ಕೃಷಿ ಸಂಪದ: ೩ನೇ ಸಂಚಿಕೆ, ಡಿಸೆಂಬರ್ ೨೦೦೯

ಕೃಷಿ ಸಂಪದ: ೩ನೇ ಸಂಚಿಕೆ, ಡಿಸೆಂಬರ್ ೨೦೦೯

ಬರಹ

ಬಿಟಿ ಬದನೆ ಇಡೀ ದೇಶದಲ್ಲಿ ಆತಂಕ ಮೂಡಿಸಿದೆ. ಯಾಕೆಂದರೆ ಕೇಂದ್ರ ಸರಕಾರ ನೇಮಿಸಿದ ಜೆನೆಟಿಕ್ ಇಂಜಿನಿಯರಿಂಗ್ ಎಪ್ರೂವಲ್ ಕಮಿಟಿಯು (ಜೈವಿಕ ಇಂಜಿನಿಯರಿಂಗ್ ಅನುಮೋದನಾ ಸಮಿತಿ) ಬಿಟಿ ಬದನೆಯ ಕೃಷಿ ಹಾಗೂ ಸಾರ್ವಜನಿಕ ಬಳಕೆಗೆ ಅನುಮೋದನೆ ನೀಡಿದೆ. ಆದರೆ ಹಲವಾರು ಪ್ರಶ್ನೆಗಳು ಹಾಗೇ ಉಳಿದಿವೆ.

ನಮ್ಮ ದೇಶದಲ್ಲಿ ಕಳೆದ ೯ ವರುಷಗಳಿಂದ ಬಿಟಿ ಬದನೆಯ ಪ್ರಯೋಗ – ಪರೀಕ್ಷೆಗಳು ನಡೆಯುತ್ತಿವೆ. ಈಗ ಆ ಸಮಿತಿಯ ವರದಿಯ ಪ್ರಕಾರ ಆಹಾರವಾಗಿ ಬಿಟಿ ಬದನೆಗೆ ಹಸುರು ನಿಶಾನೆ. ಈ ನಿರ್ಧಾರಕ್ಕೆ ಬರಲು ಅಗತ್ಯವಾದ ಕ್ಷೇತ್ರಪ್ರಯೋಗಗಳನ್ನು ನಡೆಸಿದ್ದು ಯಾವ ಸಂಸ್ಥೆ? ಅದು ಮಹಿಕೋ (ಮಹಾರಾಷ್ಟ್ರ ಹೈಬ್ರಿಡ್ ಸೀಡ್ಸ್ ಕಂಪೆನಿ). ಇದು ಭಾರತದಲ್ಲಿ ಮೊನ್‍ಸಾಂಟೋ ಎಂಬ ಬಹುರಾಷ್ಟ್ರೀಯ ಕಂಪೆನಿಯ ಜೊತೆಗಾರ.  ಅಂದರೆ, ಬಿಟಿ ಬದನೆಯ ವ್ಯಾಪಾರೀಕರಣದಿಂದ ಲಾಭವಾಗುವ ಕಂಪೆನಿಯೇ ಆ ಪ್ರಯೋಗಗಳನ್ನು ನಡೆಸಿ, ಮಾಹಿತಿ ಹಾಗೂ ಫಲಿತಾಂಶಗಳನ್ನು ಜೈಇಅ ಸಮಿತಿಗೆ ಒದಗಿಸಿದೆ. ಇದು ಸರಿಯೇ? ಮುಂದೆ ಓದಿ...

ಈ ಸಂಚಿಕೆಯಲ್ಲಿ:

  • ಕುಲಾಂತರಿ ತಳಿ: ವರವೋ ಶಾಪವೋ? [ಪುಟ ೩]
  • ಅಪರೂಪದ ಮಳ್ಳೆ ಮೀನು [ಪುಟ ೧೩]
  • ಕೃಷಿ ಕಲೆಯ ರೂವಾರಿ ಪೈಲೂರು [ಪುಟ ೯]
  • ಎರಡೇ ನಿಮಿಷಗಳಲ್ಲಿ [ಕೊನೆಯ ಪುಟ]

ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ:

Krushi Sampada third edition

೩ನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.