ಕೃತಘ್ನರು

ಕೃತಘ್ನರು

ಕವನ

ಸೂರ್ಯನೆಂದರು; ದೇವನೆಂದರು

ಪೂರ್ವ ದಿಗಂತದಿ ಹುಟ್ಟಿದೆನ್ನನು

ಅರ್ಘ್ಯ ನೀಡಿ ಕೈಯ ಮುಗಿದರು

ಓ ದೇವ ದೇವನೆ ಕಾಪಾಡೆಂದರು

 

ನಾನು ಗಗನದಿ ಮೇಲಕೇರಲು

ಶಾಖವ ಬೀರಿ ಬೀರಿ ಚೆಲ್ಲಲು

ಇವನೆಂತಹ ಬಿಸಿ ಸೂರ್ಯನು

ಎಂದು ಹಿಡಿ ಶಾಪವ ಹಾಕಲು

 

ನನ್ನ ಶಾಖದ ಧಗೆಗೆ ನೀರ ಹೀರಿ

ಆವಿ ಮಾಡಿ ಮೇಲೆ ಕಳಿಸುವೆ

ನೀರ ಹನಿಗಳು ಸಾಂದ್ರಗೊಳ್ಳಲು

ಮಳೆಯ ಸುರಿಸುವ ಮೋಡವೇ

 

ಎನ್ನ ಕಾಯಕವದು ಮುಗಿಯಲು

ಪಡುವಣದಿ ನಾನು ಮುಳುಗಿದೆ

ಎಂಥ ಸೂರ್ಯ ಉರಿದ ಮೆರೆದ

ಎನ್ನುತ ಎನ್ನನು ಭಾರೀ ತೆಗಳಲು

 

ಆ ಚಂದ್ರ ಬಾನಲಿ ಹೊಳೆಯಲು

ನನ್ನ ಇರುವನು ಎಲ್ಲಾ ಮರೆತರು

ಶಾಂತ ಚಂದ್ರಗೆ ಮನವ ತೆರೆಯೆ

ಬೆಳೆದಿಂಗಳಾಟಕೆ ಪುಳಕಗೊಳ್ವರು

 

ಉಪಕಾರವನು ಮರೆತ ಕೃತಘ್ನರು

ಇರುಳ ಚಳಿಯು ಹೆಚ್ಚಿ ನಡುಗಲು

ಪುನಃ ನನ್ನಾಗಮನಕೇ ಕಾಯ್ವರು

ನನ್ನುಪಕಾರವ ಮರೆತ ಮೂಢರು!

- ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್