'ಕುಳಿತು ಬಗೆಹರಿಸಿಕೊಳ್ಳಿ’
ಬರಹ
ಕಾವೇರಿ ಮಾತು-ಕತೆಗೆ ತ. ನಾ. ಮುಖ್ಯಮಂತ್ರಿ ಬೆಂಗಳೂರಿಗೆ ಬರುವುದು ಸಂತೋಷ. ’ಕುಳಿತು ಬಗೆಹರಿಸಿಕೊಳ್ಳಿ’ - ಇದು ಸುಪ್ರೀಂ ಕೋರ್ಟ್ ಆದೇಶ. ಸದ್ಯ, ತಡವಾದರೂ, ’ಸಂಬಂಧ’ದ ಮಹತ್ವ ಅರ್ಥವಾಯಿತಲ್ಲಾ! ’ಸಂಬಂಧ’ ಎರಡು ನಾಡುಗಳದಲ್ಲ; ನೀರು-ಮಣ್ಣು ನಡುವಣದ್ದು; ಮಣ್ಣು-ರೈತ ನಡುವಣದ್ದು. ರೈತನೆಣದರೆ ರೈತನೇ; ತಮಿಳು ಮಾತಾಡಿದರೂ ಅಷ್ಟೆ, ಕನ್ನಡ ಆಡಿದರೂ ಅಷ್ಟೆ. ಕ್ಷಮೆಯಿರಲಿ, ಬಹುಶಃ ದೂರದೃಷ್ಟಿಯ ಜನಹಿತಾಸಕ್ತ ಮುತ್ಸದ್ದಿ ಇಂಜಿನಿಯರ್ ದೃಷ್ಟಿ, ಬಹುಶಃ ಇಷ್ಟು ದೂರ ಹರಿದಿರಲಿಲ್ಲವೇನೋ. ಕಟ್ಟೆ ನಿರ್ಮಾಣದ ಕರಡು ಹಂತದಿಂದಲೇ ವಿವಾದ ನಡೆದುಬಂದಿದೆ. ಈಗ ಕುಳಿತು ಬಗೆಹರಿಸಿಕೊಳ್ಳುವ ಆದೇಶ. ತಲಕಾವೇರಿ-ವೈನಾಡಿನಿಂದ ಹಿಡಿದು ಕುಡಲೂರಿನವರೆಗಿನ ಎಲ್ಲಾ ರೈತ ಪ್ರತಿನಿಧಿಗಳೂ ಸ್ನೇಹಭಾದಿಂದ ’ಕೂಡ’ಬೇಕು. ರಾಜಕೀಯವನ್ನು ಒದ್ದೋಡಿಸಬೇಕು. ಜಲಶಾಸ್ತ್ರಜ್ಞರೂ, ಕೃಷಿತಜ್ಞರೂ ಪರಿಣಿತ ಸಲಹೆ ಕೊಡಬೇಕು. ಒಟ್ಟೊಪ್ಪಂದ, ತಮಿಳ-ಕನ್ನಡಿಗ ದೃಷ್ಟಿ ಮೀರಿ ರಾಷ್ಟ್ರೀಯ ಕೃಷಿ ಉತ್ಪಾದಕತೆಯನ್ನ ಗಮನದಲ್ಲಿರಿಸಿಕೊಳ್ಳಬೇಕು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ