ಕೃಷ್ಣನ ಅಳಲು
ಬರಹ
ಕೃಷ್ಣನ ಅಳಲು
ಮೋಹಕ ಮೋಹದ ಮೋಹನ ರಾಗಕೆ
ಮನಸೋತು ಮರೆಯಾದಳೆನ್ನ ರಾಧೆ
ಕಂದನ ಕಾಣದೆ ಕಂಗಾಲಾದ
ತಾಯಿಯು ನಾನಾದೆ
ಕಣ್ಣಾ ಮುಚ್ಚೆ ಕಾಡೇ ಗೂಡೆ
ಆಡಲೆಂದು ಬಳಿಗೆ ಬಂದೆ
ಕಣ್ಣ ಮುಚ್ಚಿ ತೆರೆಯೆ ನಾನು
ಕಾಣದಾದೆ ಅಲ್ಲಿ ನೀನು
ರಾಧೆ,
ನೀನು ಇರದ ಬದುಕು ಎನಗೆ
ಬರಿಯ ಧಗೆಯೇ ಒಳಗೂ ಹೊರಗೆ
ನಿನ್ನ ನೆನಪು ಸರಿಯೇ ಮರೆಗೆ
ಭುವಿಯೇ ಗತಿಯು ಎನಗೆ ಕೊನೆಗೆ
ಹರಿಯುತಿದೆ ಕಂಬನಿ ಕಣ್ಣಂಚಿನಲಿ
ಎದೆಯಾಳದಿ ವಿರಹವು ಮನದಾಳದಲಿ
ಒಲವಿನ ಸೆಳೆತವು ಎದೆ ಗೂಡಿನಲ್ಲಿ
ಬರಲಾರೆಯ ರಾಧೆ ಎನ್ನ ಬಾಳಿನಲಿ?