"ಕೃತಿ" ನೀವಾಗುತ್ತೀರಾ?......

"ಕೃತಿ" ನೀವಾಗುತ್ತೀರಾ?......

ಬರಹ

ರೀ, ನೀವು ನನ್ನ ಜೊತೆ ಇದ್ರಲ್ಲಾ ಆ ಏಕಾಂತ ಸಂಜೆಯ ಸುಂದರ ಕಡಲ ತೀರದಿ, ಪ್ರಶಾಂತ ತಂಗಾಳಿ ಸುಯ್ಯೆಂದು ನಮ್ಮನ್ನೇ ಸುತ್ತಾಯಿತ್ತು. ಆ ಕಡಲ ಅಲೆಗಳ ಅಬ್ಬರದ ಸದ್ದು ಈ ಮೌನದ ಮನಸ್ಸನ್ನ ಬಡಿದೆಬ್ಬಿಸುತ್ತಿತ್ತು, ಮೌಣನ ಮಾತಾಗಿಸೆಂದು, ಈ ಎದೆಯೊಳಗೆ ಮೊಳೆತಿರುವ ಒಲ್ಲವ ತಿಳಿಸೆಂದು, ಆದರೆ ಅಷ್ಟರಲ್ಲೇ ಆ ಸೂರ್ಯ ಬಾನಿನಿಂದ ಕಡಲೊಳಗೆ ಜಾರಿದ್ದ............

ರೀ ನಿಮಗೆ ನೆನೆಪಿದೆಯಾ? ನೀವು ಆಫೀಸಿಗೆ ಬಂದ ಮೊದಲ ದಿನ,,, ಶ್ವೇತ ವರ್ಣದ ಡ್ರೆಸ್ ಹಾಕ್ಕೊಂಡು ನನ್ನ ಪಕ್ಕದಲ್ಲಿಯೇ ಕುಲಿತ್ಕೊಂಡಿದ್ರಲ್ಲಾ ಆಗ ನಾ ಕುಳಿತಲ್ಲಿಯೇ ಮಾಯವಾಗಿದ್ದೆರೀ..... ಆ ಮೊದಲ ಕಣ್ಸೆಳೆಯುವ ಕುಡಿ ನೋಟದಿ ಸೋತೂಗಿದ್ದೆ, ಆಗಲೇ ಅಂದುಕೊಂಡೆ ಈ ಪುಟ್ಟ ಹೃದಯವೆಂಬ ಒಲವಿನ ಅರಮನೆಗೆ ನೀವೇ ಒಡತಿಯಾಗಬೇಕೆಂದು...

.........ರೀ ನೀವು ಬಳ್ಳಿಯಲ್ಲಿ ಹೂವು ತುಂಬಿ ಮರಗಳಲಿ ಜೀವ ತುಂಬಿ ಎಲ್ಲೆಲ್ಲಿ ನೋಡಿದರಲ್ಲಿ ಹೊಸ ಹಸಿರು ತುಂಬಿ ತುಳುಕುವ ಕರುನಾಡ ಕೊಡಗಿನ ಬೆಡಗಿ, ಜಾರೋ ಜೋಗದ ಹಾಗೆ ಜಡೆ, ಕಣ್ಣಲ್ಲಿ ಕಡಲ ಬೆಡಗು, ನಿಂತಾಗ ಬೇಲೂರಿನ ಬಾಲೆ, ಕುಂತಾಗ ಕಾನನದ ನಲ್ಲೆ, ಮೆಲ್ಲ ಮೆಲ್ಲ ನಡೆದರೆ ಮೈತುಂಬ ಆಗುಂಬೆ, ಕಣ್ಣೋಟ ಕಣ್ಸೆಳೆವ ಕರಾವಳಿಯ ಸೌಂದರ್ಯದ ರಾಶಿ, ನಲಿಯುವಾಗ ಕಾವೇರಿಯ ವೈಯ್ಯಾರ, ಹಣೆಯ ಮೇಲಿನ ಒಂದೊಂದು ಬೆವರ ಹನಿ ಮುಂಜಾನೆಯ ಮಂಜಿನ ಹನಿ, ಸೂರ್ಯನನ್ನೇ ನಾಚಿಸುವಂತ ಸಿಂದೂರ, ಗಿಣಿಯು ಸಹ ಉಬ್ಬೆರುವಂತ ಮೂಗು, ಬೆಳದಿಂಗಳಿನ ನೊರೆ ಹಾಲಿನಂತ ನಗು, ಮಾತಿನಲಿ ಮಂದಹಾಸ, ತಿಂಗಳ ಬೆಳಕಿನಲಿ ಅರಳಿದ ಹೂವಿನ ರಾಣಿ, ಈ ಸೊಬಗಿನ ಮಿಂಚಿನ ಸಂಚಾರ ಆಗಿ ದೇವರೂ ಕೂಡ ನಾಚಿಕೊಂಡ ಎನ್ನುವಂತ ಸೌಂದರ್ಯ, ಮೋಡಗಳು ಮನಬಿಚ್ಚಿ ಈ ಮೋಹಿನಿಯ ನೋಡಿ ಕುಣಿಯುತ್ತಿವೆಯೇನೋ ಅನ್ನುವಷ್ಟ ಶೃಂಗಾರದ ಖನಿ, ಸಾವಿರ ಕನಸಿನ ಕಲ್ಪನೆಯಲ್ಲಿ ಅರಳಿದ ಬಂಗಾರದ ಗಿಣಿ, ಪದಗಳಿಗೆ ಸಿಗದ ಸಿರಿ, ಎಂದೆಲ್ಲಾ ಹಾಡಿ ಹೊಗಳಿಕೊಂಡು ನಿಮ್ಮ ನಿಮ್ಮ ಜೊತೆಲೇನೇ ಇರ್ಬೇಕು ಅನ್ನಿಸುತ್ತೆ, ನನ್ನಲ್ಲಿರುವ ಪ್ರತೀ ಉಸಿರು ಕೂಡ ನಿಮ್ಮನ್ನೇ ಜಪಿಸುತ್ತೆ, ನನ್ನೆದೆ ಮೇಲೆ ನಿಮ್ಮೆಸರ ಗೀಚಬೇಕು ಅನ್ನಿಸುತ್ತೆ, ಈ ಹೃದಯದ ಪ್ರತಿ ಬಡಿತವು ನಿಮ್ಮನ್ನ ಅರೆಸುತ್ತೆ,,,, ಇನ್ನು ರಾತ್ರಿಯ ನೀರವ ಮೌನದಲಿ ನಿಮ್ಮ ನೆನಪುಗಳ ಸಂತೆ, ನೆರಳಂತೆ ಬಿಡದೆ ಹಿಂಬಾಲಿಸುವ ನಿನ್ನೋಲವ ನೆನೆಪು,,, ರೀ ಪ್ರೀತಿ ಅಂದ್ರೆ ಇದೇನಾ????............

ರೀ ನನಗರಿವಿಲ್ಲದಂತೆ ನನ್ನ ಮನಸ್ಸು ಗೆದ್ದದ್ದು, ನಿದ್ದೆ ನೀರಡಿಕೆ ಕದ್ದು ನಲುಗುವಂತೆ ಮಾಡಿದ್ದು ಆ ನೋಮ್ಮ ಮಂದಹಾಸದ ನಗು ತಾನೇ?!!!!...

ರೀ ನಿಮ್ಮನ್ನ ಯಾರೂ ಇಲ್ಲದಂತಹ ದೂರದ ಪ್ರಶಾಂತವಾದ ಸ್ಥಳಕ್ಕೆ ಕರ್ಕೊಂದೊಗಿ ' "ಐ ಲವ್ ಯು" ನೀವು ಅಂದ್ರೆ ನನಗೆ ತುಂಬಾ ಇಷ್ಟ ' ಅಂತ ಸಾರಿ ಸಾರಿ ಜೋರಾಗಿ ಕೂಗಿ ಹೇಳ್ಬೇಕು ಅನ್ನಿಸುತ್ತೆ, ಆದರೆ ನೆವೀಲ್ಲಿ ನನ್ನ ತಿರಸ್ಕರಿಸಿಬಿಡುತ್ತಿರೆಂಬ ಈ ಮನದಲ್ಲಿನ ಸಣ್ಣದೊಂದು ಭಯ!, ನಮ್ಮನ್ನ ಬಿಟ್ಟು ನನಗೆ ಬದುಕುವುದಿಕ್ಕಾಗುವುದಿಲ್ಲರಿ/ ಏಕೆಂದರೆ ನೀವು ಅಂದ್ರೆ ನನಗೆ ಅಷ್ಟಿಷ್ಟ, ಆಗಲೇ ಮಾತುಗಳೆಲ್ಲಾ ಮೌನವಾಗಿ ಎದೆಯ ಗೂಡೊಳಗೆ ಬಚ್ಚಿಟ್ಟುಕೊಳ್ಳುತ್ತವೆ...............!!!!

ರೀ ನಿಮಗೆ ಇನ್ನೊಂದು ವಿಷಯ ಗೊತ್ತಾ! ನಿಮ್ಮನ್ನ ನೋಡ್ತಿದ್ರೆ ನನಗೆ ಗೊತ್ತಿಲದೇ ಕವಿಯಾಗ್ಬಿತ್ತಿರುತ್ತೇನೆ... ರೀ ಈ ಎಲ್ಲಾ ಭಯ ಬಿಟ್ಟು ಪ್ರೇಮ ನಿವೆದೆನೆಯಲ್ಲ್ಲಿ ಕೇಳ್ತಿದ್ದೀನಿ..ಏಕೆಂದರೆ ಪ್ರಶಾಂತವಾಗಿದ್ದ ನನ್ನ ಎದೆಯ ಸರೋವರದಲ್ಲಿ ಪ್ರೀತಿಯ ಅಲೆಯ ಎಬ್ಬಿಸಿದವಳು ನೀನು, ಈ ಮುಗ್ದ ಪ್ರೀತಿಯ ಒಪ್ಕೊಲ್ತ್ತಿರಾ? .. ನನ್ನನ್ನ ಪ್ರೀತಿಸ್ತಿರಾ? .. ಈ ಒಲೆವೆಂಬ ಬಾಳಿನ ಸುಂದರ ಸಾಲುಗಳಲ್ಲಿ "ಕೃತಿ" ನೀವಾಗುತ್ತೀರಾ?......

ನಿಮ್ಮ ಉತ್ತರದ ನೀರಿಕ್ಷೆಯಲ್ಲಿ ಕಾದಿರುವೆ

ನಿಮ್ಮವ ನಾಗ ಬಯಸುವವ .......
ಯತೀಶ್ (ಅದಿತ್ ಯತಿ ಕುಮಾರ್ )9743346113