ ರಿಲೆಟಿವಿಟಿ ಸಿದ್ಧಾಂತದ (Cosmological Constant) ತನ್ನ "ದೊಡ್ಡ ತಪ್ಪು" ಎಂದು ಹೇಳಿದನು.

ಮಹಾಸ್ಪೋಟ ಸಿದ್ಧಾಂತ:
ಮಹಾಸ್ಪೋಟ ಸಿದ್ಧಾಂತ ಪ್ರವಾದಿಸುವುದೇನಂದರೆ ಪ್ರಾಥಮಿಕವಾಗಿ ಜಗತ್ತು ಬಹಳ ಬಿಸಿಯಾದ ಜಾಗ. ಬಿಗ್ ಬ್ಯಾಂಗ್ ಆದ ೧ ಸೆಕೆಂಡ್ ನಂತರ ಜಗತ್ತಿನ ಉಷ್ಣಮಾನವು ಅಂದಾಜು ೧೦ ಬಿಲಿಯನ್ ಡಿಗ್ರಿಸ್ ಇತ್ತು ಮತ್ತು  ಅದು ಪ್ರೋಟಾನ್, ಎಲೆಕ್ಟ್ರಾನ್, ನ್ಯೂಟ್ರಾನ್ ಆಂಟಿ-ಎಲೆಕ್ಟ್ರಾನ್ (ಪಾಸಿಟ್ರೊನ್ಸ್), ಫೊಟಾನ್ಸ್ ಹಾಗೂ ನ್ಯುಟ್ರಿನೊಸ್ ಇವುಗಳ ಕಡಲಾಗಿ ತುಂಬಿತ್ತು. ಕಾಲಕ್ರಮೇಣ ತಣ್ಣಗಾಗಿ ಅದು ಈಗಿನ ಪ್ರಪಂಚದ ಮಾದರಿಯಂತಿದೆ.

ಖಗೋಳ ಶಾಸ್ತ್ರದಲ್ಲಿನ ಕೆಲವು ಮೂಲಭೂತ ಪ್ರೆಶ್ನೆಗಳು:
೧. ಬ್ರಹ್ಮಾಂಡದಲ್ಲಿ ಏನಿದೆ?
೨. ಅದು ಯಾವುದರಿಂದ ಮಾಡಲ್ಪಟ್ಟಿದೆ?
ಇದನ್ನು ಅರ್ಥ ಮಾಡಿಕೊಳ್ಳದೆ ವಿಶ್ವವು ಹೇಗೆ ಸೃಷ್ಟಿಯಾಯಿತು ಎಂದು ದೃಢವಾಗಿ ನಿರ್ಧಾರಕ್ಕೆ ಬರಲಾಗುವುದಿಲ್ಲ.

ಈಗಿನ ಬ್ರಹ್ಮಾಂಡದಲ್ಲಿ ಏನಿದೆ???
ನಮ್ಮ ಇಂದಿನ ಬ್ರಹ್ಮಾಂಡವು ಬ್ಯಾರೋನಿಕ್ ಮ್ಯಾಟರ್ (೪.೬%), ಡಾರ್ಕ್ ಮ್ಯಾಟರ್(೨೩%) ಮತ್ತು ಡಾರ್ಕ್ ಶಕ್ತಿ(೭೨%) ಇಂದ ತುಂಬಿದೆ, ಹೀಗಂದರೆ ಏನೆಂದು ನೊಡೋಣ:

ಬ್ಯಾರೋನಿಕ್ ಮ್ಯಾಟರ್:  ನಾವು ಉಸಿರಾಡುವಗಾಳಿ, ನಾನು,ನೀವು, ಪ್ರಾಣಿಗಳು, ಭೂಮಿ, ಎಲ್ಲಾ ಗ್ರಹಗಳು, ದೂರದಲ್ಲಿರತಕ್ಕ ನಕ್ಷ್ಯತ್ರಗಳು ಎಲ್ಲವೂ ಈ ಗುಂಪಿನಲ್ಲಿ ಬರುತ್ತವೆ. ಇವೆಲ್ಲವೂ ಪ್ರೋಟಾನ್, ಎಲೆಕ್ಟ್ರಾನ್ ಹಾಗೂ ನ್ಯೂಟ್ರಾನ್ ಗಳಿಂದ ಆಗಿದೆ. ಈ ರೀತಿಯ ವಸ್ತು ನಮ್ಮ ಈಗಿನ ಬ್ರಹ್ಮಾಂಡದಲ್ಲಿ ಶೇ ೪.೬% ಇದೆ.

ಡಾರ್ಕ್ ಮ್ಯಾಟರ್: ಇದು ಸಾಧಾರಣವಾಗಿ "ವಿಚಿತ್ರ" ವಸ್ತು ನಾನ್-ಬ್ಯಾರೋನಿಕ್ ವಸ್ತು. ಸಾಮಾನ್ಯ ವಸ್ತುವಿನೊಂದಿಗೆ ಪ್ರತಿಕ್ರಯಿಸುವುದಿಲ್ಲ,ಪ್ರತಿಕ್ರಯಿಸಿದರೂ ತುಂಬಾ ಬಲಹೀನವಾಗಿರುತ್ತದೆ. ಆದರೆ ಈ ತರಹದ ಯಾವ ವಸ್ತುವನ್ನು ವೈಙ್ಞಾನಿಕ ಪ್ರಯೋಗ ಶಾಲೆಯಲ್ಲಿ ಪ್ರತ್ಯಕ್ಷ ಅವಲೋಕಿಸಿಲ್ಲ. ಈ ನಮೂನೆಯ ವಸ್ತುವಿಗೆ ಮಹತ್ತರವಾದ ಖಗೋಳ ಒತ್ತಡವಿರುವುದಿಲ್ಲ. ಈ ರೀತಿಯ ವಸ್ತು ನಮ್ಮ ಈಗಿನ ಬ್ರಹ್ಮಾಂಡದಲ್ಲಿ ಶೇ ೨೩% ಇದೆ.

ಡಾರ್ಕ್ ಶಕ್ತಿ: ಇದು ತಿಳಿದಿರುವಂತೆ ವಿಲಕ್ಷಣ(ವಿಚಿತ್ರ) ಬಗೆಯ ವಸ್ತು, ಇದರ ಗುಣಲಕ್ಷಣವನ್ನು ವಿಶಾಲವಾದ, ನಕಾರಾತ್ಮಕ ಒತ್ತಡ ಎಂದು ವಿವರಿಸಬಹುದು. ಇದೊಂದೇ ಮಾದರಿಯ ವಸ್ತುವು ಪ್ರಪಂಚದ ವಿಸ್ತರಣವನ್ನು ತೀವ್ರಗೊಳಿಸುವ ಅಥವ ವೇಗವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿರುವುದು. ಈ ರೀತಿಯ ವಸ್ತು ನಮ್ಮ ಈಗಿನ ಬ್ರಹ್ಮಾಂಡದಲ್ಲಿ ಶೇ ೭೨% ಇದೆ.

ಡಾರ್ಕ್ ಶಕ್ತಿ ಹೇಗೆ ಅಸ್ತಿತ್ವಕ್ಕೆ ಬಂತು?
ಬ್ರಹ್ಮಾಂಡದಲ್ಲಿರುವ ಒಟ್ಟು ಮಾಸ್ ಅನ್ನು ಗ್ರ್ಯಾವಿಟೇಶನಲ್ ಲೆನ್ಸಿಂಗಿಂದ ಕಂಡುಹಿಡಿಯಬಹುದು. ಒಂದು ಸಾರಿ ನಮಗೆ ಒಟ್ಟು ಮಾಸ್ ತಿಳಿದಮೇಲೆ, ಸೂಪರ್ನೋವಾ ಸರ್ವೆಯನ್ನು ನೋಡಿದರೆ ನಮಗೆ ಬ್ರಹ್ಮಾಂಡ ಎಸ್ಟು ವೇಗವಾಗಿ ಚಲಿಸುತ್ತದೆ ಎಂದು ತಿಳಿಯುತ್ತದೆ. ಯಾವ ಶಕ್ತಿ ಪ್ರಪಂಚದ ವಿಸ್ತರಣವನ್ನು ತೀವ್ರಗೊಳಿಸುವ ಅಥವ ವೇಗವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿರುವುದುದೋ ಅದೇ ಡಾರ್ಕ್ ಶಕ್ತಿ .

ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಶಕ್ತಿಯನ್ನು ಯಾವುದೇ ಪ್ರಯೋಗಶಾಲೆಯಲ್ಲಿ ಅಳೆಯಲಾಗುವುದಿಲ್ಲ. ಆದರು ಇದು ಪ್ರಪಂಚದಲ್ಲಿ ಅಸ್ತಿತ್ವದಲ್ಲಿದೆ. ಹಾಗಾದರೆ ನಮ್ಮ ಇಂದಿನ ವಿಜ್ಞಾನಕ್ಕೆ ಗೊತ್ತಿರುವುದು ಶೇ ೪.೬% ಅದರಲ್ಲಿರೂ ೪.೨% ತಾರಾಗಣಗಳ ನಡುವಿರುವ ಅನಿಲ, ನಮ್ಮ ಎಲ್ಲಾ ಸಿದ್ದಾಂತಗಳು ಈ ೦.೪% ಮಾತ್ರ ಅನ್ವಯಿಸುತ್ತದೆ.

ಈಗ ನಮ್ಮ ಪ್ರಾಚೀನರಿಗೆ ಇದರ ಬಗ್ಗೆ ಎಷ್ಟು ತಿಳಿದಿತ್ತು ಎಂದು ನೋಡೋಣ:

ಈಶೋಪನಿಷತ್ತಿನ ಶ್ಲೋಕ ೫:

ತದೇಜತಿ ತನ್ನೈಜತಿ
ತದ್ದುರೆ ತದ್ವಂತಿಕೆ
ತದಂತರಸ್ಯ ಸರ್ವಸ್ಯ
ತದು ಸರ್ವಸ್ಯ ಬಹ್ಯತಃ

ಆದು ಚಲಿಸುತ್ತದೆ, ಅದು ಚಲಿಸುವುದಿಲ್ಲ, ಹೇಗೆ ಅದು ಹತ್ತಿರದಲ್ಲಿದೆಯೋ ಹಾಗೆ ದೂರದಲ್ಲಿಯೂ ಇದೆ, ಅದು ಎಲ್ಲರ ಒಳಗಡೆ ಇದೆ, ಹಾಗೆ ಎಲ್ಲದರ ಹೊರಗಡೆಯೂ ಇದೆ. (ಡಾರ್ಕ್ ಶಕ್ತಿ ಲಕ್ಷಣ: ಈ ಶಕ್ತಿಯು ಪ್ರಪಂಚದ ಎಲ್ಲೆಡೆಯಲ್ಲಿಯೂ ಸಮಾನವಾಗಿದೆ)

ಈಶೋಪನಿಷತ್ತಿನ ಶ್ಲೋಕ ೪

ಅನೇಜದೇಕಮ್ ಮನಸೊ ಜವಿಯಃ
ನೈನದ್ದೇವ ಅಪ್ನುವನ್ಪುರ್ವಮರ್ಷತ್
ತದ್ಧವತೊ ’ನ್ಯನ್ ಅತ್ಯೆತಿ ತಿಶ್ಟತ್
ತಸ್ಮಿನ್ನಪೋ ಮತರಿಸ್ವ ದಧತಿ

ದ್ವಂದ್ವವಿಲ್ಲದ ಆತ್ಮ, ಕಲಕುವುದಿಲ್ಲ ಮನಸ್ಸಿಗಿಂತ ತ್ವರಿತವಾದದ್ದು, ಇಂದ್ರಿಯಗಳು ತಲುಪಲಸಾಧ್ಯ. ಯಾಕೆಂದರೆ ಅದು ಯಾವಾಗಲು ಮುಂದೆ ಚಲಿಸುತ್ತದೆ. ಸ್ಥಿರವಾಗಿದ್ದರೂ ಓಡುವವರನ್ನೂ ಮೀರಿಸುವುದು. (ಇದೆಲ್ಲಾ ಡಾರ್ಕ್ ಶಕ್ತಿಯ ಲಕ್ಷಣಗಳು)

ಭಗವದ್ಗೀತೆಯ ಅಧ್ಯಾಯ ೯ ಶ್ಲೋಕ ೪,

ಮಯಾ ತತಂ ಇದಮ್ ಸರ್ವಮ್
ಜಗದ್ ಅವ್ಯಕ್ತ-ಮುರ್ತಿನಾ
ಮತ್-ಸ್ಥಾನಿ ಸರ್ವ-ಭೂತಾನಿ
ನ ಚಹಂ ತೆಸ್ವ್ ಅವಸ್ಥಿತಃ

ಇಡೀ ಬ್ರಹ್ಮಾಂಡವು ನನ್ನ ಅವ್ಯಕ್ತ ಸ್ವರೂಪದಿಂದ ವ್ಯಾಪಿಸಿದೆ, ಎಲ್ಲಾ ಪ್ರಾಣಿಗಳು ನನ್ನಲ್ಲಿದ್ದಾರೆ ಆದರೆ ನಾನು ಯಾರಲ್ಲಿಯೂ ಇಲ್ಲ.
(ಡಾರ್ಕ್ ಶಕ್ತಿ ಲಕ್ಷಣ: ಈ ಶಕ್ತಿಯು ಪ್ರಪಂಚದ ಎಲ್ಲೆಡೆಯಲ್ಲಿಯೂ ಸಮಾನವಾಗಿದೆ)

ಭಗವದ್ಗೀತೆಯ ಅಧ್ಯಾಯ ೧೦ ಶ್ಲೋಕ ೨೦
ಅಹಂ ಆತ್ಮ ಗುಡಾಕೇಶ
ಸರ್ವ-ಭೂತಸಯ-ಸ್ಥಿತಃ
ಅಹಂ ಅದಿಸ್ ಚ ಮಧ್ಯಂ ಚ
ಭೂತಾನಾಂ ಅಂತ ಎವ ಚ

ನಾನು ಆತ್ಮ, ಗೂಡಾಕೇಶನೆ ನಾನು ಎಲ್ಲರಲ್ಲಿಯೂ ಇದ್ದೇನೆ, ನಾನೇ ಆದಿ, ನಾನೇ ವರ್ತಮಾನ, ನಾನೇ ಅಂತ್ಯ.

ಭಗವದ್ಗೀತೆಯ ಅಧ್ಯಾಯ ೯ ಶ್ಲೋಕ ೨೯
ಸಮೋಹಮ್? ಸರ್ವಭೂತೇಷು
ನಮೆ ದ್ವೇಸ್ಸ್ಯೋಸ್ತಿ ನ ಪ್ರಿಯಃ
ನಾನು ಸಮಸ್ತ ಭೂತಗಳಲ್ಲಿಯೂ ಸಮಾನಗಿರುತ್ತೇನೆ. ನನಗೆ ಶತ್ರುವೂ ಇಲ್ಲ ಮಿತ್ರನೂ ಇಲ್ಲ.
(ಡಾರ್ಕ್ ಶಕ್ತಿ ಲಕ್ಷಣ: ಈ ಶಕ್ತಿಯು ಪ್ರಪಂಚದ ಎಲ್ಲೆಡೆಯಲ್ಲಿಯೂ ಸಮಾನವಾಗಿದೆ)

ಭಗವದ್ಗೀತೆ, ಉಪನಿಷತ್ತಿನಲ್ಲಿ ಹುಡುಕಿದರೆ ಈ ರೀತಿಯ ಅನೇಕ ಶ್ಲೋಕಗಳು ಇವೆ.

ಈಗ ನೂರು ವರ್ಷಗಳ ಹಿಂದೆ ಹೋಗೋಣ (೧೮೯೩): ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೋ ಭಾಷಣದಲ್ಲಿ ವಿಜ್ಞಾನದ ಬಗ್ಗೆ ಕೆಳಕಂಡಂತೆ ಹೇಳಿದ್ದಾರೆ:

"Science is nothing but the finding of unity......"

ವಿಜ್ಞಾನವನ್ನು ಗೌರವಿಸು, ದೇವರನ್ನು ಪ್ರೀತಿಸು, ಇವೆರಡರ ಸಮ್ಮಿಲನವೇ ಬಾಳಿನ ಪರಿಪೂರ್ಣ ಅರ್ಥವನ್ನು ನೀಡುವುದು.

 

 ಕೃಪೆ: ನಾಸಾ , ಭಗವದ್ಗೀತೆ ಮತ್ತು ಉಪನಿಷತ್ತು.