ಕೃತಗ್ನ(ಘ್ಹ್ನ)ತೆ
"ರೀ... ಹಾಸಿಗೆ ಇದ್ದಷ್ತು ಕಾಲು ಚಾಚಬೇಕು ಕಣ್ರೀ...
ದೀಪುಗೆ ಯಾಕೆ ಸಾಲ ಮಾಡಿ ಕಂಪ್ಯೂಟರ್ ಇಂಜಿನೀಯರಿಂಗ್ ಪೇಮೆಂಟ್ ಸೀಟ್ ಕೊಡಿಸ್ತೀರಾ".... ಅಂತ ಹೇಳಿದಳು ನನ್ನಾಕೆ.
"ಲೇ... ನಮಗೆ ಇರೋದೆ ಒಬ್ಬನೆ ಮಗ. ಅವನಿಗೆ ಖರ್ಚು ಮಾಡದೆ ಇನ್ಯಾರಿಗೆ ಮಾಡಬೇಕು ಹೇಳು."... ಅಂದೆ ನಾನು.
"ನಿಮಗೆ ಒಬ್ಬಳು ಮಗಳು ಕೂಡ ಇದ್ದಾಳೆ, ಅವಳ ಮದುವೆಗೂ ದುಡ್ಡು ಹೊಂಚಬೇಕು ಅನ್ನೋದನ್ನ ಮರೀಬೇಡಿ"... ಅಂದಳು ಗೀತಾ.
"ದೇವರಿದ್ದಾನೆ ಸುಮ್ಮನಿರೆ... ಅವನು ಎಲ್ಲಾರನ್ನು ಕಾಯುತ್ತಾನೆ." .... ಅಂದೆ. ಹೆಂಡತಿ ಆ ಕಡೆ ಮಗ್ಗಲು ಮಾಡಿಕೊಂಡು ಮಲಗಿ ಬಿಟ್ಟಳು.
ನಾನು ಹಾಗೆ ಕಣ್ಣು ಮುಚ್ಚಿ ನಿದ್ದೆ ಮಾಡಲು ಯತ್ನಿಸಿದೆ... ಆದರೆ.. ನನ್ನ ಮನಸ್ಸು ಒಮ್ಮಿಂದೊಮ್ಮೆಲೇ ಮೂವತ್ತಾರು ವರ್ಷ ಹಿಂದಕ್ಕೆ ಉರುಳಿತು.
ನನ್ನ ಹದಿ ಹರೆಯದ ದಿನಗಳು ಕಣ್ಣ ಮುಂದೆ ಗೋಚರಿಸತೊಡಗಿದವು.
ಆ ದಿನಗಳು... ಕಾಲೇಜಿನ ಫ್ಹೈನಲ್ ಇಯರ್ ಅದು. ನಾನು ರಾಜು, ಶಂಕರ, ಕಿಟ್ಟಿ ಒಟ್ಟಿಗೆ ಇದ್ದು ಬಿಟ್ಟ್ರೆ ಆಯ್ತು. ನಮನ್ನ ಹಿಡಿಯೋರೆ ಇಲ್ಲ. ದಿನಾ ಬೆಳಿಗ್ಗೆ ಕಾಲೇಜು ನೆಪ ಮಾಡಿ ಮನೆಯಿಂದ ಹೊರಟು ರಾಜೇಶ್ ಖನ್ನಾ, ರಾಜ್ ಕುಮಾರ್, ಉದಯ್ ಕುಮಾರ್ ಸಿನೆಮಾ ನೋಡೋದು. ಕಾಲೇಜಿಗೆ ಬಂಕ್ ಹೊಡೆಯೋದರಲ್ಲಿ ಎತ್ತಿದ ಕೈ !
ದಿಲ್ ದಾರ್ ಆಗಿ ಯಾವುದಕ್ಕೂ ಕೇರ್ ಮಾಡದೆ "Live Life King Size" ಅನ್ನೋ attitude !
ಪರೀಕ್ಷೆ ಹತ್ರ ಬರುತಿದ್ದ ಹಾಗೆ ಪಾಸ್ ಆಗಲಿಕ್ಕೆ ಎಷ್ತು ಬೇಕೊ ಅಷ್ಟು ಓದೋದು ಅಷ್ಟೆ. ಸ್ನೇಹಿತರ ಜೊತೆ ಊರು ಸುತ್ತೋದು ಅಂದ್ರೆ ಎಲ್ಲಿಲ್ಲದ ಪ್ರೀತಿ. ಅಪ್ಪ ಅಮ್ಮ ನನ್ನನ್ನು ಸಾಕಲಿಕ್ಕೆ ಎಷ್ಟು ಕಷ್ಟ ಪಡುತ್ತಿದ್ದಾರೆ ಅಂತ ಗೊತ್ತಿದ್ರೂ ಜಾಸ್ತಿ ತಲೆ ಕೆಡಿಸಿಕೊಳ್ತಾ ಇರಲಿಲ್ಲ.
ದಿನಗಳು ಉರುಳಿದವು...
ಡಿಗ್ರಿ ರಿಸಲ್ಟ್ ಬಂದೇ ಬಿಡ್ತು... ಇಷ್ಟು ದಿನ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೋ ಹಾಗೆ ಅಪ್ಪನ ಹಣದ ಮೇಲೆ ಜೀವನ ಮಾಡ್ತಾ ಇದ್ದೆ. ನಿಜವಾದ ಬದುಕು ಏನು ಅಂಥ ಆಗ ಅರ್ಥ ಆಯಿತು. ಈಗ ದುಡ್ಡು ಕೇಳೋಕೆ ಏನೋ ಒಂಥರಾ ಸಂಕೋಚ.
ತಿಂಗಳುಗಳು ಉರುಳಿದರೂ ಕೆಲಸ ಸಿಗಲಿಲ್ಲ.
ಒಂದು ದಿನ ಕೆಲಸದ ಇಂಟರ್ವ್ಯೂ ನಲಿ ಅದೃಷ್ಟ ಖುಲಾಯಿಸಿಯೇ ಬಿಡ್ತು. ಬ್ಯಾಂಕ್ ಒಂದರಲ್ಲಿ ಕೆಲಸ ಗಟ್ಟಿಯಾಗುವ ಮಟ್ಟಕ್ಕೆ ವಿಷಯ ಬಂತು. ಆದರೆ ಒಂದೇ ಒಂದು ತೊಡಕು ಅಂದರೆ ಆ ಬ್ಯಾಂಕಿನ ಅಧಿಕಾರಿ ಇಪ್ಪತ್ತು ಸಾವಿರ ಲಂಚ ಕೇಳಿದ್ದರು. ನನ್ನ ಹತ್ತಿರ ಬಿಡಿಗಾಸು ಕೊಡ ಇಲ್ಲ.
ಅಪ್ಪನ ಹತ್ತಿರ ಇದರ ಬಗ್ಗೆ ಹೇಗೆ ಮಾತಾಡೋದು ಅಂತ ತೋಚುತ್ತಾ ಇರಲಿಲ್ಲ. ಕಡೆಗೂ ಧೈರ್ಯ ಮಾಡಿ ಕೇಳಿಯೇಬಿಟ್ಟೆ. "ಅಪ್ಪ.. ಸಂಬಳ ಬಂದ ಕೂಡಲೆ ಕಿಷ್ಟಿನಲ್ಲಿ ಹಿಂತಿರುಗಿಸುತ್ತೇನೆ..." ಅಪ್ಪ ತನ್ನ ಪಿಂಚಣಿ ಹಣದಿಂದ ತೆಗೆದು ಕೊಟ್ಟರು.
"ಲೇ.. ಅಪ್ಪ ಯಾಕೆ ಬಂದಿದ್ರು ಮನೆಗೆ? ಏನು ಬೇಕಿತ್ತಂತೆ?" .. ಅಂತ ಕೇಳಿದೆ ನಾನು. ಅವತ್ತೇ ಹೇಳಿದ್ನಲ್ಲ ಅವರಿಗೆ ಈಗ ನನ್ನ ಹತ್ರ ದುಡ್ಡು ಇಲ್ಲ ಅಂತ ! ಇಲ್ಲ ರೀ.. ನಿಮ್ಮ ತಂಗಿ ಮದುವೆಗೆ ಕರೆಯೊಕ್ಕೆ ಬಂದಿದ್ದರು.
Comments
ಉ: ಕೃತಗ್ನ(ಘ್ಹ್ನ)ತೆ
ಮಧುಕರ್, ಕತೆ ಚೆನ್ನಾಗಿದೆ.
In reply to ಉ: ಕೃತಗ್ನ(ಘ್ಹ್ನ)ತೆ by ಗಣೇಶ
ಉ: ಕೃತಗ್ನ(ಘ್ಹ್ನ)ತೆ
ಇತಿಹಾಸದ ಚಕ್ರ ತಿರುಗಿದರು !
ಅಪ್ಪ ಮಗನ ಪಾತ್ರ ಮಾತ್ರ ಬದಲಾಗಿದೆ !
ಮಗ ಅಪ್ಪನಾಗಿದ್ದಾನೆ, ಇನ್ನೊಬ್ಬ ಅದೆ ರೀತಿಯ ಅಪ್ಪನನ್ನ ಸೃಷ್ಟಿ ಮಾಡಲು
In reply to ಉ: ಕೃತಗ್ನ(ಘ್ಹ್ನ)ತೆ by partha1059
ಉ: ಕೃತಗ್ನ(ಘ್ಹ್ನ)ತೆ
ಧನ್ಯವಾದಗಳು.
In reply to ಉ: ಕೃತಗ್ನ(ಘ್ಹ್ನ)ತೆ by krmadhukar
ಉ: ಕೃತಗ್ನ(ಘ್ಹ್ನ)ತೆ
ಕೌಟುಂಬಿಕ ಸಮಾಜದ ವ್ಯವಸ್ಠೆ/ಆವ್ಯವಸ್ಠೆಗಳನ್ನು ಬಿಂಬಿಸುವ ಒಂದು ಪ್ರಯತ್ನ.