ಕೃಷ್ಣಾ ಬಂದೆನೊ…
ಕವನ
ನನ್ನ ಕಣ್ಣಲಿ ನಿನ್ನ ನೋಡಿದೆ
ಮುದ್ದು ಉಡುಪಿಯ ಕೃಷ್ಣನೆ
ಯಾವ ಜನುಮದ ಪಾಪ ಇದೆಯೊ
ತೊಳೆವ ಬಗೆಯನು ಹೇಳೆಯೊ
ಬರಿಯ ಕಾಲಲಿ ನಡೆದು ಬಂದೆನೊ
ನೊಂದ ಮನದಲಿ ನಿಂದೆನೊ
ಸೋತು ಹೋಗಿಹೆ ಒಲವ ಬಡಿಸೊ
ಬಾಳ ಪಥವನು ಜೋಡಿಸೊ
ಸವೆದ ಜೀವನ ಖುಷಿಯ ನೀಡದೆ
ಮತಿಯು ಚಂಚಲ ಆಗಿದೆ
ಸೇವೆ ಮಾಡುತ ಹರುಷ ಹೊಂದುವೆ
ಕೊನೆಗೆ ಮಡಿಲನು ಸೇರುವೆ
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
